Site icon Vistara News

Team India | ಕನ್ನಡಿಗ ಕ್ರಿಕೆಟಿಗನಿಗೆ ಶುಭ ಸುದ್ದಿ, ಜಿಂಬಾಬ್ವೆ ಪ್ರವಾಸಕ್ಕೆ ಇವರೇ ನಾಯಕ

TEAM INDIA

ಬೆಂಗಳೂರು : ಕನ್ನಡಿಗ ಹಾಗೂ ಟೀಮ್‌ ಇಂಡಿಯಾ (Team India) ಆರಂಭಿಕ ಬ್ಯಾಟರ್‌ ಕೆ. ಎಲ್‌ ರಾಹುಲ್‌ ಫಿಟ್‌ ಆಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಹೀಗಾಗಿ ಅವರು ಆಗಸ್ಟ್‌ ೧೮ರಿಂದ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುವ ಜತೆಗೆ ತಂಡದ ನಾಯಕತ್ವ ವಹಿಸಲಿದ್ದಾರೆ. ವೆಸ್ಡ್‌ ವಿರುದ್ಧದ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಶಿಖರ್‌ ಧವನ್‌ ಅವರು ತಂಡದ ಉಪನಾಯಕನ ಸ್ಥಾನ ವಹಿಸಿಕೊಳ್ಳಲಿದ್ದಾರೆ.

ಕೆ. ಎಲ್‌ ರಾಹುಲ್‌ ಅವರು ತೊಡೆಸಂದು ನೋವಿನ ಸಮಸ್ಯೆಯಿಂದಾಗಿ ಸಾಕಷ್ಟು ನಾಲ್ಕೈದು ತಿಂಗಳು ಟೀಮ್‌ ಇಂಡಿಯಾದಿಂದ ಹೊರಗಿದ್ದರು. ಅದಾದ ಬಳಿಕ ವೆಸ್ಟ್ ಇಂಡೀಸ್‌ ವಿರುದ್ಧದ ಟಿ೨೦ ಸರಣಿಗೆ ಸಜ್ಜಾಗುವಷ್ಟರಲ್ಲಿ ಕೊರೊನಾ ಸೋಂಕಿಗೆ ಒಳಗಾದರು. ಹೀಗಾಗಿ ಅವರು ತವರಿನ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ, ಇಂಗ್ಲೆಂಡ್ ಪ್ರವಾಸ, ವೆಸ್ಟ್‌ ಇಂಡೀಸ್‌ ಪ್ರವಾಸದ ಅವಕಾಶ ಕಳೆದುಕೊಂಡಿದ್ದರು. ಇದೀಗ ಅವರಿಗೆ ಫಿಟ್ನೆಸ್‌ ಟೆಸ್ಟ್‌ ನಡೆಸಲಾಗಿದ್ದು, ಅದರಲ್ಲಿ ಪಾಸಾಗಿರುವ ಅವರು ಜಿಂಬಾಬ್ವೆಗೆ ಪ್ರವಾಸ ಮಾಡಲಿದ್ದಾರೆ.

ತಂಡಗಳು

ಕೆ. ಎಲ್‌ ರಾಹುಲ್‌ ನಾಯಕ (ನಾಯಕ), ಶಿಖರ್‌ ಧವನ್‌ (ಉಪನಾಯಕ), ಋತುರಾಜ್‌ ಗಾಯಕ್ವಾಡ್‌, ಶುಬ್ಮನ್ ಗಿಲ್‌, ದೀಪಕ್‌ ಹೂಡ, ರಾಹುಲ್‌ ತ್ರಿಪಾಠಿ, ಇಶಾನ್‌ ಕಿಶನ್‌, ಸಂಜು ಸ್ಯಾಮ್ಸನ್‌, ವಾಷಿಂಗ್ಟನ್ ಸುಂದರ್, ಶಾರ್ದುಲ್‌ ಠಾಕೂರ್‌, ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ಆವೇಶ್ ಖಾನ್‌, ಪ್ರಸಿದ್ಧ್‌ ಕೃಷ್ಣ, ಮೊಹಮ್ಮದ್‌ ಸಿರಾಜ್‌, ದೀಪಕ್ ಚಾಹರ್‌.

ಇದನ್ನೂ ಓದಿ |Asia Cup Cricket | ಟೀಮ್‌ ಇಂಡಿಯಾ ಆಟಗಾರರಿಗೆ ಫಿಟ್ನೆಸ್‌ ಟೆಸ್ಟ್‌ ಕಡ್ಡಾಯ

Exit mobile version