Site icon Vistara News

T20 World Cup | ಫೀಲ್ಡಿಂಗ್​ ಮಾಡುವಾಗ ಕಳಚಿತು ಜಿಂಬಾಬ್ವೆ ಆಟಗಾರನ ಪ್ಯಾಂಟ್​!

t20

ಅಡಿಲೇಡ್​: ಟಿ20 ವಿಶ್ವ ಕಪ್​(T20 World Cup)ನ ಬುಧವಾರದ ನೆದರ್ಲೆಂಡ್ಸ್​ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್​ ನಡೆಸುತ್ತಿದ್ದ ಜಿಂಬಾಬ್ವೆ ತಂಡದ ಆಟಗಾರ ಮಿಲ್ಟನ್​ ಶುಂಬಾ ಅವರ ಪ್ಯಾಂಟ್​ ಕಳಚಿದ ಪ್ರಸಂಗ ನಡೆದಿದೆ. ಬೌಂಡರಿ ರೋಪ್​ ಮೇಲೆ ಬಿದ್ದು ಜಾರಿದ ಪರಿಣಾಮ ಶುಂಬಾ ಅವರ ಪ್ಯಾಂಟ್​ ಕಳಚಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಡಿಲೇಡ್​ ಓವಲ್​ ಮೈದಾನದಲ್ಲಿ ನಡೆದ ದಿನದ ಮೊದಲ ಮುಖಾಮುಖಿಯಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಜಿಂಬಾಬ್ವೆ ತಂಡ 19.2 ಓವರ್​ಗಳಲ್ಲಿ 117ಕ್ಕೆ ಆಲೌಟ್​ ಆಯಿತು. ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್​ 18 ಓವರ್​ಗಳಲ್ಲಿ 5 ವಿಕೆಟ್​ಗೆ 120 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಚೇಸಿಂಗ್​ ವೇಳೆ ಮ್ಯಾಕ್ಸ್ ಒ’ಡೌಡ್(52) ಮತ್ತು ಟಾಮ್ ಕೂಪರ್ (32) ಉತ್ತಮ ಜತೆಯಾಟ ನಡೆಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ನೆದರ್ಲೆಂಡ್ಸ್​ ತಂಡದ ಚೇಸಿಂಗ್​ ವೇಳೆ ಮ್ಯಾಕ್ಸ್ ಒ’ಡೌಡ್ ಹೊಡೆದ ಚೆಂಡನ್ನು ಬೌಂಡರಿ ಲೈನ್​ನಲ್ಲಿ ಡೈವಿಂಗ್​ ಮೂಲಕ ಕ್ಯಾಚ್​ ಹಿಡಿಯಲು ಯತ್ನಿಸಿದ ಶುಂಬಾ ಬೌಂಡರಿ ರೋಪ್​ ಮೇಲೆ ಬಿದ್ದ ಪರಿಣಾಮ ಅವರ ಪ್ಯಾಂಡ್​ ಹಗ್ಗಕ್ಕೆ ಸಿಲುಕಿ ಜಾರಿದೆ. ಇದೇ ವಿಡಿಯೊವನ್ನು ಮುಂದಿಟ್ಟು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡಿದ್ದಾರೆ. ಮೊದಲು ಸರಿಯಾಗಿ ಪ್ಯಾಂಟ್​ ಕಟ್ಟಿಕೊಳ್ಳಲು ಕಲಿತುಕೊಳ್ಳಿ ಬಳಿಕ ಕ್ಯಾಚ್​ ಹಿಡಿಯಲು ಪ್ರಯತ್ನ ಮಾಡಿ ಎಂದು ಟ್ರೋಲ್​ ಮಾಡಿದ್ದಾರೆ.

ಇದನ್ನೂ ಓದಿ | Indian 2 Film | ʻಇಂಡಿಯನ್‌ 2ʼ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಖ್ಯಾತ ಕ್ರಿಕೆಟರ್‌ ತಂದೆ, ಯಾರವರು?

Exit mobile version