ಸಿಡ್ನಿ: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ ಟಿ೨೦ ವಿಶ್ವ ಕಪ್(T20 World Cup)ನ ಸೆಮಿಫೈನಲ್ ಪಂದ್ಯಗಳಿಗೆ ಐಸಿಸಿ ಅಂಪೈರ್‌ಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿ ಕಂಡ ಟೀಮ್ ಇಂಡಿಯಾ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದು ರೋಹಿತ್ ಪಡೆಗೆ ಈ ಬಾರಿ ಫೈನಲ್ ಪ್ರವೇಶ ಖಚಿತ ಎಂದಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳು ಗುರುವಾರ(ನವೆಂಬರ್ ೧೦) ಸೆಮಿಫೈನಲ್‌ನಲ್ಲಿ ಸೆಣಸಾಟ ನಡೆಸಲಿದೆ. ಈ ಪಂದ್ಯಕ್ಕೆ ರಿಚರ್ಡ್ ಕೆಟ್ಲಬರೋ ಅಂಪೈರ್ ಆಗದಿರುವುದೇ ಭಾರತದ ಕ್ರಿಕೆಟ್ ಅಭಿಮಾನಗಳ ಸಂತಸಕ್ಕೆ ಕಾರಣ.
ಹೌದು ಐಸಿಸಿ ಕೂಡಗಳಲ್ಲಿ ರಿಚರ್ಡ್ ಕೆಟ್ಲಬರೋ ಟೀಮ್ ಇಂಡಿಯಾ ಪಾಲಿಗೆ ಐರನ್ ಲೆಗ್ ಎನಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ರಿಚರ್ಡ್ ಕೆಟ್ಲಬರೋ ಕಾರ್ಯನಿರ್ವಹಿಸಿದ ಎಲ್ಲ ಮಹತ್ವದ ಪಂದ್ಯದಲ್ಲಿಯೂ ಭಾರತ ತಂಡ ಸೋಲುಕಂಡಿದೆ. ಆದರೆ ಇದೀಗ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಅವರ ಹೆಸರು ಇಲ್ಲದಿರುವುದರಿಂದ ಭಾರತ ಈ ಬಾರಿ ಫೈನಲ್‌ಗೇರುವುದು ಖಚಿತ ಎನ್ನುತ್ತಾರೆ ಅಭಿಮಾನಿಗಳು.
ರಿಚರ್ಡ್ ಕೆಟ್ಲಬರೋ ಅಂಪೈರಿಂಗ್‌ನಲ್ಲಿ ಭಾರತ ಸೋತ ವಿವರ ಇಲ್ಲಿದೆ
2014 ರಿಂದ ರಿಚರ್ಡ್ ಕೆಟ್ಲಬರೋ ಅಂಪೈರಿಂಗ್ ಮಾಡಿದ ಎಲ್ಲ ಪ್ರಮುಖ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ ಸೋಲು ಕಂಡಿದೆ. 2014ರ ಟಿ20 ವಿಶ್ವ ಕಪ್ ಫೈನಲ್, 2015ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2016ರ ಟಿ20 ವಿಶ್ವ ಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2021ರ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಸೋತಿತ್ತು. ಹೀಗಾಗಿ ಭಾರತ ತಂಡ ಆಡುವ ಪ್ರಮುಖ ಪಂದ್ಯಗಳಲ್ಲಿ ಕೆಟ್ಲಬರೋ ಅಂಪೈರ್ ಆದರೆ ಭಾರತ ಸೋಲುವುದು ಖಚಿತ ಎಂಬ ಅಭಿಪ್ರಾಯ ಅಭಿಮಾನಿಗಳದ್ದಾಗಿತ್ತು. ಇದೀಗ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ಗೆ ಅವರ ಗೈರು ಅಭಿಮಾನಿಗಳಿಗೆ ಸಂತಸ ತಂದಿದೆ.
ಇದನ್ನೂ ಓದಿ | T20 World Cup | ತಂಡದ ವೇಗಿಗಳಿಗಾಗಿ ಸೌಹಾರ್ದತೆ ಮೆರೆದ ಕೋಚ್ ದ್ರಾವಿಡ್, ರೋಹಿತ್, ಕೊಹ್ಲಿ