Site icon Vistara News

T20 World Cup | ಹೊಡೆಯಲು ಇಷ್ಟ ಇಲ್ಲ ಎಂದ ಮರು ಎಸೆತದಲ್ಲೇ ಔಟಾದ ಸೂರ್ಯಕುಮಾರ್‌ ಯಾದವ್‌!

ICC RANKING

ಬ್ರಿಸ್ಬೇನ್‌ : ಟೀಮ್ ಇಂಡಿಯಾದ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಸೋಮವಾರ ನಡೆದ ಅಭ್ಯಾಸ ಪಂದ್ಯದಲ್ಲಿ ೫೦ ರನ್‌ ಬಾರಿಸಿ ಭಾರತ ತಂಡ ೨೦ ಓವರ್‌ಗಳಲ್ಲಿ ೧೮೬ ರನ್‌ ಪೇರಿಸಲು ನೆರವಾಗಿದ್ದರು. ೩೩ ಎಸೆತಗಳಲ್ಲಿ ೫೦ ರನ್‌ ಬಾರಿಸಿದ್ದ ಸೂರ್ಯಕುಮಾರ್‌ ೬ ಫೋರ್‌ ಹಾಗೂ ಒಂದು ೧ ಸಿಕ್ಸರ್‌ ಬಾರಿಸಿದ್ದರು. ಆದರೆ, ಇನ್ನೇನು ಅರ್ಧ ಶತಕ ಪೂರೈಸಿದ ಬಳಿಕ ಅವರು ಔಟಾದರು. ಆದರೆ, ಅದಕ್ಕಿಂತ ಮೊದಲು ಅವರು ಹೇಳಿದ ಮಾತು ಹಾಗೂ ಔಟಾಗಿರುವುದು ಪರಸ್ಪರ ಪೂರಕವಾಗಿತ್ತು.

ಅರ್ಧ ಶತಕದ ಮೈಲುಗಲ್ಲು ದಾಟಿದ ತಕ್ಷಣ ಸೂರ್ಯಕುಮಾರ್‌ ಯಾದವ್‌ ನಾನ್‌ಸ್ಟ್ರೈಕ್‌ ಎಂಡ್‌ನಲ್ಲಿದ್ದ ಅಕ್ಷರ್ ಪಟೇಲ್ ಬಳಿ, ನನಗೆ ಸಿಕ್ಸರ್, ಫೋರ್‌ ಬಾರಿಸಲು ಇಷ್ಟ ಇಲ್ಲ ಎಂಬುದಾಗಿ ಜೋರಾಗಿ ಹೇಳುತ್ತಾರೆ. ಅಚ್ಚರಿಯೆಂದರೆ ಮುಂದಿನ ಎಸೆತದಲ್ಲಿ ರಿಡರ್ಡ್ಸನ್‌ ಅವರಿಗೆ ರಿಟರ್ನ್‌ ಕ್ಯಾಚ್‌ ನೀಡಿ ಔಟಾಗುತ್ತಾರೆ.

ಅದಕ್ಕಿಂತ ಮೊದಲು ರೋಹಿತ್ ಶರ್ಮ ಔಟಾದ ತಕ್ಷಣ ಕ್ರೀಸ್‌ಗೆ ಇಳಿದಿದ್ದ ಸೂರ್ಯಕುಮಾರ್ ಯಾದವ್‌ ಭರ್ಜರಿಯಾಗಿ ಬ್ಯಾಟ್‌ ಬೀಸಿದ್ದರು. ತಮ್ಮ ಅಸಾಂಪ್ರದಾಯಿಕ ಹೊಡೆತಗಳ ಮೂಲಕ ವಿಶ್ವಾಸ ಮೂಡಿಸಿದರು.

ಇದನ್ನೂ ಓದಿ | T20 World Cup | ಡೈರೆಕ್ಟ್‌ ಹಿಟ್ ರನ್‌ಔಟ್‌, ಒಂದು ಕೈಯಲ್ಲಿ ಕ್ಯಾಚ್‌; ಅಭ್ಯಾಸ ಪಂದ್ಯದಲ್ಲಿ ಕೊಹ್ಲಿಯ ಭರ್ಜರಿ ಫೀಲ್ಡಿಂಗ್‌

Exit mobile version