Site icon Vistara News

Team India : ಪುಣೆ ತಲುಪಿದ ಟೀಮ್ ಇಂಡಿಯಾ; ಬಾಂಗ್ಲಾ ವಿರುದ್ಧ ಸಮರಕ್ಕೆ ಸಜ್ಜು

Team india at pune

ಪುಣೆ: ಇಲ್ಲಿನ ಎಂಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾ ಅಕ್ಟೋಬರ್ 15 ರಂದು (ಭಾನುವಾರ) ಅಹಮದಾಬಾದ್​ನಿಂದ ಪುಣೆಗೆ ಬಂದಿಳಿದಿದೆ. ಭಾರತದ ಆಲ್​ರೌಂಡರ್​​ ರವಿಚಂದ್ರನ್ ಅಶ್ವಿನ್ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಮೆನ್ ಇನ್ ಬ್ಲೂ ವಿಶ್ವಕಪ್​​ನಲ್ಲಿ ನಿರ್ಣಾಯಕ ಮುಖಾಮುಖಿಗೆ ಮುಂಚಿತವಾಗಿ ವಿಮಾನ ಹತ್ತುವಾಗ ಒಂದು ಪೋಸ್ಟ್​​ ಅಪ್ಲೋಡ್ ಮಾಡಿದ್ದಾರೆ. ಗಮನಿಸಬೇಕಾದ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಹಾಲಿ ಆವೃತ್ತಿಯ ವಿಶ್ವ ಕಪ್​ನಲ್ಲಿ ಸತತ ಮೂರು ಗೆಲುವುಗಳನ್ನು ಸಾಧಿಸಿದೆ. ಇದೀಗ ಅಕ್ಟೋಬರ್ 19ರಂದು (ಗುರುವಾರ) ಬಾಂಗ್ಲಾದೇಶ ತಂಡದ ವಿರುದ್ಧ ಗೆಲುವಿನ ಓಟವನ್ನು ಮುಂದುವರಿಸಲು ಎದುರು ನೋಡುತ್ತಿದೆ.

ಸತತ 4ನೇ ಜಯದ ಮೇಲೆ ಕಣ್ಣು

ಹಾಲಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ತಂಡಗಳನ್ನು ಮಣಿಸಿರುವ ಭಾರತ ಪುಣೆಯಲ್ಲಿ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಗೆಲುವಿನ ಗುರಿಯನ್ನು ಹೊಂದಿದೆ. ಈ ಮೂಲಕ ರೋಹಿತ್ ಶರ್ಮಾ ಮತ್ತು ತಂಡವು ಸತತ ನಾಲ್ಕನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಪ್ರಸ್ತು ಭಾರತದ ಬೌಲಿಂಗ್ ವಿಭಾಗ ಅಸಾಧಾರಣವಾಗಿದೆ. ತಂಡಕ್ಕೆ ಎಲ್ಲ ರೀತಿಯಲ್ಲಿ ಅನುಕೂಲಕರವಾಗಿದೆ.

ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ರೋಹಿತ್ ಶರ್ಮಾ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆರಂಭಿಕ ಆಟಗಾರ ಶುಭ್​ಮನ್​ ಗಿಲ್ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಮರಳಿದ್ದರು. ಬಲಗೈ ಬ್ಯಾಟ್ಸ್ಮನ್ ಬಾಂಗ್ಲಾದೇಶದ ವಿರುದ್ಧವೂ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ಬಾಂಗ್ಲಾದೇಶವು ಪಂದ್ಯಾವಳಿಯಲ್ಲಿ ಉತ್ತಮ ಆರಂಭವನ್ನು ಹೊಂದಿಲ್ಲ. ನ್ಯೂಜಿಲ್ಯಾಂಡ್​ವಿರುದ್ಧ. ಶಕೀಬ್ ಬಳಗ ತೀವ್ರ ಆಘಾತ ಎದುರಿಸಿತ್ತು. ಇದೀಗ ಸಕಲ ರೀತಿಯಲ್ಲಿ ಬಲಿಷ್ಠವಾಗಿರುವ ಭಾರತ ವಿರುದ್ಧ ಮರ್ಯಾದ ಉಳಿಸಿಕೊಳ್ಳುವುದಕ್ಕೆ ಪ್ರಯತ್ನಿಸಲಿದೆ.

