Site icon Vistara News

Team India | ಬ್ಯಾಗ್‌ ಕಳುವಾದರೂ ಪ್ರತಿಕ್ರಿಯಿಸದ ಮ್ಯಾರಿಯೆಟ್‌ ಹೋಟೆಲ್‌ ಬಗ್ಗೆ ತಾನಿಯಾ ಬೇಸರ

Team India

ನವ ದೆಹಲಿ : ತಮಗೆ ಸೇರಿದ ಅಮೂಲ್ಯ ವಸ್ತುಗಳು ಕಳ್ಳತನವಾಗಿದ್ದರೂ ಸರಿಯಾಗಿ ಪ್ರತಿಕ್ರಿಯೆ ಕೊಡದ ಮ್ಯಾರಿಯೆಟ್‌ ಹೋಟೆಲ್‌ ವಿರುದ್ಧ ಭಾರತ ಮಹಿಳೆಯರ ತಂಡದ ಆಟಗಾರ್ತಿ ತಾನಿಯಾ ಭಾಟಿಯಾ ಬೇಸರ ವ್ಯಕ್ತಪಡಿಸಿದ್ದಾರೆ. ಲಂಡನ್‌ ಪ್ರವಾಸದ ವೇಳೆ ಅವರು ತಂಗಿದ್ದ ಹೋಟೆಲ್‌ನಲ್ಲಿ ಕಳ್ಳತನವಾಗಿತ್ತು.

ಕೆಲವು ದಿನಗಳ ಹಿಂದೆ ಭಾರತ ಮಹಿಳೆಯರ ತಂಡ ಇಂಗ್ಲೆಂಡ್‌ ಪ್ರವಾಸ ಮಾಡಿತ್ತು. ಆ ಪ್ರವಾಸದ ವೇಳೆ ತಾನಿಯಾ ಭಾಟಿಯಾ ಅವರ ಬ್ಯಾಗ್‌ ಅನ್ನು ಹೋಟೆಲ್‌ ರೂಮ್‌ನಿಂದ ದರೋಡೆ ಮಾಡಲಾಗಿತ್ತು. ಅದರಲ್ಲಿ ಆಭರಣ, ಕಾರ್ಡ್‌ ಹಾಗೂ ನಗದು ಇತ್ತು. ಈ ಕುರಿತು ಟ್ವೀಟ್ ಮಾಡಿದ ತಾನಿಯಾ, ಹೋಟೆಲ್‌ ಹಾಗೂ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯ ನೆರವು ಕೋರಿತ್ತು. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ತಾನಿಯಾ ಭೇಟಿ ಬೇಸರಗೊಂಡಿದ್ದಾರೆ.

“ಮ್ಯಾರಿಯೆಟ್ ಹೋಟೆಲ್‌ನ ಆಡಳಿತ ಮಂಡಳಿಯಿಂದ ನನಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದು ಅತ್ಯಂತ ನಿರಾಸೆಯ ವಿಷಯ. ನನ್ನ ಹೋಟೆಲ್‌ನಿಂದ ಕಳ್ಳತನವಾಗಿರುವ ವಸ್ತುಗಳು ಅತ್ಯಂತ ಅಮೂಲ್ಯ ಹಾಗೂ ನನಗೆ ಅಗತ್ಯವಾಗಿದ್ದವು. ಈ ಬಗ್ಗೆ ಏನಾದರೂ ಕ್ರಮಕೈಗೊಂಡಿದ್ದಾರೋ. ಏನಾದರೂ ಮಾಡಿದರೆ ನನಗೆ ಉಪಕಾರವಾಗುತ್ತಿತ್ತು,” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Team India | ಸರಣಿ ಗೆದ್ದ ಭಾರತ ಮಹಿಳೆಯರ ತಂಡದ ಸದಸ್ಯರ ಹೋಟೆಲ್‌ ರೂಮ್‌ನಲ್ಲಿ ಹಣ ಕದ್ದ ಖದೀಮರು

Exit mobile version