ಪುಣೆ: ಹ್ಯಾಟ್ರಿಕ್ ಗೆಲುವು ಸಾಧಿಸಿ ಮುನ್ನುಗುತ್ತಿರುವ ಟೀಮ್ ಇಂಡಿಯಾ(Team India) ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಬಾಂಗ್ಲಾದೇಶ(India vs Bangladesh) ವಿರುದ್ಧ ಗುರುವಾರ ಪಂದ್ಯವನ್ನಾಡಲಿದೆ. ಈ ಪಂದ್ಯ ಪುಣೆಯಲ್ಲಿ ನಡೆಯಲಿದೆ. ಇದಕ್ಕಾಗಿ ಭಾರತೀಯ ಆಟಗಾರರು ಪುಣೆ(Pune) ತಲುಪಿದ್ದಾರೆ. ಆಟಗಾರರು ಪುಣೆ ತಲುಪಿದ ವಿಚಾರವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡು ಪ್ರಕಟಿಸಿದೆ.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆ.ಎಎಲ್ ರಾಹುಲ್, ಆರ್.ಅಶ್ವಿನ್ ಸೇರಿ ಎಲ್ಲ ಆಟಗಾರರು ಅಹಮದಾಬಾದ್ನ ವಿಮಾನ ನಿಲ್ದಾಣದಿಂದ ಪುಣೆ ತಲುಪಿರುವ ದೃಶ್ಯವನ್ನು ಬಿಸಿಸಿಐ ವಿಡಿಯೊದಲ್ಲಿ ಕಾಣಬಹುದಾಗಿದೆ. ಈಗಾಗಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಭಾರತ ಈ ಪಂದ್ಯವನ್ನು ಗೆದ್ದು ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಆತ್ಮವಿಶ್ವಾಸದಲ್ಲಿದೆ.
ಅಭ್ಯಾಸ ಆರಂಭ
ಪುಣೆ ತಲುಪಿರುವ ಭಾರತ ತಂಡದ ಆಟಗಾರರು ಇಂದು(ಸೋಮವಾರ) ರಾತ್ರಿಯ ವೇಳೆ ಅಭ್ಯಾಸ ನಡೆಸಲಿದ್ದಾರೆ. ಡೆಂಗ್ಯೂ ಜ್ವರದಿಂದ ಚೇತರಿಕೆ ಕಂಡು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಲಿಳಿದ ಶುಭಮನ್ ಗಿಲ್ಗೆ ಹೆಚ್ಚಿನ ಬ್ಯಾಟಿಂಗ್ ಅಭ್ಯಾಸ ನಡೆಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಏಕೆಂದರೆ ಅವರು ಇನ್ನೂ ಕೂಡ ಕೊಂಚ ಫಿಟ್ ಆಗಬೇಕಿದೆ.
Ahmedabad ✅
— BCCI (@BCCI) October 15, 2023
Touchdown Pune 📍#CWC23 | #TeamIndia | #MeninBlue | #INDvBAN pic.twitter.com/ztXQzhO0y4
ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ. ರಾಹುಲ್ ಸೇರಿ ಎಲ್ಲ ಆಟಗಾರರು ಉತ್ತಮ ಫಾರ್ಮ್ನಲ್ಲಿದ್ದಾರೆ. ಚಿಂತೆ ಇರುವುದು ಶಾರ್ದೂಲ್ ಠಾಕೂರ್. ಅವರನ್ನು ಆಡಿಸುವ ಬದಲು ಮೊಹಮ್ಮದ್ ಶಮಿ ಅವರಿಗೆ ಅವಕಾಶ ನೀಡಿದರೆ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಶಾರ್ದೂಲ್ಗೆ ಅವಕಾಶ ನೀಡಿದರೂ ಅವರಿಂದ ತಂಡಕ್ಕೆ ಯಾವುದೇ ಪ್ರಯೋಜವಾಗುತ್ತಿಲ್ಲ. ಅವರಿಗೆ ನೀಡುತ್ತಿರುವು ಕೇವಲ ಒಂದೆರಡು ಓವರ್. ಅಲ್ಲದೆ ಬ್ಯಾಟಿಂಗ್ ಕೂಡ ನಿರೀಕ್ಷಿತ ಮಟ್ಟದಲ್ಲಿ ತೋರುತ್ತಿಲ್ಲ. ಹೀಗಿರುವಾಗ ಅನುಭವಿ ಬೌಲರ್ ಶಮಿಗೆ ಅವಕಾಶ ನೀಡಿದರೆ ತಂಡ ಮತ್ತಷ್ಟು ಬಲಿಷ್ಠಗೊಳ್ಳಲಿದೆ.
ಇದನ್ನೂ ಓದಿ Viral Video: ರನ್ ನೀಡಿದ ಸಿಟ್ಟಿನಲ್ಲಿ ಕ್ಯಾಮೆರಾ ತಳ್ಳಿಹಾಕಿದ ಇಂಗ್ಲೆಂಡ್ ಆಲ್ರೌಂಡರ್
ಭಾರತ ವಿಶ್ವಕಪ್ ತಂಡ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ,ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್, ಜಸ್ಪ್ರೀತ್, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್ , ಸೂರ್ಯಕುಮಾರ್ ಯಾದವ್.
ಭಾರತ ವಿಶ್ವಕಪ್ ಗೆಲ್ಲಲಿದೆ
ಸಂದರ್ಶನವೊಂದರಲ್ಲಿ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್, “ತವರಿನಲ್ಲಿ ನಡೆಯುತ್ತಿರುವ 2023ನೇ ಸಾಲಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕಪ್ ಗೆಲ್ಲಲಿದೆ ಎಂಬ ಸಂಪೂರ್ಣ ನಂಬಿಕೆ ಮತ್ತು ಭರವಸೆ ನನಗಿದೆ” ಎಂದು ಹೇಳಿದ್ದಾರೆ.
“2011ರ ವಿಶ್ವಕಪ್ ಇತಿಹಾಸ ಮತ್ತೆ ಮರುಕಳಿಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ತವರಿನಲ್ಲಿ ಭಾರತವನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಭಾರತ ಸೆಮಿಫೈನಲ್ ಹಂತ ದಾಟಿದ್ದೇ ಆದರೆ ಕಪ್ ತನ್ನದಾಗಿಸಿಕೊಳ್ಳುತ್ತದೆ. ಭಾರತ ತಂಡ ಅತ್ಯಂತ ಶ್ರೇಷ್ಠ ಪ್ರದರ್ಶನ ತೋರುತ್ತಿದೆ. 2019ರಲ್ಲಿಯೂ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಅದೃಷ್ಟ ಕೈಕೊಟ್ಟ ಕಾರಣ ಭಾರತ ಸೆಮಿಯಲ್ಲಿ ಸೋಲು ಕಂಡಿತು. ಎಲ್ಲ ಸಾಮರ್ಥ್ಯವಿರುವ ಭಾರತಕ್ಕೆ ಈ ಬಾರಿ ಅದೃಷ್ಟವೊಂದು ಕೈಹಿಡಿದರೆ ಕಪ್ ಗ್ಯಾರಂಟಿ” ಎಂದು ಅಖ್ತರ್ ಭವಿಷ್ಯ ನುಡಿದಿದ್ದಾರೆ.