ನವ ದೆಹಲಿ : ಭಾರತ ತಂಡ (Team India) ಮುಂದಿನ ಟಿ೨೦ ವಿಶ್ವ ಕಪ್‌ಗಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಟೀಮ್ ಮ್ಯಾನೆಜ್ಮೆಂಟ್ ಭರ್ಜರಿ ಪ್ರಯೋಗಗಳನ್ನೂ ನಡೆಯುತ್ತಿದೆ. ಆಟಗಾರರನ್ನು ಮಾನಸಿಕವಾಗಿ ಸಜ್ಜುಗೊಳಿಸುವ ಜತೆಗೆ ಪ್ರತಿಯೊಬ್ಬರಿಗೂ ಅವಕಾಶ ನೀಡುವ ಮೂಲಕ ಅವರ ಸಾಮರ್ಥ್ಯ ಪರೀಕ್ಷೆ ನಡೆಸುತ್ತಿದೆ. ಕೆಲವೊಂದು ಬಾರಿ ಇಂಥ ಪ್ರಯೋಗಗಳ ಬಗ್ಗೆ ಆಕ್ಷೇಪಗಳೂ ಬಂದಿವೆ. ಆದರೆ, ಈ ಪ್ರಕ್ರಿಯೆಯನ್ನು ಟೀಮ್ ಇಂಡಿಯಾ ಕಾಯಂ ನಾಯಕ ವಿರಾಟ್ ಕೊಹ್ಲಿ ಸಮರ್ಥನೆ ಮಾಡಿಕೊಂಡಿದ್ದಾರೆ. ನಮಗೆ ತಂಡದಷ್ಟೇ ಬೆಂಚ್ ಸ್ಟ್ರೆಂಥ್ ಕೂಡ ಅಗತ್ಯ ಎಂದು ಹೇಳಿದ್ದಾರೆ.
ಸ್ಪೋರ್ಟ್ಸ್ ಶೋ ಒಂದರಲ್ಲಿ ಮಾತನಾಡಿದ ಅವರು “ನಾವು ಹೆಚ್ಚೆಚ್ಚು ಕ್ರಿಕೆಟ್ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಹೀಗಾಗಿ ಗಾಯದ ಸಮಸ್ಯೆ ಹಾಗೂ ಒತ್ತಡ ನಿರ್ವಹಣೆ ಅತ್ಯಗತ್ಯ ಎನಿಸಿದೆ. ಹೀಗಾಗಿ ಪ್ರತಿಯೊಬ್ಬರಿಗೂ ಅವಕಾಶ ನೀಡುತ್ತಿದ್ದು, ಬೆಂಚ್ ಸ್ಟ್ರೆಂಥ್ ಕೂಡ ಹೆಚ್ಚಿಸುತ್ತಿದ್ದೇವೆ,” ಎಂದು ಅವರು ಹೇಳಿದ್ದಾರೆ.
ನಮ್ಮ ತಂಡದ ಪ್ರತಿಯೊಬ್ಬರೂ ಅಗತ್ಯ ಸಂದರ್ಭದಲ್ಲಿ ಆಡುವ ಸಾಮರ್ಥ್ಯ ಹೊಂದಿರಬೇಕು. ಅದಕ್ಕಾಗಿ ಎಲ್ಲರಿಗೂ ಅವಕಾಶಗಳನ್ನು ನೀಡಲಾಗುತ್ತಿದೆ. ಅದೇ ಕಾರಣಕ್ಕೆ ತಂಡದಲ್ಲಿ ಹೆಚ್ಚು ಬದಲಾವಣೆಗಳನ್ನು ಮಾಡುತ್ತಿದ್ದೇವೆ,” ಎಂದು ಅವರು ಹೇಳಿದರು.
ರೋಹಿತ್ ಶರ್ಮ ನೇತೃತ್ವದ ಭಾರತ ತಂಡ ಮುಂಬರುವ ಟಿ೨೦ ವಿಶ್ವ ಕಪ್‌ಗೆ ಸಜ್ಜಾಗುತ್ತಿದೆ. ಅದಕ್ಕಿಂತ ಮೊದಲು ಏಷ್ಯಾ ಕಪ್‌ನಲ್ಲಿ ಪಾಲ್ಗೊಳ್ಳಲಿದೆ. ಏತನ್ಮಧ್ಯೆ ಬಿಡುವಿಲ್ಲದ ದ್ವಿಪಕ್ಷೀಯ ಸರಣಿಯಲ್ಲೂ ತಂಡ ಪಾಲ್ಗೊಂಡಿದೆ.
ನಾವು ಸರಣಿಯಲ್ಲಿ ಗೆಲವು ಸಾಧಿಸುತ್ತೇವೋ ಇಲ್ಲವೂ, ಅಥವಾ ಟ್ರೋಫಿ ಗೆಲ್ಲುತ್ತೇವೋ ಎಂಬುದು ಪ್ರಶ್ನೆಯಲ್ಲ. ದಿನದಿಂದ ದಿನಕ್ಕೆ ನಮ್ಮ ತಂಡ ಬಲವಾಗಬೇಕು ಎಂಬುದೇ ನಮ್ಮ ಗುರಿ ಎಂಬುದಾಗಿ ಹೇಳಿದ್ದಾರೆ.
ಇದನ್ನೂ ಓದಿ | ASIA CUP | ಏಷ್ಯಾ ಕಪ್‌ಗೆ ಭಾರತ ತಂಡ ಪ್ರಕಟ