ಮೆಲ್ಬೋರ್ನ್: ಟಿ20 ವಿಶ್ವ ಕಪ್ ಸಮರ ಮುಕ್ತಾಯ ಕಂಡಿದೆ. ಇಂಗ್ಲೆಂಡ್ ತಂಡ ಪಾಕಿಸ್ತಾನ ತಂಡವನ್ನು ಮಣಿಸಿ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅದರಂತೆ ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿ ಪ್ರಕಟಗೊಂಡಿದ್ದು ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಮೊದಲ ಸ್ಥಾನ ಪಡೆದಿದ್ದಾರೆ. ಉಳಿದ ಆಟಗಾರರ ವಿವರ ಈ ಕೆಳಗಿನಂತಿವೆ.
ಟಾಪ್ 5 ಬೌಲರ್ಗಳ ಪಟ್ಟಿ
ಆಟಗಾರ | ಪಂದ್ಯ | ವಿಕೆಟ್ |
1.ವನಿಂದು ಹಸರಂಗ | 8 | 15 |
2.ಸ್ಯಾಮ್ ಕರನ್ | 6 | 13 |
3.ಬಾಸ್ ಡಿ ಲೀಡೆ | 8 | 13 |
4.ಬ್ಲೆಸಿಂಗ್ ಮುಜರ್ಬಾನಿ | 8 | 12 |
5. ಜೋಶ್ ಲಿಟಲ್ | 8 | 11 |
ವಾನಿಂದು ಹಸರಂಗ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದರೂ ಅವರು ಒಟ್ಟು ೮ ಪಂದ್ಯಗಳಲ್ಲಿ ಆಡಿದ್ದಾರೆ. ಸೂಪರ್ ೧೨ ಹಂತಕ್ಕಿಂತ ಮೊದಲು ನಡೆದ ಮೊದಲ ಸುತ್ತಿನ ಪಂದ್ಯಗಳಲ್ಲಿ ಅವರು ಪಾಲ್ಗೊಂಡಿರುವ ಕಾರಣ ಒಟ್ಟು ವಿಕೆಟ್‌ಗಳ ಸಂಖ್ಯೆ ಹೆಚ್ಚಿದೆ. ಸ್ಯಾಮ್ ಕರನ್ ಅವರು ಸೂಪರ್-೧೨ ಹಂತದ ನಾಲ್ಕು ಪಂದ್ಯಗಳು, ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಆಡಿದ್ದಾರೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ಮಿಂಚಿದ್ದರು.
ಇದನ್ನೂ ಓದಿ | T20 World Cup | ಪಾಕಿಸ್ತಾನ ತಂಡವನ್ನು ಮಣಿಸಿದ ಇಂಗ್ಲೆಂಡ್ ಟಿ20 ವಿಶ್ವ ಚಾಂಪಿಯನ್