Site icon Vistara News

Team India | ಹರಾರೆಯಲ್ಲಿ ನಿಂತು ಭಾರತ ಮಾತಾ ಕಿ ಜೈ ಕೂಗಿದ ಟೀಮ್‌ ಇಂಡಿಯಾ

Team India

ಹರಾರೆ : ಭಾರತ ಕ್ರಿಕೆಟ್‌ ತಂಡ (Team India) ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಜಿಂಬಾಬ್ವೆ ಪ್ರವಾಸದಲ್ಲಿದೆ. ಕೆ.ಎಲ್‌ ರಾಹುಲ್‌ ನೇತೃತ್ವದ ತಂಡ ಹರಾರೆ ಕ್ಲಬ್‌ ಕ್ರಿಕೆಟ್‌ ಸ್ಟೇಡಿಮ್‌ನಲ್ಲಿ ಭಾರತ ತಂಡದ ಆಟಗಾರರು ಅಭ್ಯಾಸವನ್ನೂ ಆರಂಭಿಸಿದ್ದಾರೆ. ಏತನ್ಮಧ್ಯೆ, ಜಿಂಬಾಬ್ವೆಯ ರಾಜಧಾನಿಯಲ್ಲಿ ವಾಸ್ತವ್ಯ ಹೂಡಿರುವ ಟೀಮ್ ಇಂಡಿಯಾ ಬಳಗ ಅಲ್ಲೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಂಡಿದೆ. ಆಟಗಾರರು ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸುತ್ತಿರುವ ಚಿತ್ರವನ್ನು ಬಿಸಿಸಿಐ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಮೂರು ಪಂದ್ಯಗಳ ಸರಣಿ ಆಗಸ್ಟ್‌ ೧೮ರಂದು ಆರಂಭಗೊಳ್ಳಲಿದ್ದು, ೨೦ ಹಾಗೂ ೨೨ರಂದು ಉಳಿದೆರಡು ಟಿ೨೦ ಪಂದ್ಯಗಳು ನಡೆಯಲಿವೆ. ೨೦೧೬ರಲ್ಲಿ ಭಾರತ ತಂಡ ಮಹೇಂದ್ರ ಸಿಂಗ್‌ ಧೋನಿ ನೇತೃತ್ವದಲ್ಲಿ ಜಿಂಬಾಬ್ವೆಗೆ ತೆರಳಿದತ್ತು. ಆ ಪಂದ್ಯದಲ್ಲಿ ಭಾರತ ತಂಡ ಸರಣಿ ವಿಜಯ ಸಾಧಿಸಿತ್ತು. ಹಿರಿಯ ಆಟಗಾರರನ್ನು ಹೊರತುಪಡಿಸಿಯೂ ಪ್ರವಾಸ ತೆರಳಿರುವ ಭಾರತ ತಂಡ ಬಲಿಷ್ಠವಾಗಿದೆ. ಹಾಗೆಂದು ಯುವ ಅಟಗಾರರನ್ನು ಒಳಗೊಂಡಿರುವ ಜಿಂಬಾಬ್ವೆ ತಂಡವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ವಾರದ ಹಿಂದೆ ಜಿಂಬಾಬ್ವೆ ಪ್ರವಾಸ ಬಂದಿದ್ದ ಬಾಂಗ್ಲಾದೇಶ ತಂಡವನ್ನು ೨-೧ ಅಂತರದಿಂದ ಸೋಲಿಸಿತ್ತು. ಹೀಗಾಗಿ ಜಿಂಬಾಬ್ವೆಯ ಯುವ ಪಡೆಯನ್ನು ಎದುರಿಸಲು ಕೆ. ಎಲ್‌ ರಾಹುಲ್ ನೇತೃತ್ವದ ಭಾರತ ತಂಡ ಸಜ್ಜಾಗಿದೆ.

ಹರಾರೆಯಲ್ಲಿರುವ ಭಾರತ ತಂಡದ ಆಟಗಾರರು

ಕೆ ಎಲ್​ ರಾಹುಲ್​​ (ನಾಯಕ), ಶಿಖರ್ ಧವನ್​(ಉಪ ನಾಯಕ​), ಋತುರಾಜ್ ಗಾಯಕ್ವಾಡ, ದೀಪಕ್ ಹೂಡಾ, ಶುಬ್ಮನ್ ಗಿಲ್, ಇಶಾನ್ ಕಿಶನ್​(ವಿಕೆಟ್‌ಕೀಪರ್‌), ರಾಹುಲ್ ತ್ರಿಪಾಠಿ, ಸಂಜು ಸ್ಯಾಮನ್ಸ್​, ವಾಷಿಂಗ್ಟನ್ ಸುಂದರ್, ಶಾರ್ದುಲ್‌ ಠಾಕೂರ್, ಆವೇಶ್ ಖಾನ್​, ಕುಲ್ದೀಪ್ ಯಾದವ್​, ಅಕ್ಷರ್ ಪಟೇಲ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್‌.

ಇದನ್ನೂ ಓದಿ | IND vs ZIM ODI | ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ ಆಟಗಾರರು

Exit mobile version