Site icon Vistara News

Team India | ನೂತನ ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮ ನೇತೃತ್ವದ ಟೀಮ್‌ ಇಂಡಿಯಾ, ಯಾವುದು ಅದು?

Team India

ಬೆಂಗಳೂರು : ರೋಹಿತ್‌ ಶರ್ಮ ನೇತೃತ್ವದ ಭಾರತ ತಂಡ ಆಸ್ಟ್ತೇಲಿಯಾ ತಂಡದ ವಿರುದ್ಧದ ಮೂರು ಪಂದ್ಯಗಳ ಟಿ೨೦ ಸರಣಿಯ ಕೊನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ನೂತನ ವಿಶ್ವ ದಾಖಲೆ ಸೃಷ್ಟಿಸಿದೆ. ಆಸೀಸ್‌ ವಿರುದ್ಧದ ಹಣಾಹಣಿ ಪ್ರಸಕ್ತ ವರ್ಷದಲ್ಲಿ ಭಾರತ ತಂಡಕ್ಕೆ ೨೧ನೇ ಜಯವಾಗಿದೆ. ಈ ಮೂಲಕ ಕ್ಯಾಲೆಂಡರ್‌ ವರ್ಷದಲ್ಲಿ ಅತಿ ಹೆಚ್ಚು ಪಂದ್ಯವನ್ನು ಗೆದ್ದ ವಿಶ್ವ ದಾಖಲೆ ಮಾಡಿತು.

ಭಾರತ ತಂಡ ೨೦೨೧ರಲ್ಲಿ ಇದುವರೆಗೆ ೨೧ ಪಂದ್ಯಗಳನ್ನು ಜಯಿಸಿದ್ದು, ಇನ್ನೂ ಹಲವು ಸರಣಿಗಳಲ್ಲಿ ಪಾಲ್ಗೊಳ್ಳಬೇಕಾಗಿದೆ. ಹೀಗಾಗಿ ಗರಿಷ್ಠ ಸಂಖ್ಯೆಯ ಪಂದ್ಯ ಗೆದ್ದ ದಾಖಲೆ ಮಾಡುವ ಸಾಧ್ಯತೆಗಳಿವೆ. ಪಾಕಿಸ್ತಾನ ತಂಡ ೨೦೨೧ ರಲ್ಲಿ ೨೦ ಪಂದ್ಯಗಳನ್ನು ಗೆದ್ದು ಇದುವರೆಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು. ೨೦೧೮ರಲ್ಲೂ ಪಾಕಿಸ್ತಾನ ತಂಡ ೧೭ ಹಣಾಹಣಿಯಲ್ಲಿ ಜಯ ಸಾಧಿಸಿ ಸಾಧನೆ ಮಾಡಿತ್ತು. ೨೦೨೧ರಲ್ಲಿ ೧೫ ಪಂದ್ಯ ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡ ಈ ಸಾಲಿನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

Exit mobile version