Site icon Vistara News

Rohit Sharma | ರೋಹಿತ್‌ ಶರ್ಮ ಮತ್ತೆ ಬ್ಯಾಟಿಂಗ್‌ನಲ್ಲಿ ಫೇಲ್‌, ಮ್ಯಾನೇಜ್ಮೆಂಟ್‌ಗೆ ಮತ್ತೆ ಮಂಡೆ ಬಿಸಿ

IND VS LANKA

ಬ್ರಿಸ್ಬೇನ್‌ : ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಸತತವಾಗಿ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿರುವುದು ಮ್ಯಾನೇಜ್ಮೆಂಟ್‌ ಮಂಡೆ ಬಿಸಿಗೆ ಕಾರಣವಾಗಿದೆ. ಸೋಮವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮೊದಲ ಬ್ಯಾಟ್‌ ಮಾಡಿದ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೭ ವಿಕೆಟ್‌ ನಷ್ಟಕ್ಕೆ ೧೮೬ ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಬಳಗ ೨೦ ಓವರ್‌ಗಳು ಮುಕ್ತಾಯಗೊಂಡಾಗ ೧೮೦ ರನ್‌ಗಳಿಗೆ ಆಲ್‌ಔಟ್ ಆಯಿತು. ಈ ಹಣಾಹಣಿಯಲ್ಲಿ ಭಾರತ ಗೆದ್ದಿರುವುದೇನೋ ಸರಿ. ಆದರೆ, ರೋಹಿತ್ ಶರ್ಮ ಬ್ಯಾಟಿಂಗ್‌ನಲ್ಲಿ ಸಂಪೂರ್ಣವಾಗಿ ವೈಫಲ್ಯ ಎದುರಿಸಿ ಆತಂಕ ಮೂಡಿಸಿದರು.

ಇನಿಂಗ್ಸ್‌ ಆರಂಭಿಸಿದ ಅವರು ಖಾತೆ ತೆರೆಯುವುದಕ್ಕೆ ಸುಮಾರು ಐದು ಓವರ್‌ಗಳಷ್ಟು ಕಾದರು. ಅಲ್ಲದೆ, ತಲಾ ಒಂದು ಸಿಕ್ಸರ್‌ ಹಾಗೂ ಫೋರ್‌ ಮೂಲಕ ೧೫ ರನ್‌ ಬಾರಿಸಲು ೧೪ ಎಸೆತ ತೆಗೆದುಕೊಂಡರು. ೭.೩ನೇ ಓವರ್‌ನಲ್ಲಿ ಕೆ. ಎಲ್‌ ರಾಹುಲ್‌ ಔಟಾಗುವ ಮೊದಲು ೩೩ ಎಸೆತಗಳಲ್ಲಿ ೫೭ ರನ್‌ ಬಾರಿಸಿದ್ದರು. ೮.೨ನೇ ಓವರ್‌ನಲ್ಲಿ ರೋಹಿತ್‌ ಶರ್ಮ ಔಟಾದರು. ಈ ಮೂಲಕ ಅವರು ಅತ್ಯಂತ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ರೋಹಿತ್‌ ಶರ್ಮ ಅವರು ಕಳೆದ ಹಲವು ಪಂದ್ಯಗಳಿಂದ ಕಳಪೆ ಫಾರ್ಮ್‌ನಲ್ಲಿದ್ದಾರೆ. ಅರಂಭಿಕರಾಗಿ ಬ್ಹಾಟ್‌ ಮಾಡುತ್ತಿರುವ ಅವರು ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ನೆರವಿನಿಂದ ತಂಡ ಗೆಲುವು ಸಾಧಿಸುತ್ತಿದೆ.

ಇದನ್ನೂ ಓದಿ | T20 World Cup | 11ರ ಪೋರನೊಂದಿಗೆ ಕ್ರಿಕೆಟ್ ಆಡಿದ ರೋಹಿತ್‌ ಶರ್ಮ, ಅಭಿಮಾನಿಗಳ ಮೆಚ್ಚುಗೆ

Exit mobile version