Site icon Vistara News

Team India Coach: ಟೀಮ್​ ಇಂಡಿಯಾ ಕೋಚ್​ ಆಯ್ಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಜಯ್‌ ಶಾ

Team India Coach

Team India Coach:A new coach will join Team India from the Sri Lanka series: Jay Shah

ಮುಂಬಯಿ: ಟೀಮ್​ ಇಂಡಿಯಾದ ಮುಂದಿನ ಕೋಚ್(Team India Coach)​ ಆಯ್ಕೆ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಮಹತ್ವದ ಮಾಹಿತಿ ನೀಡಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಗೆ ನೂತನ ಕೋಚ್​ ಭಾರತ ತಂಡದ ಜವಾಬ್ದಾರಿ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿ ಜುಲೈ 27ರಿಂದ ಆರಂಭಗೊಳ್ಳಲಿದೆ.

ಈ ಹಿಂದೆ ಗೌತಮ್​ ಗಂಭೀರ್​ ಅವರು ಕೋಚ್​ ಆಗುವುದು ಖಚಿತ, ಈಗಾಗಲೇ ಬಿಸಿಸಿಐ ಅವರ ಹೆಸರನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿತ್ತು. ಅಲ್ಲದೆ ಟಿ20 ವಿಶ್ವಕಪ್​ ಮುಗಿದ ಒಂದೆಡರು ದಿನಗಳಲ್ಲಿ ಕೋಚ್​ ಹೆಸರು ಘೋಷಣೆಯಾಗಲಿದೆ ಎನ್ನಲಾಗಿತ್ತು. ಆದರೆ, ಇದೀಗ ಜಯ್​ ಶಾ ಅವರು ಗಂಭೀರ್‌(Gautam Gambhir) ಜತೆ ಡಬ್ಲ್ಯು.ವಿ. ರಾಮನ್‌ ಅವರ ಹೆಸರನ್ನು ಕೂಡ ಹೇಳಿರಿವುದು ಅಚ್ಚರಿಗೆ ಕಾರಣವಾಗಿದೆ. ವಿ. ರಾಮನ್‌(WV Raman) ಭಾರತದ ಮಹಿಳಾ ಕ್ರಿಕೆಟ್‌ ತಂಡದ ಕೋಚ್‌ ಆಗಿ ಕರ್ತವ್ಯ ನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಜಯ್‌ ಶಾ, ಕೋಚ್‌ ಜತೆಗೆ ಬಿಸಿಸಿಐ ಆಯ್ಕೆಗಾರರ ನೇಮಕವೂ ಶೀಘ್ರದಲ್ಲೇ ನಡೆಯಲಿದೆ ಎಂದಿದ್ದಾರೆ. ಜತೆಗೆ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಈಗಾಗಲೇ ಸಂದರ್ಶನ ನಡೆಸಿ ಇಬ್ಬರ ಹೆಸರನ್ನು ಅಂತಿಮಗೊಳಿಸಿದೆ ಎಂದು ತಿಳಿಸಿದ್ದಾರೆ. ನೂತನ ಕೋಚ್​ಗೆ ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್‌ ಟ್ರೋಫಿ ಮೊದಲ ಸವಾಲಾಗಲಿದೆ.

