Site icon Vistara News

Most ODI wins: ಆಸ್ಟ್ರೇಲಿಯಾದ ದಾಖಲೆ ಮುರಿದ ಟೀಮ್​ ಇಂಡಿಯಾ

Team India

ಪಾರ್ಲ್​: ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ(South Africa vs India, 3rd ODI) ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಅಂತರದ ಗೆಲುವು ಸಾಧಿಸಿ ಸರಣಿ ಗೆದ್ದ ಸಂಭ್ರದಲ್ಲಿದೆ. ಅಂತಿಮ ಪಂದ್ಯದಲ್ಲಿ ಟೀಮ್​ ಇಂಡಿಯಾ(Most ODI wins in a calendar year) ಗೆಲುವು ದಾಖಲಿಸುವ ಮೂಲಕ ಆಸ್ಟ್ರೇಲಿಯಾದ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಹಿಂದಿಕ್ಕಿದೆ.

ಕ್ಯಾಲೆಂಡರ್​ ವರ್ಷವೊಂದರಲ್ಲಿ ಏಕದಿನ ಕ್ರಿಕೆಟ್​ನಲ್ಲಿ(Most ODI Wins) ಅತ್ಯಧಿಕ ಗೆಲುವು ಸಾಧಿಸಿದ ದ್ವಿತೀಯ ತಂಡ ಎನ್ನುವ ಕೀರ್ತಿಗೆ ಟೀಮ್​ ಇಂಡಿಯಾ ಪಾತ್ರವಾಗಿದೆ. ಈ ಮೂಲಕ ಆಸ್ಟ್ರೇಲಿಯಾ 1999ರಲ್ಲಿ ದಾಖಲಿಸಿದ್ದ 26 ಗೆಲುವಿನ ದಾಖಲೆಯನ್ನು ಹಿಂದಿಲ್ಲಿದೆ. ಭಾರತ 2023ರ ಕ್ಯಾಲೆಂಡರ್​ ವರ್ಷದಲ್ಲಿ 27 ಗೆಲುವು ಕಂಡಿದೆ. ಒಂದು ದಾಖಲೆ ಮುರಿದರೂ ಕೂಡ ಸದ್ಯ ವಿಶ್ವ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದೆ. ಆಸೀಸ್​ 2023ರ ಕ್ಯಾಲೆಂಡರ್​ ವರ್ಷದಲ್ಲಿ ಬರೋಬ್ಬರಿ 30 ಗೆಲುವು ಸಾಧಿಸಿದೆ.

ಇದನ್ನೂ ಓದಿ Viral Video: ‘ರಾಮ್ ಸಿಯಾ ರಾಮ್’ ಕುರಿತು ಸಂಭಾಷಣೆ ನಡೆಸಿದ ರಾಹುಲ್-ಮಹಾರಾಜ್

ಕ್ಯಾಲೆಂಡರ್​ ವರ್ಷದಲ್ಲಿ ಅತ್ಯಧಿಕ ಗೆಲುವು ಕಂಡ ತಂಡಗಳು

ಆಸ್ಟ್ರೇಲಿಯಾ- 30 ಗೆಲುವು (2003)

ಭಾರತ-27 ಗೆಲುವು (2003)

ಆಸ್ಟ್ರೇಲಿಯಾ-26 ಗೆಲುವು (1999)

ದಕ್ಷಿಣ ಆಫ್ರಿಕಾ- 25 ಗೆಲುವು (1996)

ದಕ್ಷಿಣ ಆಫ್ರಿಕಾ- 25 ಗೆಲುವು (2000)

ಭಾರತಕ್ಕೆ 78 ರನ್​ ಅಂತರದ ಗೆಲುವು

ಪಾರ್ಲ್‌ನಲ್ಲಿರುವ ಬೋಲ್ಯಾಂಡ್ ಪಾರ್ಕ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ ಭರ್ತಿ 50 ಓವರ್​ ಆಡಿ 8 ವಿಕೆಟ್​ ನಷ್ಟಕ್ಕೆ 297 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭಿಕ ಹಂತದಲ್ಲಿ ಉತ್ತಮ ಆಟವಾಡುವ ಮೂಲಕ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ ಆ ಬಳಿಕ ಭಾರತದ ಬೌಲಿಂಗ್ ದಾಳಿಯನ್ನು ಎದುರಿಸಲು ಮಂಕಾಗಿ 45.5 ಓವರ್​ಗಳಲ್ಲಿ 218 ರನ್​ಗಳಿಗೆ ಎಲ್ಲ ವಿಕೆಟ್​ಗಳನ್ನು ಕಳೆದುಕೊಂಡು ತವರಿನಲ್ಲಿ ಸರಣಿ ಸೋಲಿನ ಕಹಿ ಅನುಭವಿಸಿತು. ಭಾರತ 78 ರನ್​ ಅಂತರದ ಗೆಲುವು ಸಾಧಿಸಿ ಸರಣಿ ಗೆಲುವು ದಾಖಲಿಸಿತು.

ಭಾರತ ತಂಡದ ಗೆಲುವಿನಲ್ಲಿ ಏಕ ದಿನ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಬಾರಿಸಿದ ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರ ವಹಿಸಿದರು. ಬೌಲಿಂಗ್​ನಲ್ಲಿ ಅರ್ಶ್​ದೀಪ್ ಸಿಂಗ್ ಮಿಂಚಿದರು. ಅವರು 9 ಓವರ್ ಎಸೆದು 30 ರನ್​ ನೀಡಿ 4 ವಿಕೆಟ್​ ಉರುಳಿಸಿ ಮಿಂಚಿದರು.

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 59 ರನ್ ಬಾರಿಸಿತು. ಆದರೆ ರೀಜಾ ಹೆಂಡ್ರಿಕ್ಸ್ 19 ರನ್​ಗೆ ಔಟಾದ ಬಳಿಕ ಭಾರತಕ್ಕೆ ಹಿಡಿತ ಸಿಕ್ಕಿತು. ಆದರೆ ಮತ್ತೊಂದು ತುದಿಯಲ್ಲಿ ಟೋನಿ ಜೋರ್ಜಿ ಭಾರತದ ಬೌಲರ್​ಗಳ ಬೆವರಿಳಿಸಲು ಆರಂಭಿಸಿದರು. ಏತನ್ಮಧ್ಯೆ ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ವ್ಯಾನ್​ ಡೆರ್ ಡಸ್ಸೆನ್​ 2 ರನ್​ಗೆ ಔಟಾದರು. ಬಳಿಕ ಬಂದ ಏಡೆನ್​ ಮಾರ್ಕ್ರಮ್​ 36 ರನ್ ಬಾರಿಸಿ ಭಾರತ ತಂಡಕ್ಕೆ ಭಯ ಹುಟ್ಟಿಸಿದರು. ಅವರನ್ನು ವಾಷಿಂಗ್ಟನ್​ ಸುಂದರ್​ ಪೆವಿಲಿಯನ್​ಗೆ ಕಳುಹಿಸಿದರು.

Exit mobile version