ನವದೆಹಲಿ: ಖಾಸಗಿ ಚಾನೆಲ್ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತೀಯ ಕ್ರಿಕೆಟ್ (Team India) ಆಂತರಿಕ ವಿಚಾರಗಳನ್ನು ಬಹಿರಂಗಪಡಿಸಿ ವಿವಾದಕ್ಕೆ ಗುರಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ (Chetan Sharma) ಅವರ ಸ್ಥಾನಕ್ಕೆ ವೀರೇಂದ್ರ ಸೆಹವಾಗ್ (Virender Sehwag) ಆಯ್ಕೆ ಆಗಲಿದ್ದಾರೆ ಎಂದು ಎಲ್ಲಡೆ ಸುದ್ದಿ ಹರಿದಾಡಿತ್ತು. ಆದರೆ ಈ ವೀಚಾರವಾಗಿ ಸ್ವತಃ ಸೆಹವಾಗ್ ಅವರೇ ಸ್ಪಷ್ಟನೆ ನೀಡಿದ್ದಾರೆ. ತಾವು ಈ ಹುದ್ದಗೆ ಅರ್ಜಿ ಸಲ್ಲಿಸಿಲ್ಲ ಮತ್ತು ರೇಸ್ನಲ್ಲಿಯೂ ಇಲ್ಲ ಎಂದು ಹೇಳಿದ್ದಾರೆ.
ಚೇತನ್ ಶರ್ಮ ಅವರು ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನ ತೊರೆದು ಸರಿ ಸುಮಾರು 6 ತಿಂಗಳುಗಳು ಕಳೆದರೂ ಇದುವರೆಗೆ ಬಿಸಿಸಿಐ ಈ ಸ್ಥಾನಕ್ಕೆ ಯಾರನ್ನೂ ನೇಮಕ ಮಾಡಿರಲಿಲ್ಲ. ಈ ಸಮಿತಿಯಲ್ಲಿ ಉಳಿದಿದ್ದ ನಾಲ್ಕು ಮಂದಿ ಸದಸ್ಯರ ನೇತೃತ್ವದಲ್ಲೇ ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ಜತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೂ (WTC Final 2023) ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿದ್ದರು. ಆದರೆ ಇದೀಗ ಏಷ್ಯಾ ಕಪ್, ಏಕದಿನ ವಿಶ್ವ ಕಪ್ ಸೇರಿ ಪ್ರಮುಖ ಟೂರ್ನಿಗಳು ನಡೆಯಲಿರುವ ಕಾರಣದಿಂದ ಬಿಸಿಸಿಐ ಈ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದೆ.
ಇದನ್ನೂ ಓದಿ Team India : ಭಾರತ ಕ್ರಿಕೆಟ್ ತಂಡದ ನೂತನ ಆಯ್ಕೆಗಾರನಿಗೆ ಹುಡುಕಾಟ ಆರಂಭಿಸಿದ ಬಿಸಿಸಿಐ
ಬಿಸಿಸಿಐ ಈ ಹುದ್ದಗೆ ಅರ್ಜಿ ಆಹ್ವಾನಿಸಿದೆ ಎಂದು ತಿಳಿದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಈ ಹುದ್ದೆಗೆ ಅನೇಕ ಕ್ರಿಕೆಟಿಗರ ಹೆಸರು ಕೇಳಿ ಬಂದಿತ್ತಾದರೂ ವೀರೇಂದ್ರ ಸೇಹವಾಗ್ ಅವರು ಈ ಸ್ಥಾನ ಅಲಂಕರಿಸುವುದು ಬಹುತೇಕ ಖಚಿತ ಎಂದು ವರದಿಯಾಗಿತ್ತು, ಜತೆಗೆ ಬಿಸಿಸಿಐ ಕೂಡ ಅವರನ್ನು ಸಂಪರ್ಕಿಸಿದೆ ಎನ್ನಲಾಗಿತ್ತು. ಆದರೆ ಇದೀಗ ಸೆಹವಾಗ್ ಈ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ತಾವು ಈ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ ಮತ್ತು ತಮ್ಮನ್ನು ಯಾರೂ ಕೂಡ ಸಂಪರ್ಕಿಸಿಲ್ಲ ಎಂದು ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.