ಮೆಲ್ಬೋರ್ನ್: 2007 ಚೊಚ್ಚಲ ಟಿ20 ವಿಶ್ವ ಕಪ್ (T20 World Cup) ಗೆದ್ದ ಬಳಿಕ ಭಾರತ ಮತ್ತೆ ಕಪ್ ಗೆಲ್ಲದೆ ಬರೋಬ್ಬರಿ 15 ವರ್ಷಗಳೇ ಕಳೆದಿವೆ. ಇದೀಗ ಅಭಿಮಾನಿಗಳ 15 ವರ್ಷಗಳ ಕಾಯುವಿಕೆಯನ್ನು ನನಸು ಮಾಡಲು ಆಸ್ಟ್ರೇಲಿಯಾದಲ್ಲಿರುವ ರೋಹಿತ್ ಸಾರಥ್ಯದ ಟೀಮ್ ಇಂಡಿಯಾದ ವೇಳಾ ಪಟ್ಟಿ ಪ್ರಕಟವಾಗಿದೆ.
ಭಾರತದ ವೇಳಾಪಟ್ಟಿ
ಭಾರತ vs ಆಸ್ಟ್ರೇಲಿಯಾ – 17 ಅಕ್ಟೋಬರ್, (ಅಭ್ಯಾಸ ಪಂದ್ಯ)
ಭಾರತ vs ನ್ಯೂಜಿಲೆಂಡ್ – 19 ಅಕ್ಟೋಬರ್, (ಅಭ್ಯಾಸ ಪಂದ್ಯ)
ಭಾರತ vs ಪಾಕಿಸ್ತಾನ – 23 ಅಕ್ಟೋಬರ್,
ಭಾರತ vs ರನ್ನರ್ ಅಪ್ (ಗುಂಪು A) – 27 ಅಕ್ಟೋಬರ್,
ಭಾರತ vs ದಕ್ಷಿಣ ಆಫ್ರಿಕಾ – 30 ಅಕ್ಟೋಬರ್,
ಭಾರತ vs ಬಾಂಗ್ಲಾದೇಶ – 2 ನವೆಂಬರ್,
ಭಾರತ vs ಬಿ ಗುಂಪಿನ ವಿಜೇತ ತಂಡ – ನವೆಂಬರ್ 6
ಟಿ20 ವಿಶ್ವಕಪ್‌ಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಶಮಿ.
ಮೀಸಲು ಆಟಗಾರರು:
ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯಿ, ಶಾರ್ದೂಲ್ ಠಾಕೂರ್.
ಇದನ್ನೂ ಓದಿ | World Summit | ಕ್ರಿಕೆಟ್ ಹೊರತು ಬೇರೆ ಕ್ರೀಡೆಗಳಿಗೆ ವೀಕ್ಷಕರ ಸೆಳೆಯುವ ಕೆಲಸವಾಗಲಿ: ಕಿರಣ್ ರಿಜಿಜು