Site icon Vistara News

T20 World Cup: ಟಿ20 ವಿಶ್ವಕಪ್​ನಲ್ಲಿ ರೋಹಿತ್​ ಜತೆ ವಿರಾಟ್​ ಕೊಹ್ಲಿ ಆರಂಭಿಕನಾಗಿ ಕಣಕ್ಕೆ

T20 World Cup

ಮುಂಬಯಿ: ಕೆಲವು ತಿಂಗಳ ಹಿಂದೆ ಟಿ20 ವಿಶ್ವಕಪ್(T20 World Cup)​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿಗೆ ಸ್ಥಾನ ಸಿಗುವುದು ಅನುಮಾನ ಎಂದು ಹೇಳಲಾಗಿತ್ತು. ಇದೀಗ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ(virat kohli) ಮತ್ತು ರೋಹಿತ್​ ಶರ್ಮ(rohit sharma) ಭಾರತದ ಇನಿಂಗ್ಸ್​ ಆರಂಭಿಸಲಿದ್ದಾರೆ ಎಂದು ವರದಿಯಾಗಿದೆ. ದೈನಿಕ್​ ಜಾಗರಣ್​ ವರದಿ ಪ್ರಕಾರ ರೋಹಿತ್​ ಜತೆ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ.

ಟಿ20 ವಿಶ್ವಕಪ್​ ಟೂರ್ನಿಗೆ ತಂಡವನ್ನು ಆಯ್ಕೆ ಮಾಡುವ ಸಲುವಾಗಿ ನಾಯಕ ರೋಹಿತ್​ ಶರ್ಮ, ಕೋಚ್​ ರಾಹುಲ್​ ದ್ರಾವಿಡ್​ ಇಂದು(ಬುಧವಾರ) ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್​ ಅಗರ್ಕರ್​ ಜತೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ರೋಹಿತ್​ ಅವರು ಕೊಹ್ಲಿಯನ್ನು ಆರಂಭಿನಾಗಿ ಆಡಿಸುವ ಬೇಡಿಕೆ ಇರಿಸಿದ್ದಾರೆ ಎಂದು ದೈನಿಕ್​ ಜಾಗರಣ್​ ತನ್ನ ವರದಿಯಲ್ಲಿ ತಿಳಿಸಿದೆ. ಕೊಹ್ಲಿ ಐಪಿಎಲ್​ನಲ್ಲಿ ಆರಂಭಿಕಾಗಿ ಕಣಕ್ಕಿಳಿದು ಉತ್ತಮವಾಗಿ ಆಡುತ್ತಿದ್ದಾರೆ. ಹೀಗಾಗಿ ಅವರನ್ನು ಟಿ20ಯಲ್ಲಿಯೂ ಆರಂಭಿನಾಗಿ ಆಡಿಸಲು ಕೋಚ್​ ಮತ್ತು ನಾಯಕ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಬಳಿಕ ವಿರಾಟ್​ ಕೊಹ್ಲಿ ಭಾರತ ಪರ ಟಿ 20 ಆಡಿದ್ದು ಇದೇ ವರ್ಷಾರಂಭದಲ್ಲಿ ತವರಿನಲ್ಲಿ ನಡೆದ ಅಫಘಾನಿಸ್ತಾನ ವಿರುದ್ಧದ ಸರಣಿಯಲ್ಲಿ. ಆದರೆ ಈ ಸರಣಿಯಲ್ಲಿ ಕೊಹ್ಲಿ ಕೇವಲ 29 ರನ್ ಗಳಿಸಿದ್ದರು. ಹೀಗಾಗಿ ಅವರನ್ನು ಟಿ20 ವಿಶ್ವಕಪ್ ಗೆ ಪರಿಗಣಿಸುವ ಸಾಧ್ಯತೆ ಕಡಿಮೆ ಎನ್ನಲಾಗಿತ್ತು. ಮಾತ್ರವಲ್ಲದೆ ಟಿ20 ವಿಶ್ವಕಪ್ ನಡೆಯುವ ಅಮೆರಿಕ ಮತ್ತು ವಿಂಡೀಸ್​ ಪಿಚ್​ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಾಗಿಲ್ಲ ಎನ್ನುವ ಕಾರಣಕ್ಕೆ ಆಯ್ಕೆ ಸಮಿಯಿ ಅವರನ್ನು ಹೊರಗಿಡುವ ಚಿಂತನೆ ನಡೆಸಿದೆ ಎಂದು ವರದಿಯಾಗಿತ್ತು. ಆದರೆ, ಇದೀಗ ಅವರಿಗೆ ಅವಕಾಶ ಸಿಗಲಿದೆ ಎಂದು ತಿಳಿದುಬಂದಿದೆ.

ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿದೆ. ಇದೇ ಕಾರಣದಿಂದ ಆಯ್ಕೆ ಸಮಿತಿಯು ಭಾರತದ ಮೊದಲ ಸಂಭಾವ್ಯ ತಂಡವನ್ನು ಎಪ್ರಿಲ್‌ ಕೊನೆಯ ವಾರದಲ್ಲಿ ಪ್ರಕಟಿಸಲಿದೆ ಎನ್ನಲಾಗಿದೆ.

ಇದನ್ನೂ ಓದಿ T20 World Cup 2024: ಶೀಘ್ರದಲ್ಲೇ ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಮಾಯಾಂಕ್‌ ಯಾದವ್​ಗೆ ಸ್ಥಾನ ಖಚಿತ

ಈಗಾಗಲೇ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ.

ಭಾರತದ ಪಂದ್ಯಗಳು

ದಿನಾಂಕಎದುರಾಳಿಸ್ಥಳ
ಜೂನ್​ 5ಐರ್ಲೆಂಡ್​ನ್ಯೂಯಾರ್ಕ್​
ಜೂನ್​ 9ಪಾಕಿಸ್ತಾನನ್ಯೂಯಾರ್ಕ್​
ಜೂನ್​ 12ಅಮೆರಿಕನ್ಯೂಯಾರ್ಕ್
ಜೂನ್​ 15ಕೆನಡಾಫ್ಲೋರಿಡಾ
Exit mobile version