Site icon Vistara News

Team India: ಧರ್ಮಶಾಲಾದಲ್ಲಿ ಟ್ರಕ್ಕಿಂಗ್ ಮುಗಿಸಿ ಲಕ್ನೋ ತಲುಪಿದ ಟೀಮ್​ ಇಂಡಿಯಾ

team india at lucknow

ಲಕ್ನೋ: ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯ ಗೆದ್ದ ಟೀಮ್​ ಇಂಡಿಯಾಕ್ಕೆ(team india) ಬಿಸಿಸಿಐ(BCCI) 2 ದಿನಗಳ ರಜೆ ನೀಡಿತ್ತು. ಈ ರಜೆ ಅವಧಿಯಲ್ಲಿ ತಂಡದ ಆಟಗಾರರು ತಮ್ಮ ಕುಟುಂಬದೊಂದಿಗೆ ಮತ್ತು ಕೋಚ್​ ದ್ರಾವಿಡ್(rahul dravid)​ ಜತೆ ಹಿಮಾಚಲ ಪ್ರದೇಶದ ಕೆಲ ಬೆಟ್ಟ ಗುಡ್ಡಗಳಿಗೆ ಟ್ರಕ್ಕಿಂಗ್​ ಮಾಡಿ ಸಮಯ ಕಳೆದಿದ್ದರು. ಇದೀಗ ರಜೆ ಮುಗಿಸಿರುವ ಎಲ್ಲ ಆಟಗಾರರು ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನಾಡಲು ಲಕ್ನೋಗೆ ಬಂದಿಳಿದಿದ್ದಾರೆ.

ಗುರುವಾರ ಬೆಳಗ್ಗಿನ ಜಾವ ಟೀಮ್ ಇಂಡಿಯಾ ಆಟಗಾರರು ಲಕ್ನೋ ತಲುಪಿದ್ದಾರೆ. ಭಾನುವಾರ ಇಂಗ್ಲೆಂಡ್​ ವಿರುದ್ಧ ಪಂದ್ಯವನ್ನಾಡಲಿದೆ. ಈಗಾಗಲೇ ಭಾರತ ಆಡಿದ 5 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್​ ವಿರುದ್ಧ ಗೆದ್ದರೆ ಭಾರತ ಅಧಿಕೃತವಾಗಿ ಸೆಮಿಫೈನಲ್​ ಪ್ರವೇಶ ಪಡೆಯಲಿದೆ. ಅತ್ತ ಇಂಗ್ಲೆಂಡ್​ ಸೋಲು ಕಂಡರೆ ಟೂರ್ನಿಯಿಂದ ಹೊರಬೀಳಲಿದೆ.

ಪಾಂಡ್ಯಗೆ ರೆಸ್ಟ್​

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಎಡ ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್​ ಪಾಂಡ್ಯ(Hardik Pandya) ಅವರು ಈ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ಗಾಯದ ಬಗ್ಗೆ ಬಿಸಿಸಿಐ(BCCI) ಈಗಾಗಲೇ​ ಅಪ್​ಡೇಟ್ ನೀಡಿದ್ದು ಪಾಂಡ್ಯ ಅವರು ಲಕ್ನೋ ಪಂದ್ಯದಲ್ಲಿಯೂ ಕಣಕ್ಕಿಳಿಯುವುದು ಅನುಮಾನ ಎಂದು ಹೇಳಿದೆ. ಕೆಲ ಮೂಲಗಳ ಪ್ರಕಾರ ಪಾಂಡ್ಯ ಅವರು ಮುಂದಿನ ಎಲ್ಲ ಲೀಗ್​ ಪಂದ್ಯಗಳಿಗೆ ವಿಶ್ರಾಂತಿ ಪಡೆದು ಸೆಮಿಫೈನಲ್​ ಪಂದ್ಯದ ವೇಳೆ ತಂಡ ಸೇರಲಿದ್ದಾರೆ ಎನ್ನಲಾಗಿದೆ.

ಬಾಂಗ್ಲಾ ನಡುವಣ ಪಂದ್ಯದ 9ನೇ ಓವರ್ ಎಸೆಯಲು ಬಂದ ಹಾರ್ದಿಕ್ ಪಾಂಡ್ಯ ಅವರು ಲಿಟನ್ ದಾಸ್ ಬಾರಿಸಿದ ಬೌಂಡರಿ ತಡೆಯುವ ಯತ್ನದಲ್ಲಿ ಸ್ಲಿಪ್ ಆಗಿ ಕೆಳಗೆ ಬಿದ್ದು ಪಾದದ ನೋವಿಗೆ ಸಿಲುಕಿದ್ದರು. ಕೂಡಲೇ ಫಿಸಿಯೊ ಮೈದಾನಕ್ಕೆ ಧಾವಿಸಿ ಚಿಕಿತ್ಸೆ ನೀಡಿದ್ದರು. ಆದರೆ ನೋವು ಕಡಿಮೆಯಾಗದ ಕಾರಣ ಹಾರ್ದಿಕ್ ಪಾಂಡ್ಯ ಮೈದಾನ ತೊರೆದಿದ್ದರು. ಪಾಂಡ್ಯ ಅವರ ಉಳಿದ ಮೂರು ಎಸೆತಗಳನ್ನು ವಿರಾಟ್ ಕೊಹ್ಲಿ ಅವರು ಪೂರ್ಣಗೊಳಿಸಿದ್ದರು.

