ಮುಂಬಯಿ: ಭಾರತ ಕ್ರಿಕೆಟ್(Team India) ತಂಡದ ಕಿಟ್‌ನ ಪ್ರಾಯೋಜಕತ್ವ ವಹಿಸಲು ಪ್ರಸಿದ್ಧ ಜಾಗತಿಕ ಕಂಪೆನಿ ಅಡಿಡಾಸ್ ಮುಂದೆ ಬಂದಿದೆ. ಅದರಂತೆ ಇನ್ನು ಮುಂದೆ ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಜೆರ್ಸಿಯಲ್ಲಿ ಅಡಿಡಾಸ್ ಹೆಸರು ಕಾಣಿಸಿಕೊಳ್ಳಲಿದೆ.
ಅಡಿಡಾಸ್ ಸಂಸ್ಥೆಯು ಈ ವರ್ಷದ ಜೂನ್ ತಿಂಗಳಿನಿಂದ ಭಾರತೀಯ ಕ್ರಿಕೆಟ್ ತಂಡದ ಕಿಟ್ ಪ್ರಾಯೋಜತ್ವ ವಹಿಸಲಿದೆ. ಇದರೊಂದಿಗೆ ಕಿಲ್ಲರ್ ಬ್ಯಾಂಡ್ನ ಒಪ್ಪಂದ ಮುಕ್ತಾಯಗೊಳ್ಳಲಿದೆ. ಮುಂದಿನ ಐದು ವರ್ಷಗಳವರೆಗೆ ಅಡಿಡಾಸ್ ಕಂಪನಿಯ ಹೆಸರು ಭಾರತೀಯ ಕ್ರಿಕೆಟ್ ಆಟಗಾರರ ಜೆರ್ಸಿಯಲ್ಲಿ ಇರಲಿದೆ. ಒಪ್ಪಂದದ ಅಂತಿಮ ರೂಪವನ್ನು ನಿರ್ಧರಿಸಲಾಗುತ್ತಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಟೀಮ್ ಇಂಡಿಯಾ ಕಿಟ್ ಪ್ರಾಯೋಜಕ ಸಂಸ್ಥೆಯಾದ ಎಂಪಿಎಲ್, ತಮ್ಮ ಹಕ್ಕುಗಳನ್ನು ಕೇವಲ್ ಕಿರಣ್ ಕ್ಲೋಥಿಂಗ್ ಲಿಮಿಟ್ (KKCL)ಗೆ ಒಪ್ಪಂದದ ಉಳಿದ ಅವಧಿಗೆ ನಿಯೋಜಿಸುವ ಬಗ್ಗೆ ಬಿಸಿಸಿಐಗೆ ಇಮೇಲ್ ಮಾಡಿತ್ತು ಎಂದು ವರದಿಯಾಗಿದೆ. ಆದರೆ ಈ ವರ್ಷ ಮೇಲಿಂದ ಮೇಲೆ ಪಂದ್ಯಗಳಿರುವುದರಿಂದ ಕನಿಷ್ಠ ಮಾರ್ಚ್ ತಿಂಗಳವರೆಗಾದರೂ ತಮ್ಮ ಸಹಭಾಗಿತ್ವವನ್ನು ಮುಂದುವರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಎಂಪಿಎಲ್ಗೆ ಸೂಚಿಸಿತ್ತು. ಹೀಗಾಗಿ ಎಂಪಿಎಲ್ ಸಂಸ್ಥೆಯು ಕಿಲ್ಲರ್ ಜೀನ್ಸ್ ಮತ್ತು ಲಾಮನ್ ಪಿಜಿ3 ಜೀನ್ಸ್‌ನಂತಹ ಬ್ರ್ಯಾಂಡ್‌ಗಳನ್ನು ಹೊಂದಿರುವ ಕೇವಲ್ ಕಿರಣ್ ಕ್ಲೋಥಿಂಗ್ ಲಿಮಿಟ್ (ಕೆಕೆಸಿಎಲ್)ಗೆ ಜೆರ್ಸಿಯ ಲೋಗೋದ ಹಕ್ಕುಗಳನ್ನು ನೀಡಿತ್ತು.
ಇದನ್ನೂ ಓದಿ IND VS AUS: ಭಾರತವನ್ನು ತವರಿನಲ್ಲಿ ಸೋಲಿಸುವುದು ಅಸಾಧ್ಯ; ರಮೀಜ್ ರಾಜಾ
ಜನವರಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಭಾರತ ತಂಡದ ಕಿಟ್ ಪ್ರಾಯೋಜಕರು ಬದಲಾಗಿದ್ದರು. ಆಗ ಎಂಪಿಎಲ್ ಬದಲಿಗೆ ಕಿಲ್ಲರ್ ಹೆಸರನ್ನು ಜೆರ್ಸಿಯ ಬಲ ಭಾಗದಲ್ಲಿ ಮುದ್ರಿಸಲಾಗಿತ್ತು. ಇದೀಗ ಮುಂದಿನ ದಿನಗಳಲ್ಲಿ ಕಿಲ್ಲರ್ ಬದಲು ಅಡಿಡಾಸ್ ಲೋಗೊ ಕಾಣಸಿಕೊಳ್ಳಲಿದೆ.