Site icon Vistara News

Rohit Sharma | ಅತಿ ವೇಗದಲ್ಲಿ 500 ಸಿಕ್ಸರ್‌ಗಳ ದಾಖಲೆ ಬರೆದ ಟೀಮ್ ಇಂಡಿಯಾ ನಾಯಕ ರೋಹಿತ್‌ ಶರ್ಮ

asia cup

ನವ ದೆಹಲಿ: ಟೀಮ್ ಇಂಡಿಯಾದ ನಾಯಕ ರೋಹಿತ್‌ ಶರ್ಮ (Rohit Sharma) ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ೫೦೦ ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ಎರಡನೇ ಹಾಗೂ ಭಾರತದ ಮೊದಲ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಮೀರ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ವೆಸ್ಟ್‌ ಇಂಡೀಸ್‌ ತಂಡದ ದೈತ್ಯ ಬ್ಯಾಟರ್‌ ಕ್ರಿಸ್ ಗೇಲ್‌ ಅವರು ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ರೋಹಿತ್ ಶರ್ಮ ಅವರು ೪೨೮ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿರುವ ರೋಹಿತ್ ಶರ್ಮ ಅವರು ಅತಿವೇಗದಲ್ಲಿ ೫೦೦ ಸಿಕ್ಸರ್‌ಗಳ ದಾಖಲೆ ಮಾಡಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಮೊದಲು ಈ ದಾಖಲೆಯನ್ನು ಮಾಡಿದ ಹೊರತಾಗಿಯೂ ಕ್ರಿಸ್‌ ಗೇಲ್‌ ಅವರು ಒಟ್ಟಾರೆ ೪೪೭ ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ೯ನೆಯವರಾಗಿ ಬ್ಯಾಟ್‌ ಮಾಡಲು ಇಳಿದ ರೋಹಿತ್‌ ಶರ್ಮ, ಮಹಮದುಲ್ಲಾ ಎಸೆದ ೪೯ನೇ ಓವರ್‌ನಲ್ಲಿ ಡೀಪ್‌ ಮಿಡ್‌ ವಿಕೆಟ್‌ ಕಡೆಗೆ ಸಿಕ್ಸರ್ ಬಾರಿಸುವ ಮೂಲಕ ಈ ಸಾಧನೆ ಮಾಡಿದರು. ಮುಂದಿನ ಎಸೆತದಲ್ಲಿಯೂ ಅವರು ಸಿಕ್ಸರ್ ಬಾರಿಸಿದ್ದರು.

2007 ರಲ್ಲಿ ಅಂರಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರೋಹಿತ್‌ ಶರ್ಮ, ಟಿ೨೦ ಮಾದರಿಯಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಒಟ್ಟು ಅವರು ಅಲ್ಲದೆ, ಗೇಲ್, ಶಾಹಿದ್ ಅಫ್ರಿದಿ ಮತ್ತು ಸನತ್ ಜಯಸೂರ್ಯ ಬಳಿಕ ಒಡಿಐನಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ | Team India | ನೂತನ ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮ ನೇತೃತ್ವದ ಟೀಮ್‌ ಇಂಡಿಯಾ, ಯಾವುದು ಅದು?

Exit mobile version