Site icon Vistara News

T20 World Cup | ಜಿಂಬಾಬ್ವೆ ವಿರುದ್ಧದ ಸೋಲಿಗೆ ಕಣ್ಣೀರು ಸುರಿಸಿದ ಪಾಕಿಸ್ತಾನ ಕ್ರಿಕೆಟಿಗ

t20

ಪರ್ತ್​: ಟಿ20 ವಿಶ್ವ ಕಪ್(T20 World Cup)​ನ ಗುರುವಾರದ ಸೂಪರ್​-12 ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡ ಜಿಂಬಾಬ್ವೆ ವಿರುದ್ಧ ಒಂದು ರನ್​ ಅಂತರದಲ್ಲಿ ಸೋಲು ಕಂಡಿತ್ತು. ಈ ಸೋಲನ್ನು ಅರಗಿಸಿಕೊಳ್ಳಲಾಗದೆ ಪಾಕ್​ ತಂಡದ ಉಪನಾಯಕ ಶಾದಾಬ್ ಖಾನ್ ನೆಲದ ಮೇಲೆ ಮಂಡಿಯೂರಿ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪರ್ತ್‌ನಲ್ಲಿ ಗುರುವಾರ ನಡೆದ ದಿನದ 3ನೇ ಹಾಗೂ ಅಂತಿಮ ಪಂದ್ಯ ಸಣ್ಣ ಮೊತ್ತದ ಮೇಲಾಟವಾಗಿತ್ತು. ಜಿಂಬಾಬ್ವೆಯನ್ನು 130ಕ್ಕೆ ನಿಯಂತ್ರಿಸಿದ ಪಾಕಿಸ್ತಾನಕ್ಕೆ ಈ ಸಾಮಾನ್ಯ ಮೊತ್ತವನ್ನೂ ಮೀರಿ ನಿಲ್ಲಲು ಸಾಧ್ಯವಾಗಲಿಲ್ಲ. 8 ವಿಕೆಟ್​ ನಷ್ಟಕ್ಕೆ 129 ರನ್‌ ಮಾಡಿ ಮತ್ತೊಮ್ಮೆ ಕೊನೆಯ ಎಸೆತದಲ್ಲಿ ಮುಗ್ಗರಿಸಿತು.

ಕೊನೆಯ 2 ಓವರ್‌ಗಳಲ್ಲಿ 22 ರನ್‌, ಅಂತಿಮ ಓವರ್‌ನಲ್ಲಿ 11 ರನ್‌ ಗಳಿಸಬೇಕಾದ ಸವಾಲು ಪಾಕಿಸ್ತಾನಕ್ಕೆ ಎದುರಾಯಿತು. ಮೊಹಮ್ಮದ್‌ ನವಾಜ್‌, ಮೊಹಮ್ಮದ್‌ ವಾಸಿಮ್‌ ಕ್ರೀಸ್‌ನಲ್ಲಿದ್ದರು. ಎನ್‌ಗರವ ಎಸೆದ 19ನೇ ಓವರ್‌ನಲ್ಲಿ 11 ರನ್‌ ಬಂತು. ಅಂತಿಮ ಓವರ್‌ ಎಸೆಯಲು ಬಂದ ಬ್ರಾಡ್‌ ಇವಾನ್ಸ್‌ ಮೊದಲ 3 ಎಸೆತಗಳಲ್ಲಿ 8 ರನ್‌ ನೀಡಿದರು. ಇಲ್ಲಿಗೆ ಪಾಕ್​ ಗೆಲುವಿನ ಲೆಕ್ಕಾಚಾರ ಸರಳಗೊಂಡಿತು. 3 ಎಸೆತ, 3 ರನ್‌. ಆದರೆ ಕೊನೆಯ 3 ಎಸೆತಗಳಲ್ಲಿ ಪಂದ್ಯದ ಚಿತ್ರಣವೇ ಬದಲಾಯಿತು. 4ನೇ ಎಸೆತ ಡಾಟ್‌ ಬಾಲ್‌. 5ನೇ ಎಸೆತಕ್ಕೆ ನವಾಜ್‌ ಔಟ್‌. ಅಂತಿಮ ಎಸೆತ ಎದುರಿಸಿದ ಅಫ್ರಿದಿ 2ನೇ ರನ್‌ ಗಳಿಸುವ ವೇಳೆ ರನೌಟಾಗಿ ಪಾಕ್​ ಪಲ್ಟಿಯಾಯಿತು.

ಈ ಆಘಾತಕಾರಿ ಸೋಲಿನ ಬಳಿಕ ಕಣ್ಣೀರಿಡುತ್ತಿದ್ದ ಶಾದಾಬ್ ಖಾನ್ ಅವರನ್ನು ತಂಡದ ಸಹಾಯಕ ಸಿಬ್ಬಂದಿಯೊಬ್ಬರು ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಶಾದಾಬ್ ಅವರು ಕಣ್ಣೀರಿಟ್ಟಿರುವ ಈ ವಿಡಿಯೊ ಹಲವು ಪಾಕಿಸ್ತಾನಿ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ಆದ್ಯಾಗೂ ಹಲವರು ಕಣ್ಣೀರು ಹಾಕುವ ಬದಲು ಉತ್ತಮ ಪ್ರದರ್ಶನ ತೋರಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಸಲಹೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ | T20 World Cup | ಪಾಕ್​ಗೆ​ ಎದುರಾದ ಸ್ಥಿತಿ ಭಾರತ ತಂಡಕ್ಕೂ ಎದುರಾಗಲಿದೆ ಅಖ್ತರ್​ ಹೀಗೆ ಹೇಳಿದ್ದು ಯಾಕೆ?

Exit mobile version