ಜಾಂಟಿ ರೋಡ್ಸ್ ಫೀಲ್ಡಿಂಗ್​ ಕೋಚ್

ದಕ್ಷಿಣ ಆಫ್ರಿಕಾದ ಈ ಮಾಜಿ ಆಟಗಾರ, ಕ್ರಿಕೆಟ್​ ಕಂಡ ಬೆಸ್ಟ್​ ಫೀಲ್ಡರ್​ ಜಾಂಟಿ ರೋಡ್ಸ್(Jonty Rhodes) ಅವರು ಭಾರತ ತಂಡದ ಫೀಲ್ಡಿಂಗ್​ ಕೋಚ್​(Jonty Rhodes ia’s New Fielding Coach) ಆಗಲಿದ್ದಾರೆ ಎಂದು ತಿಳಿದುಬಂದಿದೆ. ತಂಡದ ಇತರ ಕೋಚ್​ಗಳ ಆಯ್ಕೆಯಲ್ಲಿ ತನ್ನ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಅವಕಾಶ ನೀಡಬೇಕೆಂದು ಗಂಭೀರ್​ ಅವರು ಬಿಸಿಸಿಐಗೆ ಬೇಡಿಕೆ ಇಟ್ಟಿದ್ದು ಈ ಬೇಡಿಕೆಯನ್ನು ಬಿಸಿಸಿಐ ಒಪ್ಪಿಕೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ Team India Captain : ರೋಹಿತ್ ಶರ್ಮಾ ನಂತರ ಟಿ20 ತಂಡದ ನಾಯಕ ಯಾರು? ಇಲ್ಲಿದೆ ಐದು ಮುಂಚೂಣಿ ಹೆಸರುಗಳು

ಗಂಭೀರ್​ ಅವರು ಜಾಂಟಿ ರೋಡ್ಸ್ ಜತೆ ಐಪಿಎಲ್​ನಲ್ಲಿ ಲಕ್ನೋ ತಂಡದ ಪರ ಜತೆಯಾಗಿ 2 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಇದೇ ಕಾಂಬಿನೇಷನ್​ನಲ್ಲಿ ಇದೀಗ ಟೀಮ್​ ಇಂಡಿಯಾದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಕಂಡುಬಂದಿದೆ. 2019ರಲ್ಲಿಯೂ ಜಾಂಟಿ ರೋಡ್ಸ್ ಅವರು ಭಾರತದ ತಂಡದ ಫೀಲ್ಡಿಂಗ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಭಾರತೀಯ ಮೂಲದ ಸಿಬ್ಬಂದಿಗೆ ಬಿಸಿಸಿಐ ಮಣೆ ಹಾಕಿತ್ತು. ಈ ಬಾರಿ ಗಂಭೀರ್​ ಅವರ ಅಭಯಹಸ್ತದಿಂದ ರೋಡ್ಸ್​ಗೆ ಅವಕಾಶ ಸಿಗುವ ಸಾಧ್ಯತೆ ಇದೆ

2022ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ರಾಹುಲ್​ ದ್ರಾವಿಡ್​ಗೆ ಕೋಚ್​ ಆಗಿ ಮೊದಲ ಸವಾಲಾಗಿತ್ತು. ಇಲ್ಲಿ ಕಪ್​ ಗೆಲ್ಲಲು ತಂಡ ವಿಫಲವಾಗಿತ್ತು. ಬಳಿಕ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ನಲ್ಲಿಯೂ ಭಾರತ ಫೈನಲ್​ನಲ್ಲಿ ಸೋಲು ಕಂಡಿತ್ತು. ನಿರ್ಗಮನದ ಹಂತದಲ್ಲಿ ಕೊನೆಗೂ ಕಪ್​ ಗೆದ್ದ ಖಷಿ ಅವರಿಗೆ ಲಭಿಸಿದೆ. ಜತೆಗೆ ಅವರ ಈ ಕನಸು ನೆರವೇರಲೆಂದು ಪ್ರಾರ್ಥಿಸಿಸಿದ ಕೊಟ್ಯಂತರ ಅಭಿಮಾನಿಗಳ ಹಾರೈಕೆ ಕೂಡ ಫಲಿಸಿದೆ. ಕೋಚ್​ ಹುದ್ದೆಯಿಂದ ಕೆಳಗಿಳಿದ ದ್ರಾವಿಡ್​ ಮುಂದಿನ ವರ್ಷ ಐಪಿಎಲ್​ನಲ್ಲಿ ಕೋಚಿಂಗ್​ ನಡೆಸುವ ಸಾಧ್ಯತೆ ಇದೆ.

Exit mobile version