Site icon Vistara News

Team India Holi: ಹೋಳಿ ಆಚರಿಸಿದ ಟೀಮ್​ ಇಂಡಿಯಾ

Team India Holi: Team India celebrated Holi

Team India Holi: Team India celebrated Holi

ಅಹಮದಾಬಾದ್‌: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯವನ್ನಾಡಲು ಅಹಮದಾಬಾದ್​ನಲ್ಲಿರುವ ಟೀಮ್​ ಇಂಡಿಯಾ ಆಟಗಾರರು ಹೋಳಿ ಹಬ್ಬ ಆಚರಿಸಿ(Team India Holi) ಸಂಭ್ರಮಿಸಿದ್ದಾರೆ. ಆಟಗಾರರು ಬಣ್ಣದೋಕುಳಿಯಲ್ಲಿ ಮಿಂದೆದ್ದ ಫೋಟೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ(Rohit Sharma), ವಿರಾಟ್​ ಕೊಹ್ಲಿ(Virat Kohli), ಚೇತೇಶ್ವರ್​ ಪೂಜಾರ(Cheteshwar Pujara), ಶುಭಮನ್​ ಗಿಲ್(Shubman Gill) ಸೇರಿದಂತೆ ಎಲ್ಲ ಆಟಗಾರರು ಬಣ್ಣ ಹಚ್ಚಿ ಹೋಳಿ ಆಚರಿಸಿದ್ದಾರೆ.

ಇದನ್ನೂ ಓದಿ Sachin Tendulkar: ಹೋಳಿ ಹಬ್ಬ ಆಚರಿಸಿದ ಸಚಿನ್​ ತೆಂಡೂಲ್ಕರ್; ಫೋಟೊ ವೈರಲ್​

ಆಟಗಾರರು ಪರಸ್ಪರ ಬಣ್ಣ ಹಚ್ಚಿಕೊಂಡ ಬಳಿಕ ಹಿಂದಿ ಸಿನಿಮಾದ ಹಾಡಿಗೆ ನೃತ್ಯವನ್ನು ಮಾಡಿದ್ದಾರೆ. ಬೆಳಗ್ಗೆ ಅಭ್ಯಾಸದಲ್ಲಿ ನಿರತರಾಗಿದ್ದ ಆಟಗಾರರೆಲ್ಲ ಅಭ್ಯಾಸ ಮುಗಿದ ಬಳಿಕ ರಂಗು ರಂಗಿನ ಹೋಳಿ ಆಡಿ ಸಂಭ್ರಮಿಸಿದರು.

ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯ ಮಾರ್ಚ್​ 9 ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೆ ಉಭಯ ದೇಶಗಳ ಪ್ರಧಾನಿಗಳು ಸಾಕ್ಷಿಯಾಗಲಿದ್ದಾರೆ.

Exit mobile version