ಪಾಕ್ ವಿರುದ್ಧ ವಿಶೇಷ ದಾಖಲೆ ಬರೆದ ಭಾರತ

ಅಹಮದಾಬಾದ್​: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ವಿಶ್ವ ಕಪ್ (ind vs pak)​ ಪಂದ್ಯದಲ್ಲಿ ಭಾರತ ತಂಡ ಸುಲಭ ಜಯ ದಾಖಲಿಸಿದೆ. ಜಿದ್ದಾಜಿದ್ದಿನ ಪೈಪೋಟಿ ಎದುರಾಗಬಹುದು ಎಂದು ಅಂದಾಜಿಸಲಾಗಿದ್ದ ಪಂದ್ಯದಲ್ಲಿ ಭಾರತ ತಂಡ ಏಳು ವಿಕೆಟ್​ ಸುಲಭ ಜಯ ದಾಖಲಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಭಾರತ ತಂಡ ಪಾರಮ್ಯ ಮೆರೆದಿದೆ. ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಸೇರಿದ್ದ 1 ಲಕ್ಷಕ್ಕೂ ಅಧಿಕ ಅಭಿಮಾನಿಗಳ ಮುಂದೆ ಭಾರತ ತಂಡದ ಆಟಗಾರರು ಕ್ರಿಕೆಟ್​ ವೈಭವ ಮೆರೆದಿದ್ದಾರೆ. ಅಂದ ಹಾಗೆ ಇದು ಭಾರತ ತಂಡಕ್ಕೆ ವಿಶ್ವ ಕಪ್​ ಟೂರ್ನಿಗಳಲ್ಲಿ ಪಾಕ್ ವಿರುದ್ಧ ಲಭಿಸಿದ ಗರಿಷ್ಠ ವಿಕೆಟ್​ಗಳ ಜಯವಾಗಿದೆ. ಈ ಮೂಲಕವೂ ಭಾರತ ತಂಡ ಒಂದು ದಾಖಲೆಯನ್ನು ಮಾಡಿದೆ.

ಇದನ್ನೂ ಓದಿ : Rohit Sharma : ಒಂದು ಪಂದ್ಯದಲ್ಲಿ ನಾಲ್ಕು ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮಾ
ವಿಕೆಟ್​ಗಳ ಆಧಾರದ ಗೆಲುವನ್ನು ನೋಡಿದರೆ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಭಾರತ ತಂಡಕ್ಕೆ ಲಭಿಸಿರುವ ಗೆಲುವು ಇದುವರೆಗಿನ ವಿಶ್ವ ಕಪ್​ಗಳಲ್ಲಿ ವಿಕೆಟ್ ಆಧಾರದಲ್ಲಿ ದೊರೆತ ಗರಿಷ್ಠ ವಿಕೆಟ್​ಗಳ ಗೆಲುವಾಗಿದೆ. ಈ ಮೂಲಕವು ರೋಹಿತ್ ಬಳಗ ಜಯವನ್ನು ಇನ್ನಷ್ಟು ಸ್ಮರಣೀಯಗೊಳಿಸಿದೆ.

ಏನಾಯಿತು ಪಂದ್ಯದಲ್ಲಿ?

ಬೌಲರ್​ಗಳ ಸಂಘಟಿತ ಹೋರಾಟ ನಾಯಕ ರೋಹಿತ್​ ಶರ್ಮಾ (86) ಅವರ ಅಬ್ಬರದ ಅರ್ಧ ಶತಕದ ನೆರವು ಪಡೆದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Ind vs Pak) ವಿರುದ್ಧದ ವಿಶ್ವ ಕಪ್​ (ICC World Cup 2023) ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತವರೂರು ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಹೀನಾಯವಾಗಿ ಸೋಲಿಸಿತು. ಪಂದ್ಯ ನಡೆದ ಸ್ಟೇಡಿಯಮ್​ ಕೂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿರುವ ಕಾರಣ ಚರ್ಚೆ ಯೂ ಜೋರಾಗಿತ್ತು. ಆದರೆ ಭಾರತ ಬಳಗ ಪಾಕ್​ ತಂಡವನ್ನು ಕ್ಯಾರೇ ಎನ್ನದೇ ಗೆಲುವು ಸಾಧಿಸಿತು.

Exit mobile version