Site icon Vistara News

ICC World Cup 2023 : ವಿಶ್ವ ಕಪ್​ ಆಡುವ ಆಸ್ಟ್ರೇಲಿಯಾ ತಂಡದ ಬಲಾಬಲದ ಕುರಿತ ವಿವರಣೆ ಇಲ್ಲಿದೆ

Australia Cricket Team

ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಅತ್ಯಂತ ಯಶಸ್ವಿ ತಂಡ ಆಸ್ಟ್ರೇಲಿಯಾ. ಈ ತಂಡದ ಹ್ಯಾಟ್ರಿಕ್​ ಸೇರಿದಂತೆ ಐದು ಬಾರಿ ಟ್ರೋಫಿ ಗೆದ್ದಿದೆ. ಅದೇ ಹುಮ್ಮಸ್ಸಿನೊಂದಿಗೆ ವಿಶ್ವ ಕಪ್​ಗಾಗಿ (ICC World Cup 2023) ಭಾರತಕ್ಕೆ ಬಂದಿಳಿದಿದೆ. ಅಕ್ಟೋಬರ್​ 7ರಂದು ನಡೆಯುವ ಪಂದ್ಯದಲ್ಲಿ ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಸೆಣಸಾಡಲಿದೆ. ವಿಶ್ವ ಕಪ್​ಗಿಂತ ಮೊದಲು ನಡೆದ ಏಕ ದಿನ ಸರಣಿಯಲ್ಲಿ ಭಾರತ ವಿರುದ್ದ1-2 ಅಂತರದ ಸೋಲು ಅನುಭವಿಸಿದೆ. ಆದರೆ, ಕೊನೇ ಪಂದ್ಯದಲ್ಲಿ ಗಳಿಸಿರುವ 66 ರನ್​ಗಳು ಗೆಲುವು ಆತ್ಮ ವಿಶ್ವಾಸ ಹೆಚ್ಚಿಸಿದೆ.

ಗಾಯದ ಸಮಸ್ಯೆಯಿಂದಾಗಿ ಈ ವರ್ಷದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ಗಾಗಿ ಆಸ್ಟ್ರೇಲಿಯಾ ತಂಡದಲ್ಲಿ ತಡವಾಗಿ ಬದಲಾವಣೆ ಮಾಡಲಾಗಿದೆ. ಅನುಭವಿ ಸ್ಪಿನ್ನರ್ ಆಸ್ಟನ್​ ಅಗರ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಮರ್ನಸ್ ಲಾಬುಶೇನ್ ಅವರನ್ನು ಮೂಲತಃ ಪಂದ್ಯಾವಳಿಯ ಆಸ್ಟ್ರೇಲಿಯಾದ ಪ್ರಾಥಮಿಕ ತಂಡದಿಂದ ಕೈಬಿಡಲಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ಮತ್ತು ಭಾರತದ ವಿರುದ್ಧದ ಸರಣಿಯಲ್ಲಿ ಅವರ ಪ್ರದರ್ಶನ ಅವರನ್ನು ತಂಡಕ್ಕೆ ಸೇರಿಸುವಂತೆ ಮಾಡಿದೆ.

ಇದನ್ನೂ ಓದಿ : World Cup History: 2011ರ ವಿಶ್ವಕಪ್‌; ಛಲದಂಕಮಲ್ಲ ಧೋನಿ ಬಳಗ ಜಗದಂಕಮಲ್ಲ ಆಗಿದ್ದು ಹೀಗೆ…

ಆಸ್ಟ್ರೇಲಿಯಾ ತನ್ನ ತಂಡದಲ್ಲಿ ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಲು ನಿರ್ಧರಿಸುವ ಸಾಧ್ಯತೆಗಳಿವೆ. ಎಡಗೈ ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್ ಕೈ ಮುರಿತದಿಂದಾಗಿ ಪಂದ್ಯಾವಳಿಯ ಆರಂಭಿಕ ಭಾಗಕ್ಕೆ ಲಭ್ಯವಿರುವುದಿಲ್ಲ ಹೀಗಾಗಿ ಲಾಬುಶೇನ್ ಅವಕಾಶ ಪಡೆಯಬಹುದು.

