ಢಾಕಾ : ಭಾರತ ಮತ್ತು ಆತಿಥೇಯ ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ ಡಿಸೆಂಬರ್ 14ರಂದು ಆರಂಭವಾಗಲಿದೆ. ಏಕ ದಿನ ಸರಣಿಯಲ್ಲಿ ಸೋತಿರುವ ಹಿನ್ನೆಲೆಯಲ್ಲಿ ಪ್ರವಾಸಿ ಟೀಮ್ ಇಂಡಿಯಾಗೆ ಇದು ಸವಾಲಿನ ಸರಣಿ ಎನಿಕೊಳ್ಳಲಿದೆ. ಈ ಸರಣಿಯ ಎರಡೂ ಪಂದ್ಯಗಳನ್ನು ಗೆದ್ದರೆ ಮರ್ಯಾದೆ ಉಳಿಯುತ್ತದೆ. ಇಲ್ಲದಿದ್ದರೆ ಮುಖಭಂಗವಾಗಲಿದೆ. ಅದಕ್ಕಾಗಿ ಯೋಜಿತ ರಣತಂತ್ರದೊಂದಿಗೆ ಭಾರತ ತಂಡ ಕಣಕ್ಕೆ ಇಳಿಯಬೇಕಾಗಿದೆ. ಕೋಚ್ ರಾಹುಲ್ ದ್ರಾವಿಡ್ ಸಮೇತ ಟೀಮ್ ಇಂಡಿಯಾ ಬಳಗ ಗೆಲುವಿನ ಯೋಜನೆಗಳನ್ನು ರೂಪಿಸಿಕೊಳ್ಳುತ್ತದೆ.
ಕಳೆದ ಜುಲೈನಿಂದ ಭಾರತ ತಂಡ ಯಾವುದೇ ಟೆಸ್ಟ್ ಸರಣಿಗಳಲ್ಲಿ ಭಾರತ ತಂಡ ಪಾಲ್ಗೊಂಡಿಲ್ಲ. ಕೇವಲ ಟಿ20 ಹಾಗೂ ಏಕ ದಿನ ಪಂದ್ಯಗಳ ಸರಣಿಯಲ್ಲಿ ಆಡಿದೆ. ಹೀಗಾಗಿ ದೀರ್ಘ ಅವಧಿಯ ಕ್ರಿಕೆಟ್ನಲ್ಲಿ ಆಡುವ ಮೊದಲು ಹೆಚ್ಚು ಹೊತ್ತು ತಾಲೀಮು ನಡೆಸಬೇಕಾಗುತ್ತದೆ. ಇದೇ ಉದ್ದೇಶದೊಂದಿಗೆ ರಾಹುಲ್ ನೇತೃತ್ವದ ಭಾರತ ಪಡೆ ಚಿತ್ತಗಾಂಗ್ನಲ್ಲಿ ಅಭ್ಯಾಸ ನಡೆಸುತ್ತಿದೆ.
ಭಾರತ ತಂಡ ಅಭ್ಯಾಸ ಮಾಡುತ್ತಿರುವ ಚಿತ್ರಗಳನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. ವಿರಾಟ್ ಕೊಹ್ಲಿ, ಅಭಿಮನ್ಯು ಈಶ್ವರನ್, ಕೆ. ಎಲ್ ರಾಹುಲ್, ಶುಬ್ಮನ್ ಗಿಲ್ ಹಾಗೂ ರಿಷಭ್ ಪಂತ್ ನೆಟ್ನಲ್ಲಿ ಅಭ್ಯಾಸ ಮಾಡುತ್ತಿರುವ ಚಿತ್ರಗಳಿವೆ.
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯ ಢಾಕಾದಲ್ಲಿ ಡಿಸೆಂಬರ್ 22ರಿಂದ ನಡೆಯಲಿದೆ. ಈ ಸರಣಿ ಹಾಲಿ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಭಾಗವಾಗಿರುವ ಕಾರಣ ಇಲ್ಲಿನ ಗೆಲುವು ಫೈನಲ್ಗೆ ಏರುವ ಮೆಟ್ಟಿಲಾಗಲಿದೆ.
ಬಾಂಗ್ಲಾ ವಿರುದ್ಧದ ಏಕ ದಿನ ಸರಣಿಯನ್ನು ಭಾರತ ತಂಡ 2-1 ಅಂತರದಿಂದ ಕಳೆದುಕೊಂಡು ಮುಖಭಂಗ ಎದುರಿಸಿತ್ತು. ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಪಡೆ ವೀರೋಚಿತ ಸೋಲು ಕಂಡಿದ್ದರೆ ಮೂರನೇ ಪಂದ್ಯದಲ್ಲಿ 227 ರನ್ಗಳ ಭರ್ಜರಿ ಜಯ ದಾಖಲಿಸಿತ್ತು. ಅದರಲ್ಲೂ ಎಡಗೈ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಬಾರಿಸಿದ ಸ್ಪೋಟಕ 210 ರನ್ಗಳು ಸ್ಮರಣೀಯ ಎನಿಸಿಕೊಂಡಿತು. ಜತೆಗೆ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 74ನೇ ಅಂತಾರಾಷ್ಟ್ರೀಯ ವಿಕೆಟ್ ಕೂಡ ಕಬಳಿಸಿದ್ದರು.
ಇದನ್ನೂ ಓದಿ | INDvsBAN | ವಿರಾಟ್ ಕೊಹ್ಲಿಯ ಪ್ರದರ್ಶನ ಪ್ರಶ್ನಾತೀತ; ಅನುಮಾನವೇ ಬೇಡ ಎಂದ ಕೆ. ಎಲ್ ರಾಹುಲ್