Site icon Vistara News

Tamim Iqbal: ಪ್ರಧಾನಿ ಶೇಖ್ ಹಸೀನಾ ಮನವೊಲಿಕೆಗೆ ಮಣಿದು ನಿವೃತ್ತಿ ನಿರ್ಧಾರದಿಂದ ಯೂ-ಟರ್ನ್ ಹೊಡೆದ ತಮೀಮ್ ಇಕ್ಬಾಲ್

Tamim Iqbal withdraws decision to retire

ಚಿತ್ತಗಾಂಗ್​: ಗುರುವಾರವಷ್ಟೇ ಕಣ್ಣೀರಿಡುತ್ತ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಬಾಂಗ್ಲಾದೇಶದ ಸೀಮಿತ ಓವರ್​ಗಳ ನಾಯಕ ತಮೀಮ್ ಇಕ್ಬಾಲ್ (Tamim Iqbal)ಯೂ-ಟರ್ನ್​ ಹೊಡೆದಿದ್ದಾರೆ. ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ವಾಪಾಸ್​ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ(PM Sheikh Hasina) ಅವರ ಮನವೊಲಿಕೆಗೆ ಮಣಿದು ತಮೀಮ್ ಇಕ್ಬಾಲ್ ಅವರು ನಿವೃತ್ತಿ ನಿರ್ಧಾರವನ್ನು ಹಿಂದೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಫಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಸೋತ ಬಳಿಕ ತಮೀಮ್ ಇಕ್ಬಾಲ್ ವಿರುದ್ಧ ಟೀಕೆಗಳು ಕೇಳಿಬಂದಿತ್ತು. ಇದಾದ ಮರುದಿನ ಅಂದರೆ ಗುರುವಾರ ಅವರು ದಿಢೀರ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಮಾಧ್ಯಮದ ಮುಂದೆ ಕಣ್ಣೀರಿಡುತ್ತಲೇ ತಕ್ಷಣಕ್ಕೆ ಜಾರಿಗೆ ಬರುವಂತೆ ವಿದಾಯ ಘೋಷಿಸುತ್ತೇನೆ ಎಂದು ಹೇಳಿದ್ದರು. ಏಕದಿನ ವಿಶ್ವ ಕಪ್​ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೆ ಅವರ ಈ ನೀವೃತ್ತಿ ನಿರ್ಧಾರ ಬಾಂಗ್ಲಾ ತಂಡಕ್ಕೆ ಆಘಾತ ತಂದಿತ್ತು. ಆದರೆ ಇದೀಗ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಮಧ್ಯಸ್ಥಿಕೆ ವಹಿಸಿ ತಮೀಮ್ ಇಕ್ಬಾಲ್ ಅವರ ನಿವೃತ್ತಿ ನಿಧಾರವನ್ನು ವಾಪಾಸ್​ ಪಡೆಯುವಂತೆ ಮನವೊಳಿಸಿದ್ದು, ತಮೀಮ್ ಅವರು ದೇಶದ ಪ್ರಧಾನಿಯ ಅವರ ಮಾತಿಗೆ ಬೆಲೆ ಕೊಟ್ಟು ತಮ್ಮ ನಿವೃತ್ತಿಯನ್ನು ಹಿಂಪಡೆದಿದ್ದಾರೆ ಎನ್ನಲಾಗಿದೆ.

ತಮೀಮ್ ಇಕ್ಬಾಲ್ ಅವರು ನಿವೃತ್ತಿ ನೀಡಿದ ಹಿನ್ನಲೆ ಅಫಘಾನಿಸ್ತಾನದ ವಿರುದ್ಧ ಉಳಿದಿರುವ ಎರಡು ಏಕದಿನ ಪಂದ್ಯಕ್ಕೆ ಶುಕ್ರವಾರ ಲಿಟ್ಟನ್​ ದಾಸ್​ ಅವರನ್ನು ನಾಯಕನಾಗಿ ನೇಮಕ ಮಾಡಲಾಗಿದೆ. ಇದೀಗ ತಮೀಮ್ ಇಕ್ಬಾಲ್ ಅವರು ಮತ್ತೆ ಬಾಂಗ್ಲಾ ತಮಡಕ್ಕೆ ಮರಳಲಿದ್ದಾರೆ. ಆದರೆ ಅವರು ಅಘಫಾನಿಸ್ತಾನ ಆಡಲಿದ್ದಾರಾ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ Tamim Iqbal: ಕಣ್ಣೀರು ಸುರಿಸುತ್ತಲೇ ಕ್ರಿಕೆಟ್​ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್

“ಅಫಘಾನಿಸ್ತಾನ ವಿರುದ್ಧದ ಪಂದ್ಯವೇ ನನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ನಾನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ. ಇದು ಹಠಾತ್ ನಿರ್ಧಾರವಲ್ಲ. ಈ ಬಗ್ಗೆ ಯೋಚಿಸಿಯೇ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ನಾನು ನನ್ನ ಕುಟುಂಬದೊಂದಿಗೆ ಮಾತನಾಡಿದ್ದೇನೆ. ಕ್ರಿಕೆಟ್‌ ನಿಂದ ನಿವೃತ್ತಿಯಾದ ನಂತರ, ನಾನು ನನ್ನ ಪ್ರೀತಿಪಾತ್ರರ ಜತೆ ಹೆಚ್ಚು ಸಮಯ ಕಳೆಯುತ್ತಿದ್ದೇನೆ. ಭವಿಷ್ಯದಲ್ಲಿ ಇದನ್ನು ಹೆಚ್ಚು ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ತಮೀಮ್ ಗದ್ಗದಿತರಾಗಿದ್ದರು.

2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಇಕ್ಬಾಲ್​ 2007ರ ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಅರ್ಧಶತಕ ಸಿಡಿಸಿ ತಂಡದ ಐತಿಹಾಸಿಕ ಜಯಕ್ಕೆ ಕಾರಣರಾಗಿದ್ದರು. ಬಾಂಗ್ಲಾ ವಿರುದ್ಧ ಸೋತ ಭಾರತ ಕೂಟದಿಂದ ಹೊರಬಿದ್ದಿತ್ತು. ಒಟ್ಟಾರೆ ಅವರು ಬಾಂಗ್ಲಾ ಪರ 69 ಟೆಸ್ಟ್ ಪಂದ್ಯಗಳಲ್ಲಿ 5082 ರನ್, 238 ಏಕದಿನ ಪಂದ್ಯಗಳಲ್ಲಿ 8224 ರನ್ ಮತ್ತು 78 ಟಿ20 ಪಂದ್ಯಗಳಲ್ಲಿ 1758 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಒಟ್ಟು 25 ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್​ನಲ್ಲಿ 10, ಏಕದಿನದಲ್ಲಿ 14, ಟಿ20ಯಲ್ಲಿ 1 ಶತಕ ಬಾರಿಸಿದ್ದಾರೆ.

Exit mobile version