ಮೆಲ್ಬೋರ್ನ್: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಐಸಿಸಿ ಟಿ20 ವಿಶ್ವ ಕಪ್(T20 World Cup) 2022ರ ಆವೃತ್ತಿಗೆ ತೆರೆ ಬಿದ್ದಿದೆ. ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಪಂದ್ಯಾವಳಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ, ಟಿ20 ವಿಶ್ವ ಕಪ್ 2022ರ ಮೌಲ್ಯಯುತ ತಂಡವನ್ನು ಹೆಸರಿಸಿದ್ದು ಟೀಮ್ ಇಂಡಿಯಾದ ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಚಾಂಪಿಯನ್ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಈ ತಂಡಕ್ಕೆ ನಾಯಕನಾಗಿದ್ದಾರೆ.
ವಿರಾಟ್ ಕೊಹ್ಲಿ ಅವರು ಈ ಬಾರಿಯ ಟಿ20 ವಿಶ್ವ ಕಪ್ ಟೂರ್ನಿಯಲ್ಲಿ ನಾಲ್ಕು ಅರ್ಧಶತಕ ಸೇರಿ 98.66ರ ಸರಾಸರಿಯಲ್ಲಿ 296 ರನ್ ಗಳಿಸಿ ಕೂಟದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾನಾಗಿ ಹೊರಹೊಮ್ಮಿದ್ದರು. ಜತೆಗೆ ಸೂರ್ಯ ಕುಮಾರ್ ಯಾದವ್ 239 ರನ್ ಗಳಿಸಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಉಭಯ ಆಟಗಾರರ ಪ್ರದರ್ಶನಕ್ಕೆ ಐಸಿಸಿ, ಮೌಲ್ಯಯುತ ತಂಡದಲ್ಲಿ ಸ್ಥಾನ ನೀಡಿದೆ. ಅಚ್ಚರಿ ಎಂದರೆ ಜಿಂಬಾಬ್ವೆ ತಂಡದ ಸಿಕಂದರ್ ರಾಜಾ ಕೂಡ ಈ ತಂಡದ ಭಾಗವಾಗಿದ್ದಾರೆ. ಉಳಿದಂತೆ ಭಾರತ ತಂಡ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 12ನೇ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ.
ಐಸಿಸಿ ಮೌಲ್ಯಯುತ ತಂಡದ ಪಟ್ಟಿ
ಜೋಸ್ ಬಟ್ಲರ್(ನಾಯಕ), ಅಲೆಕ್ಸ್ ಹೇಲ್ಸ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಗ್ಲೆನ್ ಫಿಲಿಪ್ಸ್, ಸಿಕಂದರ್ ರಾಜಾ, ಶಾದಾಬ್ ಖಾನ್, ಸ್ಯಾಮ್ ಕರನ್, ಅನ್ರಿಚ್ ನೋರ್ಜೆ, ಮಾರ್ಕ್ ವುಡ್, ಶಾಹಿನ್ ಅಫ್ರೀದಿ. 12ನೇ ಆಟಗಾರ: ಹಾರ್ದಿಕ್ ಪಾಂಡ್ಯ