ಮೆಲ್ಬೋರ್ನ್: ಟಿ20 ವಿಶ್ವ ಕಪ್(T20 World Cup) ಕ್ರಿಕೆಟ್ ಟೂರ್ನಿಗೆ ಮಳೆರಾಯನ ಕಾಟ ಮುಂದುವರಿದಿದ್ದು, ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ 2 ಪಂದ್ಯಗಳು ಟಾಸ್ ಕಾಣದೆ ರದ್ದು ಗೊಂಡಿತು. ದಿನದ ಮೊದಲ ಮುಖಾಮುಖಿ ಅಫಘಾನಿಸ್ತಾನ-ಐರ್ಲೆಂಡ್ ಹಾಗೂ ದ್ವಿತೀಯ ಪಂದ್ಯ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆಯಬೇಕಿತ್ತು. ಆದರೆ ಈ ಪಂದ್ಯಕ್ಕೆ ಮಳೆ ಬಿಡುವು ನೀಡದ ಕಾರಣ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಿ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಿದ್ದಾರೆ.
ಶುಕ್ರವಾರದ 2 ಪಂದ್ಯಗಳು ಮಳೆ ಕಾರಣದಿಂದಾಗಿ ರದ್ದಾಗಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಸೆಮೀಸ್ ಹಂತಕ್ಕೆ ಕಾಲಿಡಲು ಆಸ್ಟ್ರೇಲಿಯಾ ತಂಡಕ್ಕೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿತ್ತು. 3 ಪಂದ್ಯಗಳ ಪೈಕಿ 1ರಲ್ಲಿ ಗೆದ್ದು 1ರಲ್ಲಿ ಸೋತಿರುವ ಆಸ್ಟ್ರೇಲಿಯಾ 3 ಅಂಕದೊಂದಿಗೆ ಎ ಗ್ರೂಪಿನಲ್ಲಿ 4ನೇ ಸ್ಥಾನ ಪಡೆದಿದೆ.
ಇನ್ನೊಂದೆಡೆ ಇಂಗ್ಲೆಂಡ್ ಕೂಡ ತಾನಾಡಿರುವ 3 ಪಂದ್ಯಗಳ ಪೈಕಿ 2 ಸೋತಿದ್ದು, 1 ಪಂದ್ಯದಲ್ಲಿ ಗೆದ್ದಿದೆ. ಆದರೆ ರನ್ರೇಟ್ ಲೆಕ್ಕಾಚಾರದಲ್ಲಿ ಸದ್ಯ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಒಟ್ಟಾರೆ ಸೆಮಿಫೈನಲ್ಗೇರಲು ಹಲವು ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದ ಉಭಯ ತಂಡಗಳ ಯೋಜನೆ ಮಳೆಯಿಂದ ಕೊಚ್ಚಿ ಹೋಗಿದೆ.
ಇದನ್ನೂ ಓದಿ | KL Rahul | ಕೆ.ಎಲ್. ರಾಹುಲ್ ಸತತ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ತಿಳಿಸಿದ ವಾಸಿಂ ಜಾಫರ್