ಕಳೆದ 12 ತಿಂಗಳಲ್ಲಿ ಆಸ್ಟ್ರೇಲಿಯಾದ ಏಕದಿನ ಸಾಧನೆ

‘ಆಸ್ಟ್ರೇಲಿಯಾ’ ಎಂಬ ಹೆಸರನ್ನು ಹೇಳಿದಾಗ ಎದುರಾಳಿ ತಂಡಗಳು ನಡುಗುವ ಪರಿಸ್ಥಿತಿ ಇಲ್ಲ. ಆದರೆ ಆಸ್ಟ್ರೇಲಿಯಾ ತಂಡ ಖಂಡಿತವಾಗಿಯೂ ಫೈನಲ್​ ತನಕ ಹೋಗುವ ಸಾಮರ್ಥ್ಯ ಹೊಂದಿದೆ. ಕಳೆದ 12 ತಿಂಗಳುಗಳು ಆಸ್ಟ್ರೇಲಿಯಾದ ಪ್ರದರ್ಶನ ಉತ್ತಮವಾಗಿವೆ. ಈ ಅವಧಿಯಲ್ಲಿ ಆಡಿದ 4 ಏಕದಿನ ಸರಣಿಗಳಲ್ಲಿ, ಅವರು 2 ಗೆಲುವು ಸಾಧಿಸಿದೆ. ಆದರೆ, ಇಂಗ್ಲೆಂಡ್​ ವಿರುದ್ಧ 3-0 ವೈಟ್​ ವಾಷ್​ ಮಾಡಿಸಿಕೊಂಡಿತ್ತು.

ಇದನ್ನೂ ಓದಿ : World Cup History: 2007ರ ವಿಶ್ವಕಪ್‌; ಟೂರ್ನಿಯಲ್ಲಿ ಹತ್ತಾರು ಮೇನಿಯಾ, ಆಸ್ಟ್ರೇಲಿಯಾ ಏಕಮೇವಾದ್ವಿತೀಯ!

ಈ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯನ್ನು ಆಡಿತ್ತು. ಆರಂಭದಲ್ಲಿ ಆಸ್ಟ್ರೇಲಿಯಾ 2-0 ಮುನ್ನಡೆ ಸಾಧಿಸಿತ. ದಕ್ಷಿಣ ಆಫ್ರಿಕಾ ಪ್ರಬಲವಾಗಿ ಹಿಂತಿರುಗಿ ಸರಣಿಯನ್ನು 3-2 ರಿಂದ ಕಸಿದುಕೊಂಡಿತು.

ಅಂತಿಮವಾಗಿ ಆಸ್ಟ್ರೇಲಿಯಾ ಭಾರತ ಪ್ರವಾಸ ಬರುತ್ತದೆ. ವಿಶ್ವಕಪ್ ಸಿದ್ಧತೆಯಲ್ಲಿ ಎರಡೂ ತಂಡಗಳು ವಿಭಿನ್ನ ಪ್ರಯೋಗಗಳನ್ನು ಮಾಡುತ್ತದೆ. ಭಾರತವು ಮೊದಲ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ಮುಕ್ತಾಯಗೊಳಿಸಿತು. ಆಸೀಸ್​ ಕೊನೇ ಪಂದ್ಯದಲ್ಲಿ ವಿಜಯ ಸಾಧಿಸಿತು.

