ತಿರುವನಂತಪುರ : ದಕ್ಷಿಣ ಆಫ್ರಿಕಾದ ವಿರುದ್ಧದ ಸರಣಿಗೆ ಭಾರತ ತಂಡದ ಇಬ್ಬರು ಆಟಗಾರರು ಅಲಭ್ಯರಾಗಿದ್ದಾರೆ. ಅವರಿಬ್ಬರ ಬದಲಿಗೆ ಬಿಸಿಸಿಐ ಬೇರೆ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ. ಆಲ್‌ರೌಂಡರ್ ದೀಪಕ್ ಹೂಡಾ ಹಾಗೂ ಮೊಹಮ್ಮದ್ ಶಮಿ ತಂಡದಿಂದ ಹೊರಕ್ಕೆ ಉಳಿದ ಆಟಗಾರರು. ಶಮಿ ಬದಲಿಗೆ ಬಂಗಾಳದ ಆಲ್‌ರೌಂಡರ್ ಹಾಗೂ ಆರ್‌ಸಿಬಿ ಆಟಗಾರ ಶಹಬಾಜ್ ಅಹಮದ್‌ಗೆ ಅವಕಾ ನೀಡಲಾಗಿದೆ. ಅಂತೆಯೇ ಹೂಡಾ ಬದಲಿಗೆ ಶ್ರೇಯಸ್ ಅಯ್ಯರ್‌ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಲಾಗಿದೆ.
ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮೊದಲೇ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರಿನ್ನೂ ಸಂಪೂರ್ಣ ಫಿಟ್ ಆಗಿರುವ ಸಾಧ್ಯತೆಗಳು ಇಲ್ಲ. ಹೀಗಾಗಿ ಟೀಮ್ ಇಂಡಿಯಾದ ಜತೆ ತಿರುವನಂತಪುರಕ್ಕೆ ಅವರು ಪ್ರಯಾಣ ಬೆಳೆಸಿಲ್ಲ. ಮೊಹಮ್ಮದ್ ಶಮಿ ಟಿ೨೦ ವಿಶ್ವ ಕಪ್ ತಂಡಕ್ಕೆ ಮೀಸಲು ಆಟಗಾರಗಾಗಿ ಆಯ್ಕೆಯಾಗಿದ್ದರು. ಆದಾಗ್ಯೂ ತವರಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೆ ಅವರಿಗೆ ಅವಕಾಶಗಳು ಲಭಿಸುತ್ತಿತ್ತು. ಆದರೀಗ ದಕ್ಷಿಣ ಆಫ್ರಿಕಾ ವಿರುದ್ಧವೂ ಆಡಲು ಸಾಧ್ಯವಾಗದಿರುವುದು ಹಿನ್ನಡೆಗೆ ಕಾರಣ ಎನಿಸಿದೆ.
ದೀಪಕ್ ಹೂಡ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲು ಗಾಯಗೊಂಡಿದ್ದರು. ಅವರಿಗೆ ಬೆನ್ನು ನೋವು ಆಗಿದೆ ಎಂದು ಬಿಸಿಸಿಐ ಪ್ರಕಟಣೆ ಹೊರಡಿಸಿತ್ತು. ಇದೀಗ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸಕ್ಕೂ ಲಭ್ಯವಿಲ್ಲ. ಅವರು ಟಿ೨೦ ವಿಶ್ವ ಕಪ್‌ಗೆ ಆಯ್ಕೆಯಾಗಿದ್ದ ಭಾರತ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಮಿಂಚುವ ಮೂಲಕ ಅವರಿಗೆ ಆಡುವ ೧೧ರ ಬಳಗದಲ್ಲಿ ಅವಕಾಶ ಪಡೆಯಬಹುದಾಗಿತ್ತು.
ಇದನ್ನೂ ಓದಿ | IND VS SA | ಕೇರಳದ ಅನಂತಪದ್ಮನಾಭ ಸ್ವಾಮಿ ದೇಗುಲ ಪ್ರವೇಶಿಸಿದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