Site icon Vistara News

T20 World Cup | ಸೆಮಿಫೈನಲ್‌ ಪ್ರವೇಶಕ್ಕೆ ಇಂದು ಬಿಗ್‌ ಫೈಟ್‌; ಯಾರಿಗೆ ಒಲಿಯಲಿದೆ ಅದೃಷ್ಟ?

icc world cup

ಮೆಲ್ಬೋರ್ನ್‌: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ಕ್ರಿಕೆಟ್‌ ವಿಶ್ವ ಕಪ್‌(T20 World Cup) ಸಮರ ಮುಕ್ತಾಯದ ಹಂತಕ್ಕೆ ತಲುಪಿದ್ದು ‘ಎ’ ಗುಂಪಿನಿಂದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ ತಂಡಗಳು ಈಗಾಗಲೆ ಸೆಮಿ ಫೈನಲ್‌ ತಲುಪಿವೆ ಆದರೆ, ‘ಬಿ’ ಗುಂಪಿನಿಂದ ಯಾವುದೇ ತಂಡ ಈವರೆಗೆ ನಾಕೌಟ್‌ ಟಿಕೆಟ್‌ ಗಿಟ್ಟಿಸಿಕೊಂಡಿಲ್ಲ. ಇದೀಗ ಭಾನುವಾರ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

‘ಸೂಪರ್‌ 12’ ಹಂತದಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಮತ್ತು ಒಂದು ಸೋಲು ಕಂಡಿರುವ ಭಾರತ ‘ಬಿ’ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ನಾಲ್ಕು ಪಂದ್ಯಗಳಲ್ಲಿ 2 ಜಯ ಮತ್ತು ಒಂದು ಸೋಲು ಕಂಡಿದ್ದು ಒಟ್ಟು 5 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಸೋಲು ಮತ್ತು 2 ಗೆಲುವಿನೊಂದಿಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ನಾಲ್ಕು ತಂಡಕ್ಕಿದೆ ಸೆಮಿಫೈನಲ್‌ಗೇರುವ ಅವಕಾಶ

ದಕ್ಷಿಣ ಆಫ್ರಿಕಾ ತನ್ನ ಮುಂದಿನ ಪಂದ್ಯದಲ್ಲಿ ನೆದಲೆಂಡ್ಸ್‌ ವಿರುದ್ಧ ಆಡಲಿದೆ. ಇಲ್ಲಿ ಜಯ ಗಳಿಸಿದರೆ ನೇರವಾಗಿ ಸೆಮಿಗೆ ಪ್ರವೇಶ ಪಡೆಯಲಿದೆ. ಹೀಗಾದರೆ, ಭಾರತ ತಂಡ ಜಿಂಬಾಬ್ವೆ ವಿರುದ್ಧ ಗೆಲ್ಲಲೇಬೇಕಾದ ಸ್ಥಿತಿಗೆ ಎದುರಾಗುತ್ತದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ತಂಡ ನೆದಲೆಂಡ್ಸ್‌ ವಿರುದ್ಧ ಸೋತರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಸೆಮಿಫೈನಲ್‌ಗೇರುವ ಅವಕಾಶವಿದೆ. ಹೀಗಾಗಿ ಹಲವು ಲೆಕ್ಕಾಚಾರದ ಮೂಲಕ ನಾಲ್ಕು ತಂಡಕ್ಕೂ ಸೆಮಿ ಫೈನಲ್‌ಗೇರುವ ಅವಕಾಶವಿದೆ. ಒಂದೊಮ್ಮೆ ಭಾರತ ಮತ್ತು ದಕ್ಷಿಣ ಆಫ್ರಿಕಾ ಗೆದ್ದರೆ ಆಗ ಬಾಂಗ್ಲಾ ಮತ್ತು ಪಾಕಿಸ್ತಾನ ತಂಡ ಕೂಟದಿಂದ ನಿರ್ಗಮಿಸಲಿದೆ. ಒಟ್ಟಾರೆ ಭಾನುವಾರದ ಈ ಮೂರೂ ಪಂದ್ಯಗಳ ಆರಂಭಕ್ಕೂ ಮುನ್ನವೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ |T20 World Cup | ಲಂಕಾ ವಿರುದ್ಧ ಇಂಗ್ಲೆಂಡ್‌ಗೆ ಜಯ; ಆಸ್ಟ್ರೇಲಿಯಾ ಸೆಮೀಸ್ ಕನಸು ಮಾಯ

Exit mobile version