ಆಸ್ಟ್ರೇಲಿಯಾ ತಂಡದ ವಿಶ್ಲೇಷಣೆ

ಸಾಮರ್ಥ್ಯ

ಬ್ಯಾಟಿಂಗ್: ಆಸ್ಟ್ರೇಲಿಯಾ ವಿಶ್ವದ ಅತ್ಯುತ್ತಮ ಅಗ್ರ ಕ್ರಮಾಂಕದ ಬ್ಯಾಟಿಂಗ್​ ಲೈನ್​ ಅಪ್​ ಹೊಂದಿದೆ. ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್ ಮತ್ತು ಮರ್ನಸ್​ ಲಾಬುಶೇನ್ ಅಗ್ರ ಕ್ರಮಾಂಕದಲ್ಲಿದ್ದಾರೆ. ಪ್ರತಿಯೊಬ್ಬ ಬ್ಯಾಟರ್​ ತನ್ನದೇ ಆದ ಬಲದ ಮೂಲಕ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಒಂದು ಬಾರಿ ಆಸ್ಟ್ರೇಲಿಯಾ ತಂಡದ ಬ್ಯಾಟರ್​ಗಳು ರನ್​ ಬಾರಿಸಲು ಆರಂಭಿಸಿದರೆ ಅವರನ್ನು ತಡೆಯೋದು ಕಷ್ಟ.

ಬೌಲಿಂಗ್: ಪ್ಯಾಟ್ ಕಮಿನ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್​ವುಡ್​ ಮತ್ತು ಆಡಮ್ ಜಂಪಾ ಅವರಂತಹ ಆಟಗಾರರನ್ನು ತಂಡವು ಹೊಂದಿರುವಾಗ, ಎದುರಾಳಿ ತಂಡಗಳಿಗೆ ಅಪಾಯ ಇದ್ದಿದ್ದೇ.

ವಿಶೇಷತೆ ಏನು: ಬೌಲರ್​ಗಳು ವಿಫಲಗೊಂಡರೆ ಬ್ಯಾಟರ್​ಗಳು ದೊಡ್ಡ ಮೊತ್ತ ಪೇರಿಸುವುದು, ಬ್ಯಾಟರ್​ಗಳು ವಿಫಲಗೊಂಡರೆ ಸಣ್ಣ ಮೊತ್ತವನ್ನು ಕಾಪಾಡವ ಬೌಲರ್​ಗಳೇ ಆ ತಂಡದ ನಿಜವಾದ ಸಾಮರ್ಥ್ಯ.

ದೌರ್ಬಲ್ಯ: ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಉತ್ತಮ ಸಮತೋಲಿತ ತಂಡವನ್ನು ಹೊಂದಿದ್ದರೂ ಪ್ರಸ್ತುತ ಆಸ್ಟ್ರೇಲಿಯಾ ತಂಡದ ಬ್ಯಾಲೆನ್ಸ್ ತಪ್ಪಿದೆ. ಬ್ಯಾಟರ್​ಗಳು ನಿಯಮಿತವಾಗಿ ದೊಡ್ಡ ಮೊತ್ತ ಪೇರಿಸಲು ವಿಫಲವಾಗುತ್ತಿದ್ದಾರೆ. ಬೌಲರ್​ಗಳು ಅನಗತ್ಯ ರನ್​ ಸೋರಿಕೆ ಮಾಡುತ್ತಿದ್ದಾರೆ.

ಗಾಯದ ಸಮಸ್ಯೆ : ಎಲ್ಲ ತಂಡಗಳಂತೆ ಆಸ್ಟ್ರೇಲಿಯಾದಲ್ಲೂ ಗಾಯದ ಸಮಸ್ಯೆ ಇದೆ. ನಿಧಾನಗತಿಯ ಸ್ಪಿನ್ ಸ್ನೇಹಿ ಭಾರತೀಯ ಪಿಚ್​ಗಳಲ್ಲಿ ಆಡಬಹುದಾದ ಅನುಭವಿ ಸ್ಪಿನ್ನರ್ ಆಸ್ಟನ್ ಅಗರ್ ಕಾಲಿನ ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಟ್ರಾವಿಸ್ ಹೆಡ್ ಕೈ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ.

