ಅಹಮದಾಬಾದ್: ನ್ಯೂಜಿಲ್ಯಾಂಡ್(IND VS NZ) ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತ 168 ರನ್ಗಳ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಇದೇ ವೇಳೆ ಭಾರತ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ.
ಭಾರತ ತಂಡ 168 ರನ್ಗಳ ಭರ್ಜರಿ ಜಯ ಸಾಧಿಸಿದ ವೇಳೆ ಐಸಿಸಿ ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿರುವ ತಂಡವೊಂದರ ವಿರುದ್ಧ ಅತ್ಯಧಿಕ ರನ್ಗಳ ಅಂತರದಿಂದ ಗೆದ್ದ ತಂಡ ಎಂಬ ಹೆಗ್ಗಳಿಕೆ ಭಾರತದ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಪಾಕ್ ತಂಡದ ಹೆಸರಿನಲ್ಲಿತ್ತು. ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ ತಂಡವು 143 ರನ್ಗಳಿಂದ ಜಯ ಸಾಧಿಸಿದ್ದು ಇದುವರೆಗಿನ ವಿಶ್ವ ದಾಖಲೆಯಾಗಿತ್ತು. ಇದೀಗ ಪಾಕ್ ತಂಡದ ಈ ದಾಖಲೆಯನ್ನು ಟೀಮ್ ಇಂಡಿಯಾ ಮುರಿದಿದೆ.
ಇದನ್ನೂ ಓದಿ IND VS NZ: ಗಿಲ್, ಪಾಂಡ್ಯ ಆರ್ಭಟಕ್ಕೆ ಬೆಚ್ಚಿಬಿದ್ದ ಕಿವೀಸ್; ಭಾರತಕ್ಕೆ ಸರಣಿ ಜಯ
ಈ ಹಿಂದೆ ಐರ್ಲೆಂಡ್ ವಿರುದ್ಧ 143 ರನ್ಗಳಿಂದ ಜಯ ಸಾಧಿಸಿದ್ದು ಇದುವೆರೆಗಿನ ಭಾರತದ ದೊಡ್ಡ ಅಂತರದ ಗೆಲುವಾಗಿತ್ತು. ಇದೀಗ ಈ ದಾಖಲೆಯನ್ನು ಮುರಿದು ಟೀಮ್ ಇಂಡಿಯಾ 168 ರನ್ಗಳ ಗೆಲುವಿನ ಹೊಸ ಇತಿಹಾಸ ನಿರ್ಮಿಸಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 234 ರನ್ ಪೇರಿಸಿದರೆ, ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ 12.1 ಓವರ್ಗಳಲ್ಲಿ 66 ರನ್ಗೆ ಸರ್ವಪತನ ಕಂಡಿತು.