ಮೆಲ್ಬೋರ್ನ್: ಎಂಸಿಜಿ ಕ್ರಿಕೆಟ್ ಮೈದಾನದಲ್ಲಿ ನಡೆಯಬೇಕಿದ್ದ ಅಫಘಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಬುಧವಾರದ ಐಸಿಸಿ ಟಿ20 ವಿಶ್ವ ಕಪ್ ಸೂಪರ್ 12 ಪಂದ್ಯವು ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಇನ್ನೇನು ಟಾಸ್ ಆಗಬಹುದು ಎನ್ನುವಷ್ಟರಲ್ಲಿ ಮತ್ತೆ ಕಾಡಿದ ಮಳೆಯಿಂದ ಪಂದ್ಯವನ್ನು ರದ್ದುಗೊಳಿಸಿ ಇತ್ತಂಡಕ್ಕೂ ತಲಾ ಒಂದು ಅಂಕ ನೀಡಲಾಯಿತು.
ವಿಶ್ವ ಕಪ್ನ ಸೂಪರ್ 12 ಪಂದ್ಯದ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು 89 ರನ್‌ಗಳಿಂದ ಸೋಲಿಸಿರುವ ನ್ಯೂಜಿಲೆಂಡ್ ತಂಡ ಈ ಪಂದ್ಯದಲ್ಲಿಯೂ ಮೇಲುಗೈ ಸಾಧಿಸಿ ಗೆಲುವಿನ ಓಟ ಮುಂದುವರಿಸುವ ಲೆಕ್ಕಾಚಾರದಲ್ಲಿತ್ತು. ಆದರೆ ಮಳೆಯ ಕಾಟದಿಂದಾಗಿ 1 ಅಂಕಕ್ಕೆ ತೃಪ್ತಿ ಪಡುವಂತಾಯಿತು. ಮತ್ತೊಂದೆಡೆ ಶ್ರೀಲಂಕಾ ವಿರುದ್ಧ ಮೊದಲ ಪಂದ್ಯವನ್ನ ಸೋತಿದ್ದ ಅಫಘಾನಿಸ್ತಾನ ತಂಡ ಗೆಲುವಿನ ಖಾತೆ ತೆರೆಯುವ ಯೋಜನೆಯೂ ಮಳೆಗೆ ಕೊಚ್ಚಿ ಹೋಯಿತು. ದಿನದ ಮೊದಲ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿದ ಪರಿಣಾಮ ಇಂಗ್ಲೆಂಡ್ ತಂಡದ ವಿರುದ್ಧ ಐರ್ಲೆಂಡ್ ತಂಡ ಡಕ್ ವರ್ತ್ ಲೂಯಿಸ್ ನಿಯಮದನ್ವಯ 5 ರನ್ ಅಂತರದ ಗೆಲುವು ಸಾಧಿಸಿತು.
ಇದನ್ನೂ ಓದಿ | T20 World Cup | ಮಳೆ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಐರ್ಲೆಂಡ್; ಇಂಗ್ಲೆಂಡ್ ವಿರುದ್ಧ 5 ರನ್ ಜಯ