ಗುವಾಹಟಿ: ಭಾರತ ಹಾಗೂ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸರಣಿಯ ಎರಡನೇ ಟಿ೨೦ ಪಂದ್ಯ ಭಾನುವಾಋ ಒಡಿಶಾದ ಗುವಾಹಟಿಯ ಬರಸ್ಪಾರ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯಲಿದೆ. ತಿರುವನಂತಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಅಮೋಘ ವಿಜಯ ಸಾಧಿಸಿರುವ ಟೀಮ್ ಇಂಡಿಯಾ ಶುಕ್ರವಾರವೇ ಗುವಾಹಟಿ ತಲುಪಿದೆ. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಕಲಾ ತಂಡಗಳ ಜತೆಗೆ ಅದ್ಧೂರಿ ಸ್ವಾಗತ ಕೋರಲಾಗಿತ್ತು. ಅಂತೆಯೇ ಒಂದು ದಿನ ವಿಶ್ರಾಂತಿ ಪಡೆದುಕೊಂಡ ಟೀಮ್ ಇಂಡಿಯಾದ ಸದಸ್ಯರು ಶನಿವಾರ ಜೋರು ಅಭ್ಯಾಸ ನಡೆಸಿದ್ದಾರೆ.
ಈ ಸರಣಿಯವನ್ನು ಕೈವಶ ಮಾಡಿಕೊಂಡು ಮುಂದಿನ ಟಿ೨೦ ವಿಶ್ವ ಕಪ್‌ಗೆ ತೆರಳುವುದು ಟೀಮ್ ಇಂಡಿಯಾದ ಕನಸಾಗಿದೆ. ಆದರೆ, ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಅವರ ಗಾಯದ ಸಮಸ್ಯೆ ಟೀಮ್ ಮ್ಯಾನೇಜ್ಮೆಂಟ್‌ಗೆ ತಲೆ ನೋವು ತಂದಿದೆ. ಆದಾಗ್ಯೂ ಹೈದರಾಬಾದ್ ಮೂಲದ ವೇಗಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಧಾನ ಬೌಲರ್ ಮೊಹಮ್ಮದ್ ಸಿರಾಜ್ ತಂಡವನ್ನು ಸೇರಿಕೊಂಡಿದ್ದಾರೆ.
ಮೊಹಮ್ಮದ್ ಸಿರಾಜ್, ರಿಷಭ್ ಪಂತ್, ಉಮ್ರಾನ್ ಮಲಿಕ್, ಅಕ್ಷರ್ ಪಟೇಲ್, ಉಮೇಶ್ ಯಾದವ್ ಮತ್ತಿರರು ಸತವಾಗಿ ಅಭ್ಯಾಸ ನಡೆಸಿದರು. ಕೋಚ್ ರಾಹುಲ್ ದ್ರಾವಿಡ್ ಅವರು ಸರಿ-ತಪ್ಪುಗಳನ್ನು ಗುರುತಿಸಿ ಹೇಳಿದರು.
ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆ. ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಆರ್ ಅಶ್ವಿನ್, ಯಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಾಹರ್ ಉಮೇಶ್ ಯಾದವ್, ಶ್ರೇಯಸ್ ಅಯ್ಯರ್, ಶಹಬಾಜ್ ಅಹ್ಮದ್, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ |T20 World Cup | ವಿಶ್ವ ಕಪ್‌ಗೆ ಮೊದಲು ಭಾರತ ತಂಡಕ್ಕೆ ಸಾಲು ಸಾಲು ಅಭ್ಯಾಸ ಪಂದ್ಯಗಳು