ವಿಶ್ವ ಕಪ್​ ಕುರಿತ ನಾನಾ ಮಾಹಿತಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಪ್ರಮುಖ ಆಟಗಾರರು

ಸ್ಟೀವ್ ಸ್ಮಿತ್: ಸ್ಟೀವನ್ ಸ್ಮಿತ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಪ್ರಸ್ತುತ ತಲೆಮಾರಿನ ವಿಶ್ವದ ಅತ್ಯುತ್ತಮ ಬ್ಯಾಟರ್​ಗಳಲ್ಲಿ ಒಬ್ಬರು. ಭಾರತದ ಪಿಚ್​ ಪರಿಸ್ಥಿತಿಗಳು ಅವರ ಆಟದ ಪರಿಸ್ಥಿತಿಗೆ ಪೂರಕವಾಗಿದೆ. ಭಾರತ ಉಪಖಂಡದಲ್ಲಿ ಸ್ಮಿತ್ ಔಟ್ ಮಾಡುವುದು ಕಷ್ಟ.

ಗ್ಲೆನ್ ಮ್ಯಾಕ್ಸ್ವೆಲ್: ಆಲ್​ರೌಂಡರ್​ ಆಗಿ ಗ್ಲೆನ್ ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು. ಮ್ಯಾಕ್ಸ್ವೆಲ್ ಉತ್ತಮ ಫಿನಿಶರ್ ಮತ್ತು ಸಮರ್ಥ ಕೆಳ ಕ್ರಮಾಂಕದ ಬ್ಯಾಟರ್​. ಇನ್ನಿಂಗ್ಸ್​​ನ ಬೇಡಿಕೆಗಳಿಗೆ ಅನುಗುಣವಾಗಿ ಆಟವನ್ನು ಆಡಬಲ್ಲರು.

ಪ್ಯಾಟ್ ಕಮಿನ್ಸ್: ಆಸ್ಟ್ರೇಲಿಯಾದ ನಾಯಕ ವೇಗದ ದಾಳಿಯನ್ನೂ ಮುನ್ನಡೆಸಲಿದ್ದಾರೆ. ಸ್ಟಾರ್ಕ್ ಮತ್ತು ಹೇಜಲ್ವುಡ್ ಅವರಂತಹ ಆಟಗಾರರು ತಂಡದಲ್ಲಿದ್ದಾರೆ. ಕಮಿನ್ಸ್ ಬ್ಯಾಟಿಂಗ್​ನಲ್ಲೂ ಉತ್ತಮ ರೆಕಾರ್ಡ್​ ಹೊಂದಿದ್ದಾರೆ. ಬ್ಯಾಟಿಂಗ್ ಕ್ರಮಾಂಕವು ಹೇಗಾದರೂ ಕುಸಿದರೆ ಸೂಪರ್ ಹಿಟ್​ ಮಾಡಬಲ್ಲರು.

ವಿಶ್ವ ಕಪ್ ಸಾಧನೆಗಳು

ಆಸ್ಟ್ರೇಲಿಯಾ 5 ಪ್ರಶಸ್ತಿಗಳನ್ನು ಗೆದ್ದಿದೆ. 1987, 1999, 2003, 2007 ಮತ್ತು 2015 ರಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. 2019 ರಲ್ಲಿ ಅವರು ಸೆಮಿಫೈನಲ್ ತಲುಪಿದ್ದರು. ಅಲ್ಲಿ ಅವರು ತಮ್ಮ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ವಿರುದ್ಧ ಪಂದ್ಯವನ್ನು ಸೋತಿದ್ದರು.

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯೇರಿ, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಕ್ಯಾಮರೂನ್ ಗ್ರೀನ್, ಜೋಶ್ ಹೇಜಲ್ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲಾಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಜಂಪಾ, ಮಿಚೆಲ್ ಸ್ಟಾರ್ಕ್.

ಆಸ್ಟ್ರೇಲಿಯಾ ತಂಡದ ಪಂದ್ಯಗಳು

Exit mobile version