ಅಡಿಲೇಡ್: ಟಿ20 ವಿಶ್ವ ಕಪ್ (T20 World Cup)ನ ಬುಧವಾರದ ಮೊದಲ ಸೂಪರ್-12 ಪಂದ್ಯದಲ್ಲಿ ಜಿಂಬಾಬ್ವೆ ತಂಡದ ವಿರುದ್ಧ ನೆದರ್ಲೆಂಡ್ಸ್ ತಂಡ 5 ವಿಕೆಟ್ ಅಂತರದ ಗೆಲುವು ಸಾಧಿಸಿ ಈ ಬಾರಿಯ ಟಿ20 ವಿಶ್ವ ಕಪ್ ಟೂರ್ನಿಯಲ್ಲಿ ಖಾತೆ ತೆರೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ ತಂಡ 19.2 ಓವರ್ಗಳಲ್ಲಿ 117ಕ್ಕೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ 18 ಓವರ್ಗಳಲ್ಲಿ 5 ವಿಕೆಟ್ಗೆ 120 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಚೇಸಿಂಗ್ ವೇಳೆ ಮ್ಯಾಕ್ಸ್ ಒ’ಡೌಡ್(52) ಮತ್ತು ಟಾಮ್ ಕೂಪರ್ (32) ಉತ್ತಮ ಜತೆಯಾಟ ನಡೆಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 20 ರನ್ಗೆ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆದರೆ ಮಧ್ಯಮ ಕ್ರಮಾಂದಲ್ಲಿ ರಮೀಜ್ ರಾಜಾ(40) ಮತ್ತು ಸೇನ್ ಮಿಲಿಯಮ್ಸ್(28) ಸಂಘಟಿತ ಹೋರಾಟ ನಡೆಸಿದ ಕಾರಣ ತಂಡ ನೂರರ ಗಡಿ ದಾಟಿತು. ಈ ಇಬ್ಬರು ಆಟಗಾರರನ್ನು ಹೊರತು ಪಡಿಸಿ ಉಳಿದ ಯಾವ ಆಟಗಾರರು ಎರಡಂಕಿ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. ನೆದರ್ಲೆಂಡ್ಸ್ ಪರ ವ್ಯಾನ್ ಮಿಕಾರೆನ್ 29ಕ್ಕೆ ಮೂರು ವಿಕೆಟ್ ಕಿತ್ತು ಮಿಂಚಿದರು.
ಸಂಕ್ಷಿಪ್ತ ಸ್ಕೋರ್:
ಜಿಂಬಾಬ್ವೆ: 19.2 ಓವರ್ಗಳಲ್ಲಿ 117ಕ್ಕೆ ಆಲೌಟ್.
ನೆದರ್ಲೆಂಡ್ಸ್: 18 ಓವರ್ಗಳಲ್ಲಿ 5 ವಿಕೆಟ್ಗೆ 120.
ಇದನ್ನೂ ಓದಿ | T20 World Cup | ಟಿ20 ವಿಶ್ವ ಕಪ್ನ ಗ್ರೂಪ್ ಬಿ ತಂಡದ ಸದ್ಯದ ಸೆಮಿಫೈನಲ್ಸ್ ಲೆಕ್ಕಾಚಾರ ಹೀಗಿದೆ