ಅಡಿಲೇಡ್ : ಟಿ೨೦ ವಿಶ್ವ ಕಪ್‌ನ ಸೂಪರ್-೧೨ ಹಂತದಲ್ಲಿ ಭಾರತದ ತಂಡಕ್ಕೆ ನಾಲ್ಕನೇ ಸವಾಲು ಬಾಂಗ್ಲಾದೇಶ ವಿರುದ್ಧ. ಗುಂಪು ೨ರ ತಂಡಗಳ ನಡುವಿನ ಈ ಪಂದ್ಯ ಬುಧವಾರ ಅಡಿಲೇಡ್‌ನ ಓವಲ್ ಗ್ರೌಂಡ್‌ನಲ್ಲಿ ನಡೆಯಲಿದೆ. ಪರ್ತ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಹಣಾಹಣಿಯಲ್ಲಿ ಐದು ವಿಕೆಟ್‌ಗಳ ಸೋಲು ಅನುಭವಿಸಿರುವ ರೋಹಿತ್ ಶರ್ಮ ನೇತೃತ್ವದ ಭಾರತ ತಂಡಕ್ಕೆ ಇನ್ನುಳಿದ ಪಂದ್ಯಗಳಲ್ಲಿ ಗೆಲುವು ಅನಿವಾರ್ಯವಾಗಿದ್ದು, ಹಾಗಾದರೆ ಮಾತ್ರ ಸೆಮೀಸ್ ಹಂತಕ್ಕೆ ಸುಲಭ ದಾರಿ ಕಂಡುಕೊಳ್ಳಬಹುದು. ಹೀಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ನೆರೆಯ ಬಾಂಗ್ಲಾ ವಿರುದ್ಧದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಈ ಪಂದ್ಯದಲ್ಲಿ ಪಾಲ್ಗೊಳ್ಳಲು ಟೀಮ್ ಇಂಡಿಯಾದ ಆಟಗಾರರು ಸೋಮವಾರ ಅಡಿಲೇಡ್ ತಲುಪಿದ್ದು, ಅಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಪರ್ತ್‌ನ ಹೋಟೆಲ್ ಬಿಟ್ಟ ಟೀಮ್ ಆಟಗಾರರು ನೇರವಾಗಿ ಅಡಿಲೇಡ್‌ನ ಹೋಟೆಲ್ ಸೇರಿಕೊಂಡಿದ್ದು, ಒಂದು ದಿನದ ವಿಶ್ರಾಂತಿ ಬಳಿಕ ನೆಟ್‌ಪ್ರಾಕ್ಟೀಸ್ ಆರಂಭಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಡಿಲೇಡ್‌ಗೆ ತಲುಪಿರುವ ಫೋಟೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಚಿತ್ರದಲ್ಲಿ ಸೂರ್ಯಕುಮಾರ್ ಯಾದವ್, ಯಜ್ವೇಂದ್ರ ಚಹಲ್ ಹಾಗೂ ಮೀಸಲು ಆಟಗಾರ ಮೊಹಮ್ಮದ್ ಸಿರಾಜ್ ಅವರಿದ್ದಾರೆ.
ಬಾಂಗ್ಲಾದೇಶ ತಂಡ ಪ್ರಸಕ್ತ ಆವೃತ್ತಿಯ ವಿಶ್ವ ಕಪ್‌ನಲ್ಲಿ ಪ್ರಭಾವಿ ಪ್ರದರ್ಶನ ತೋರುತ್ತಿಲ್ಲ. ಆದಾಗ್ಯೂ ಟಿ೨೦ ಮಾದರಿಯಲ್ಲಿ ಯಾವುದೇ ತಂಡಗಳ ಸಾಮರ್ಥ್ಯವನ್ನು ಅಲ್ಲಗೆಳೆಯುವಂತೆ ಇಲ್ಲ. ಹೀಗಾಗಿ ಈ ಪಂದ್ಯವನ್ನು ಗೆಲ್ಲುವ ನಿಟ್ಟಿನಲ್ಲಿ ಭಾರತ ತಂಡ ಭರ್ಜರಿ ರಣತಂತ್ರ ರೂಪಿಸಬೇಕಾಗಿದೆ.
ಇದನ್ನೂ ಓದಿ ವ| IND vs SA | ಕಳಪೆ ಫೀಲ್ಡಿಂಗ್‌ನಲ್ಲೂ ನಾವಿಬ್ಬರೂ ಸಮಾನರು ಎಂಬುದನ್ನು ಸಾಬೀತುಪಡಿಸಿದ ರೋಹಿತ್, ವಿರಾಟ್!