ಸಿಡ್ನಿ: ಟಿ20 ವಿಶ್ವ ಕಪ್(T20 World Cup )ನ ಸೂಪರ್-12 ಹಂತದ ಪಂದ್ಯಗಳು ಅಂತಿಮ ಘಟಕ್ಕೆ ಬಂದು ನಿಂತಿದೆ. ಈ ನಡುವೆ ಎಲ್ಲ ತಂಡಗಳು ಸೆಮಿಫೈನಲ್ಗೇರುವ ನಿಟ್ಟಿನಲ್ಲಿ ಹಲವು ಲೆಕ್ಕಾಚಾರದಲ್ಲಿ ಆಡತೊಡಗಿವೆ. ಸದ್ಯ ಬಿ ಗ್ರೂಪ್ನ ತಂಡಗಳ ಸ್ಥಿತಿ ಹೇಗಿದೆ ಎಂಬ ಅವಲೋಕನವನ್ನು ಮಾಡಲಾಗಿದೆ. ಅದು ಈ ಕೆಳಗಿನಂತಿದೆ.
ದಕ್ಷಿಣ ಆಫ್ರಿಕಾ ತಂಡ ಮೂರು ಪಂದ್ಯಗಳನ್ನಾಡಿದ್ದು 5 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಜತೆಗೆ ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿವೆ. ಈ ಎರಡು ಪಂದ್ಯದಲ್ಲಿ ಒಂದು ಪಂದ್ಯವನ್ನು ಗೆದ್ದರೂ ದಕ್ಷಿಣ ಆಫ್ರಿಕಾ 7 ಅಂಕದೊಂದಿಗೆ ಸೆಮಿಫೈನಲ್ ಪ್ರವೇಶಿಸಲಿದೆ. ಭಾರತ ತಂಡವೂ ದಕ್ಷಿಣ ಆಫ್ರಿಕಾ ತಂಡದಂತೆ ಎರಡು ಪಂದ್ಯ ಗೆದ್ದು 4 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಭಾರತಕ್ಕೂ ಎರಡು ಪಂದ್ಯಗಳು ಬಾಕಿ ಇದ್ದು ಒಂದರಲ್ಲಿ ಗೆಲುವು ಸಾಧಿಸಿದರೆ ಸಾಕು. ಆರಾಮವಾಗಿ ಸೆಮಿ ಫೈನಲ್ಗೇರಬಹುದು.
ಆರಂಭಿಕ ಎರಡು ಪಂದ್ಯಗಳಲ್ಲಿ ಹಿನಾಯ ಸೋಲು ಕಂಡ ಪಾಕಿಸ್ತಾನ ತಂಡಕ್ಕೂ ಸೆಮಿ ಫೈನಲ್ ಆಸೆ ಇನ್ನೂ ಜೀವಂತವಿದೆ. ಆದರೆ ಕೆಲ ಪವಾಡಗಳು ಇಲ್ಲಿ ಸಂಭವಿಸಬೇಕಿದೆ. ಅದು ಭಾರತ ತಂಡದ ಸೋಲನ್ನು ಪ್ರಾರ್ಥಿಸಬೇಕಿದೆ. ಪಾಕ್ ಸೆಮಿ ಫೈನಲ್ಗೇರಬೇಕಾದರೆ ಮುಂದಿನ ಎಲ್ಲಾ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿಬೇಕಿದೆ. ಅದರಂತೆ ಪಾಕ್ 40 ರನ್ಗಿಂತ ಅಧಿಕ ಹಾಗೂ ಚೇಸಿಂಗ್‌ನಲ್ಲಿ ನಿಗದಿತ ಓವರ್‌ಗಳಿಗಿಂತ ಮೂರು ಓವರ್ ಮೊದಲೇ ಗೆಲುವು ಸಾಧಿಸಬೇಕಿದೆ. ಜತೆಗೆ ಭಾರತ ತಂಡ ಎಲ್ಲ ಪಂದ್ಯ ಸೋಲು ಕಾಣಬೇಕು. ಆದರೆ ಮಾತ್ರ ಪಾಕ್ಗೆ ಒಂದು ಅವಕಾಶವಿದೆ. ಒಟ್ಟಾರೆ ಭಾರತ ತಂಡದ ಸೋಲಿನ ಮೇಲೆ ಪಾಕ್ ಸೆಮೀಸ್ ಭವಿಷ್ಯ ಅಡಗಿದೆ.
ಇದನ್ನೂ ಓದಿ | IND VS BANGLA | ಭಾರತ- ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಮಳೆ ಭೀತಿ ಸಾಧ್ಯತೆ