Site icon Vistara News

Team India | ಮೆಲ್ಬೋರ್ನ್​ ತಲುಪಿದ ರೋಹಿತ್​ ಪಡೆ; ಶುಕ್ರವಾರದಿಂದ ಅಭ್ಯಾಸ ಆರಂಭ

ml

ಮೆಲ್ಬೋರ್ನ್​: ಬಾಂಗ್ಲಾದೇಶದ ವಿರುದ್ಧ 5 ರನ್‌ಗಳ ರೋಚಕ ಗೆಲುವು ಸಾಧಿಸಿದ ಭಾರತ ತಂಡ(Team India) ಮುಂದಿನ ಪಂದ್ಯಕ್ಕಾಗಿ ಗುರುವಾರ ಮೆಲ್ಬೋರ್ನ್ ತಲುಪಿದೆ. ಭಾರತ ತಂಡ ಮೆಲ್ಬೋರ್ನ್​ ತಲುಪಿದ ಫೋಟೊವನ್ನು ಮೊಹಮ್ಮದ್​ ಸಿರಾಜ್​ ಮತ್ತು ರಿಷಭ್​ ಪಂತ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು “ಟ್ರಾವೆಲ್​ ಟು ಮೆಲ್ಬೋರ್ನ್​” ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಭಾನುವಾರ ಜಿಂಬಾಬ್ವೆ ವಿರುದ್ಧ ಭಾರತ ತನ್ನ ಕೊನೆಯ ಟಿ20 ವಿಶ್ವ ಕಪ್​ನ ಸೂಪರ್ 12 ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ.

ಗುರುವಾರ ಮೆಲ್ಬೋರ್ನ್ ತಲುಪಿದ ಭಾರತ ತಂಡ ಒಂದು ದಿನದ ವಿಶ್ರಾಂತಿ ಪಡೆದಿದ್ದು ಶುಕ್ರವಾರ ಅಭ್ಯಾಸದಲ್ಲಿ ಭಾಗವಹಿಸಲಿವೆ. ಭಾರತ ಸೆಮಿಫೈನಲ್ ತಲುಪಲು ಜಿಂಬಾಬ್ವೆ ವಿರುದ್ಧ ಗೆಲುವು ಮುಖ್ಯವಾಗಿದೆ. ಶುಕ್ರವಾರ ನೆಟ್ಸ್​ನಲ್ಲಿ ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಮತ್ತು ಇತರರು ಐಚ್ಛಿಕ ಅಭ್ಯಾಸವನ್ನು ನಡೆಸಲಿದ್ದಾರೆ.

ಟೀಮ್​ ಇಂಡಿಯಾ ಪರ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಕೆ.ಎಲ್ ರಾಹುಲ್ ಕೂಡ ಫಾರ್ಮ್‌ಗೆ ಮರಳಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಕೂಡ ತಮ್ಮ ಫಾರ್ಮ್‌ ಕಂಡುಕೊಂಡರೆ ಭಾರತಕ್ಕೆ ಜಯ ಸುಲಭವಾಗಲಿದೆ. ಉಳಿದಂತೆ ಟೀಮ್​ ಇಂಡಿಯಾದ ಬೌಲರ್​ಗಳಾದ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅರ್ಶ್​ದೀಪ್​ ಸಿಂಗ್ ಭಾರತದ ಪ್ರಮುಖ ವಿಕೆಟ್ ಟೇಕರ್ ಆಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ | IND VS PAK | ಬಾಂಗ್ಲಾ ಎದುರು ಭಾರತಕ್ಕೆ ​ ಗೆಲುವು; ಅಂಪೈರ್​ ಎರಾಸ್ಮಸ್ ವಿರುದ್ಧ ಪಾಕ್​ ಆಕ್ರೋಶ

Exit mobile version