ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವ ಕಪ್(T20 World Cup) ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಒಂದು ವೇಳೆ ಪಾಕಿಸ್ತಾನ ಗೆಲುವು ಸಾಧಿಸಿ ಚಾಂಪಿಯನ್ ಆದರೆ 2048ಕ್ಕೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಪ್ರಧಾನ ಮಂತ್ರಿಯಾಗಲಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಸುನೀಲ್ ಗವಾಸ್ಕರ್ ಹೀಗೆ ಹೇಳಲು ಒಂದು ಕಾರಣವಿದೆ. ಅದೇನೆಂದರೆ. 1992ರ ಏಕ ದಿನ ವಿಶ್ವ ಕಪ್‌ನಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತಂಡವು ಜಯಭೇರಿ ಮೊಳಗಿಸಿತ್ತು. ಇದಾದ 26 ವರ್ಷಗಳ ಬಳಿಕ ಅಂದರೆ 2018ರಲ್ಲಿ ಅವರು ಪಾಕಿಸ್ತಾನದ ಪ‍್ರಧಾನಿಯಾಗಿ ಆಯ್ಕೆಯಾಗಿದ್ದರು. ಇದನ್ನೇ ಹೋಲಿಕೆ ಮಾಡಿ ಸುನೀಲ್ ಗವಾಸ್ಕರ್ ಈ ವಿಚಾರವನ್ನು ಹೇಳಿದ್ದಾರೆ.
ಅಂದಿನ ಪಂದ್ಯಕ್ಕೂ ಈಗಿನ ಪಂದ್ಯಾವಳಿಗೂ ಹಲವು ಸಾಮ್ಯತೆಗಳಿವೆ. ಅಂದು ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಪಾಕಿಸ್ತಾನ ವಿಶ್ವಕಪ್ ಗೆದ್ದಿತ್ತು. ಇಂದು ಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಇಂಗ್ಲೆಂಡ್ ತಂಡವೇ ಎದುರಾಳಿ. ಜತೆಗೆ 1992ರ ವಿಶ್ವ ಕಪ್‌ನಲ್ಲಿ ಪಾಕಿಸ್ತಾನ ಮೆಲ್ಬೋರ್ನ್‌ನಲ್ಲಿಯೇ ಸೋತು ಅಭಿಯಾನ ಆರಂಭಿಸಿತ್ತು. ಈ ವಿಶ್ವ ಕಪ್‌ನಲ್ಲೂ ಅದು ಪುನರಾವರ್ತನೆಯಾಗಿದೆ. ಇದೆಲ್ಲವನ್ನು ಹೋಲಿಕೆ ಮಾಡುವಾಗ ಪಾಕಿಸ್ತಾನ ಮತ್ತೆ ಚಾಂಪಿಯನ್ ಆದರೆ ಬಾಬರ್ ಅಜಂ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಗವಾಸ್ಕರ್ ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ | PAK VS ENG | ಟಿ20 ವಿಶ್ವ ಕಪ್ ಫೈನಲ್ಗೆ ಮಳೆ ಭೀತಿ; ಪಂದ್ಯ ನಡೆಯದಿದ್ದರೆ ಏನು ಗತಿ?