Site icon Vistara News

Tanmay | ಶಾಲಾ ಮಟ್ಟದ ಕ್ರಿಕೆಟ್​ ಪಂದ್ಯದಲ್ಲಿ ಬರೋಬ್ಬರಿ 401 ರನ್​ ಪೇರಿಸಿ ಗಮನ ಸೆಳೆದ 13 ವರ್ಷದ ಪೋರ ತನ್ಮಯ್​ ಸಿಂಗ್!

Tanmay

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಟಗಾರಾದ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರು ಶಾಲಾ ಮಟ್ಟದ ಕ್ರಿಕೆಟ್ ಪಂದ್ಯದಲ್ಲಿ ಹಲವಾರು ಐತಿಹಾಸಿಕ ಇನಿಂಗ್ಸ್‌ ಆಡಿ ಹೆಸರು ಮಾಡಿದ್ದರು. ಇದೀಗ ಈ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಕೇಲವ 13 ವಯಸ್ಸಿನ ತನ್ಮಯ್​ ಸಿಂಗ್​, 14 ವರ್ಷದೊಳಗಿನವರ ಟೂರ್ನಿಯಲ್ಲಿ ದಾಖಲೆಯ ಇನಿಂಗ್ಸ್​ ಆಡುವ ಮೂಲಕ ಎಲ್ಲಡೆ ಸುದ್ದಿಯಾಗಿದ್ದಾರೆ.

ಗ್ರೇಟರ್ ನೋಯ್ಡಾದ ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದೇವರಾಜ್ ಸ್ಪೋರ್ಟ್ಸ್ ಕ್ಲಬ್ ಹಾಗೂ ರಿಯಾನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ದೇವರಾಜ್ ಸ್ಪೋರ್ಟ್ಸ್ ಕ್ಲಬ್ ಪರ ಕಣಕ್ಕಿಳಿದಿದ್ದ ತನ್ಮಯ್ ಅದ್ಭುತ ಬ್ಯಾಟಿಂಗ್​ ಮೂಲಕ ಬರೋಬ್ಬರಿ 401 ರನ್​ ಪೇರಿಸಿದ್ದಾನೆ. ಈ ಇನಿಂಗ್ಸ್​ ವೇಳೆ 38 ಸಿಕ್ಸರ್‌ ಹಾಗೂ 30 ಬೌಂಡರಿ ಸಿಡಿಯಲ್ಪಟ್ಟಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ದೇವರಾಜ್ ಸ್ಪೋರ್ಟ್ಸ್ ಕ್ಲಬ್ ಪರ ತನ್ಮಯ್ ಸಿಂಗ್ ಬಿರುಸಿನ ಬ್ಯಾಟಿಂಗ್​ ನಡೆಸಿದರು. ಈ ಪಂದ್ಯದಲ್ಲಿ ಕೇವಲ 132 ಎಸೆತಗಳನ್ನು ಎದುರಿಸಿದ ತನ್ಮಯ್ 38 ಸಿಕ್ಸರ್‌ ಹಾಗೂ 30 ಬೌಂಡರಿಗಳ ಸಹಿತ ಬರೋಬ್ಬರಿ 401 ರನ್ ಬಾರಿಸಿದರು. ಅದರಲ್ಲೂ ತನ್ಮಯ್ ಕೇವಲ ಸಿಕ್ಸರ್‌ಗಳೊಂದಿಗೆ 226 ರನ್ ಮತ್ತು ಕೇವಲ ಬೌಂಡರಿಗಳೊಂದಿಗೆ 120 ರನ್ ಗಳಿಸಿದರು. ತಂಡದ ಮತೊಬ್ಬ ಯುವ ಆಟಗಾರ ರುದ್ರ ಬಿಧುರಿ 15 ಸಿಕ್ಸರ್‌ ಮತ್ತು ಐದು ಬೌಂಡರಿ ಸಹಿತ ಅಜೇಯ 135 ರನ್ ಬಾರಿಸಿ ಮಿಂಚಿದರು.

ತನ್ಮಯ್ ಮತ್ತು ರುದ್ರ ಬಿಧುರಿ ಬ್ಯಾಟಿಂಗ್ ನೆರವಿನಿಂದ ದೇವರಾಜ್ ಸ್ಪೋರ್ಟ್ಸ್ ಕ್ಲಬ್ 656 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಈ ಬೃಹತ್ ಮೊತ್ತತ ಗುರಿ ಬೆನ್ನಟ್ಟಿದ ರಿಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ತಂಡವೂ ಕೇವಲ 193 ರನ್ ಸರ್ವಪತನ ಕಂಡಿತು. ವರಾಜ್ ಸ್ಪೋರ್ಟ್ಸ್ ಕ್ಲಬ್ 463 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಇದನ್ನೂ ಓದಿ | INDvsAUS W | ಕೊನೇ ಪಂದ್ಯದಲ್ಲೂ ಭಾರತದ ವನಿತೆಯರಿಗೆ ಸೋಲು

Exit mobile version