ಅಡಿಲೇಡ್: ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವ ಕಪ್(T20 World Cup) ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಂಗಳವಾರ ಅಭ್ಯಾಸದ ವೇಳೆ ನಾಯಕ ರೋಹಿತ್ ಗಾಯಗೊಂಡಿದ್ದ್ದದರು. ಇದೀಗ ವಿರಾಟ್ ಕೊಹ್ಲಿಯೂ ಗಾಯಕ್ಕೀಡಾಗಿದ್ದು ಆತಂತ ಸೃಷ್ಟಿಸಿದೆ.
ನೆಟ್ಸ್ನಲ್ಲಿ ಅಭ್ಯಾಸದ ವೇಳೆ ಹರ್ಷಲ್ ಪಟೇಲ್ ಅವರು ಎಸೆದ ಚೆಂಡು ವಿರಾಟ್ ಕೊಹ್ಲಿ ಅವರ ತೊಡೆಸಂದಿಗೆ ಬಡಿದಿದೆ. ನೋವಿನಿಂದ ಕೊಹ್ಲಿ ಮೈದಾನದಲ್ಲೇ ಕುಳಿತು ನರಳಿದರು. ಬಳಿಕ ನೆಟ್ ಅಭ್ಯಾಸವನ್ನು ಮಧ್ಯದಲ್ಲಿ ಬಿಟ್ಟು ಮೈದಾನದಿಂದ ಹೊರನಡೆದಿದ್ದಾರೆ. ಕೊಹ್ಲಿಯ ಗಾಯದ ಪ್ರಮಾಣ ಗಂಭಿರವಾಗಿದೆಯಾ ಎನ್ನುವ ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ. ಟೀಮ್ ಮ್ಯಾನೇಜ್‌ಮೆಂಟ್ ಶೀಘ್ರದಲ್ಲೇ ವಿರಾಟ್ ಕೊಹ್ಲಿಯ ಗಾಯದ ಕುರಿತು ಅಪ್‌ಡೇಟ್ ನೀಡುವ ಸಾಧ್ಯತೆಯಿದೆ.
ವಿರಾಟ್ ಕೊಹ್ಲಿ ಗಾಯಗೊಂಡಿರುವುದು ಭಾರತ ತಂಡಕ್ಕೆ ದೊಡ್ಡ ಹಿನ್ನಡೆ ಎಂದೇ ಹೇಳಬಹುದು. ಈ ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್ ಕೊಹ್ಲಿ. ಟೀಮ್ ಇಂಡಿಯಾ ಕೂಡ ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರದರ್ಶನದಿಂದ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್ ತಲುಪಿತ್ತು. ಇದೀಗ ಪ್ರಮುಖ ಘಟ್ಟದಲ್ಲಿ ಕೊಹ್ಲಿಗೆ ಗಾಯವಾಗಿರುವುದು ತಂಡಕ್ಕೆ ಎಲ್ಲಿಲ್ಲದ ಚಿಂತೆ ಮೂಡಿಸಿದೆ.
ಇದನ್ನೂ ಓದಿ | T20 Ranking | ಸೂರ್ಯ ನಂ.1 ಸ್ಥಾನ ಭದ್ರ, ಟಾಪ್ 10ನಿಂದ ಹೊರಬಿದ್ದ ವಿರಾಟ್ ಕೊಹ್ಲಿ