Site icon Vistara News

Taipei Open 2023: ಕ್ವಾರ್ಟರ್‌ ಫೈನಲ್​ಗೆ ಲಗ್ಗೆಯಿಟ್ಟ ಎಚ್‌.ಎಸ್‌. ಪ್ರಣಯ್‌

taipei open

ತೈಪೆ: ಇಲ್ಲಿ ನಡೆಯುತ್ತಿರುವ ತೈಪೆ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌(Taipei Open 2023) ಟೂರ್ನಿಯಲ್ಲಿ ಭಾರತದ ಖ್ಯಾತ ಶಟ್ಲರ್‌ ಎಚ್‌.ಎಸ್‌. ಪ್ರಣಯ್‌(HS Prannoy) ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ಪ್ರಣಯ್‌ ಹಾಂಕಾಂಗ್‌ನ ಐದನೇ ಶ್ರೇಯಾಂಕದ ಆಯಂಗಸ್‌ ಎನ್‌ಜಿ ಕಾ ಲಾಂಗ್‌ ಅವರನ್ನು ಎದುರಿಸಲಿದ್ದಾರೆ. ಪ್ರಣಯ್‌ ಟೂರ್ನಿಯಲ್ಲಿ ಉಳಿದರುವ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ.

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಪ್ರಣಯ್​ ಅವರು ಇಂಡೋನೇಷ್ಯಾದ ಟಾಮಿ ಸುಗಿಯಾತೊ(Tommy Sugiarto) ಅವರನ್ನು 21-9, 21-17 ಗೇಮ್‌ಗಳಿಂದ ಕೆಡವಿದರು. ಉಭಯ ಆಟಗಾರರ ಈ ಹೋರಾಟ ಅತ್ಯಂತ ನೀರಸವಾಗಿ ಸಾಗಿಸುತು. ಪಂದ್ಯ ಕೇವಲ 36 ನಿಮಿಷಗಳಲ್ಲಿ ಅಂತ್ಯ ಕಂಡಿತು. ಟಾಮಿ ಅವರು ಭಾರತೀಯ ಆಟಗಾರನಿಗೆ ಯಾವುದೇ ಹಂತದಲ್ಲಿಯೂ ಪ್ರತಿರೋಧ ನೀಡಲು ಸಾಧ್ಯವಾಲೇ ಇಲ್ಲ.

ಉತ್ತಮ ಫಾರ್ಮ್​ನಲ್ಲಿ ಪ್ರಣಯ್​

ಇತ್ತೀಚೆಗಿನ ದಿನಗಳಲ್ಲಿ ಪ್ರಣಯ್​ ಅವರು ಉತ್ತಮ ಫಾರ್ಮ್​ನಲ್ಲಿದ್ದಾರೆ. ಕಳೆದ ವಾರ ನಡೆದ ಇಂಡೋನೇಷ್ಯಾ ಓಪನ್‌ ಸೂಪರ್‌ 1000 ಕೂಟದಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಅವರು ಸೆಮಿಫೈನಲ್‌ ತಲುಪಿದ ಸಾಧನೆ ಮಾಡಿದ್ದರು. ಆದರೆ ಅಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ ಅವರಿಗೆ ಶರಣಾಗಿದ್ದರು. ಇದಕ್ಕೂ ಮುನ್ನ ಕಳೆದ ತಿಂಗಳು ನಡೆದಿದ್ದ ಮಲೇಷ್ಯಾ ಮಾಸ್ಟರ್ ಸೂಪರ್‌ 300 ಟೂರ್ನಿಯಲ್ಲಿ ಪ್ರಣಯ್​ ಚಾಂಪಿಯನ್​ ಪಟ್ಟ ಅಲಂಕರಿಸಿದ್ದರು. ಉತ್ತಮ ನಿರ್ವಹಣೆ ತೋರುತ್ತಿರುವ ಅವರ ಮೇಲೆ ಈ ಟೂರ್ನಿಯಲ್ಲಿ ಪದಕ ಭರವಸೆಯೊಂದನ್ನು ಇಡಲಾಗಿದೆ.

ಇದನ್ನೂ ಓದಿ Heart Attack: ಬ್ಯಾಡ್ಮಿಂಟನ್‌ ಆಡುತ್ತಿದ್ದವನ ಬಾಳಲ್ಲಿ ಆಟವಾಡಿದ ವಿಧಿ; ಹೃದಯಾಘಾತದಿಂದ ಸಾವು

ಇದೇ ಟೂರ್ನಿಯಲ್ಲಿ ಪಾರುಪಳ್ಳಿ ಕಶ್ಯಪ್‌ ಸ್ಥಳೀಯ ಆಟಗಾರ ಸು ಲೀ ಯಾಂಗ್‌ ವಿರುದ್ಧ 16-21, 17-21 ಗೇಮ್‌ಗಳಿಂದ ಸೋಲು ಕಂಡು ನಿರಾಸೆ ಮೂಡಿಸಿದರು. ಮಿಕ್ಸೆಡ್‌ ಡಬಲ್ಸ್‌ನಲ್ಲಿ ಸಿಕ್ಕಿ ರೆಡ್ಡಿ ಮತ್ತು ರೋಹನ್‌ ಕಪೂರ್‌ ಕೂಡ ಸೋಲು ಕಂಡಿದ್ದಾರೆ. ಈ ಜೋಡಿ ತೈಪೆಯ ಚಿಯು ಸಿಯಾಂಗ್‌ ಚೀಹ್‌- ಲಿನ್‌ ಕ್ಸಿಯಾವೊ ಮಿನ್‌ ಎದುರು 13-21, 18-21 ಗೇಮ್‌ಗಳಿಂದ ಪರಾಭವಗೊಂಡರು. ತನ್ಯಾ ಕಾಮತ್‌(Tanya Kamath) ಕೂಡ ವಿಶ್ವ ಚಾಂಪಿಯನ್‌ಶಿಪ್‌ ಮತ್ತು ಒಲಿಂಪಿಕ್‌ ಬೆಳ್ಳಿ ವಿಜೇತೆ ತೈ ಟಿಝು ಯಿಂಗ್‌ ಸೋತು ಟೂರ್ನಿಯಿಂದ ಹೊರಬಿದ್ದರು.

Exit mobile version