ಲಕ್ನೋ ತಲುಪಿದ ಟೀಮ್​ ಇಂಡಿಯಾ

ಪಂದ್ಯ ಮುಗಿದ ಮರು ದಿನ ಪಾಂಡ್ಯ ಅವರು ಬೆಂಗಳೂರಿನಲ್ಲಿರುವ ಮಣಿಪಾಲ ಆಸ್ಪತ್ರಗೆ ಬಂದು ಹೆಚ್ಚಿನ ಚಿಕಿತ್ಸೆ ಪಡೆದಿದ್ದರು. ಸದ್ಯ ಅವರು ಬೆಂಗಳೂರಿನ ಎನ್​ಸಿಎಯಲ್ಲಿ ಫಿಟ್​ನೆಸ್​ ಪರೀಕ್ಷೆಗೆ ಒಳಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಅವರು ಲಕ್ನೋಗೆ ಪ್ರಯಾಣಿಸಿಲ್ಲ ಎಂದು ವರದಿಯಾಗಿದೆ.

ಬ್ಯಾಟಿಂಗ್​ ಶ್ರೇಯಾಂಕದಲ್ಲಿ ರೋಹಿತ್​ ಹಿಂದಿಕ್ಕಿದ ಕೊಹ್ಲಿ

ಐಸಿಸಿ ನೂತನ ಏಕದಿನ(ICC Odi Ranking) ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(747 ರೇಟಿಂಗ್​ ಅಂಕ) ಅವರು ಉತ್ತಮ ಪ್ರಗತಿ ಸಾಧಿಸಿದ್ದಾರೆ. ನಾಯಕ ರೋಹಿತ್​ ಶರ್ಮ(Rohit Sharma)(725 ರೇಟಿಂಗ್​ ಅಂಕ) ಅವರನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ್ದಾರೆ. ಕಳೆದ ವಾರ ಕೊಹ್ಲಿ(virat kohli) 8ನೇ ಸ್ಥಾನದಲ್ಲಿದ್ದರು.

ಇದನ್ನೂ ಓದಿ Odi Cricket History: ಏಕದಿನ ಕ್ರಿಕೆಟ್​ನಲ್ಲಿ ಗೆಲುವಿನ ದಾಖಲೆ ಬರೆದ ಆಸ್ಟ್ರೇಲಿಯಾ

ಕಳೆದ ವಾರ ಪ್ರಕಟಗೊಂಡ ಶ್ರೇಯಾಂಕ ಪಟ್ಟಿಯಲ್ಲಿ ರೋಹಿತ್​ ಶರ್ಮ ಅವರು 5 ಸ್ಥಾನಗಳ ಏರಿಕೆ ಕಂಡು 6ನೇ ಸ್ಥಾನಕ್ಕೇರಿದ್ದರು. ಆದರೆ ಈಗ ಪ್ರಕಟಗೊಂಡ ಶ್ರೇಯಾಂಕ ಪಟ್ಟಿಯಲ್ಲಿ 2 ಸ್ಥಾನಗಳ ಕುಸಿತ ಕಂಡು 8ನೇ ಸ್ಥಾನ ಪಡೆದಿದ್ದಾರೆ. ಆದರೆ ರೇಟಿಂಗ್​ ಅಂಕ ಸುಧಾರಣೆ ಕಂಡಿದೆ. ವಿರಾಟ್​ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಸ್ಟಾರ್​ ಎಡಗೈ ಬ್ಯಾಟರ್​ ಡೇವಿಡ್​ ವಾರ್ನರ್​ ಅವರು ತಲಾ 747 ರೇಟಿಂಗ್​ ಅಂಕದೊಂದಿಗೆ ಜಂಟಿಯಾಗಿ 5ನೇ ಸ್ಥಾನ ಹಂಚಿಕೊಂಡಿದ್ದಾರೆ. ಕೊಹ್ಲಿ ಸದ್ಯ ಆಡಿದ 5 ಪಂದ್ಯಗಳಿಂದ 354 ರನ್​ ಬಾರಿಸಿದ್ದಾರೆ.

ನಂ.1 ಸ್ಥಾನಕ್ಕಾಗಿ ಟೀಮ್​ ಇಂಡಿಯಾದ ಯುವ ಬ್ಯಾಟರ್​ ಶುಭಮನ್​ ಗಿಲ್​ ಮತ್ತು ಪಾಕ್​ ನಾಯಕ ಬಾಬರ್​ ಅಜಂ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸದ್ಯಕ್ಕೆ ಬಾಬರ್​ ಅಗ್ರಸ್ಥಾನದಲ್ಲಿದ್ದಾರೆ. ಪಚಂಡ ಬ್ಯಾಟಿಂಗ್​ ನಡೆಸುತ್ತಿರುವ ದಕ್ಷಿಣ ಆಫ್ರಿಕಾ ತಂಡದ ಹೆನ್ರಿಚ್​ ಕ್ಲಾಸೆನ್(756)​ ಅವರು 4 ಸ್ಥಾನಗಳ ಏರಿಕೆ ಕಂಡು ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version