ಹೊಸದಿಲ್ಲಿ: ಐಸಿಸಿ ಟಿ20 ವಿಶ್ವ ಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ತೀರಾ ಹೀನಾಯವಾಗಿ ಸೋತ ಭಾರತ ತಂಡ(Team India) ಮುಜುಗರ ಅನುಭವಿಸುವಂತಾಗಿದೆ. ಏಕೆಂದರೆ ಒಂದು ಕಾಲದಲ್ಲಿ ಬಲಿಷ್ಠವಾಗಿದ್ದ ತಂಡ ಇದೀಗ ಕಳೆದ ಕೆಲವು ವರ್ಷಗಳಿಂದ ಒಂದೂ ಐಸಿಸಿ ಕೂಟವನ್ನು ಗೆಲ್ಲಲು ಸಾಧ್ಯವಾಗದ ಮಟ್ಟಿಗೆ ತಲುಪಿರುವುದು ವಿಷಾದಕರ ಸಂಗತಿ ಎಂದೇ ಹೇಳಬಹುದು.
ಭಾರತ 2013ರಿಂದ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ. ಈ ಮೂಲಕ ಭಾರತ ಕ್ರಿಕೆಟ್ ತಂಡ ಕಳೆದ ಒಂದು ದಶಕದಿಂದ ಐಸಿಸಿ ಟೂರ್ನಿಗಳ ನಾಕೌಟ್ ಪಂದ್ಯಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ಮುಂದುವರಿಸಿ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನ ನೂತನ ‘ಚೋಕರ್ಸ್’ ಎಂಬ ಅಪಖ್ಯಾತಿಗೆ ಒಳಗಾಗಿದೆ.
ಐಸಿಸಿ ಟಿ20 ವಿಶ್ವ ಕಪ್ 2014 ಫೈನಲ್ | ಶ್ರೀಲಂಕಾ ವಿರುದ್ಧ ಸೋಲು |
ಐಸಿಸಿ ಏಕ ದಿನ ವಿಶ್ವ ಕಪ್ 2015 ಸೆಮಿಫೈನಲ್ | ಆಸ್ಟ್ರೇಲಿಯಾ ವಿರುದ್ಧ ಸೋಲು |
ಐಸಿಸಿ ಟಿ20 ವಿಶ್ವಕಪ್ 2016 ಸೆಮಿಫೈನಲ್ | ವೆಸ್ಟ್ ಇಂಡೀಸ್ ವಿರುದ್ಧ ಸೋಲು |
ಐಸಿಸಿ ಏಕ ದಿನ ವಿಶ್ವ ಕಪ್ 2019 ಸೆಮಿಫೈನಲ್ | ನ್ಯೂಜಿಲೆಂಡ್ ವಿರುದ್ಧ ಸೋಲು |
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ 2021 ಫೈನಲ್ | ನ್ಯೂಜಿಲೆಂಡ್ ವಿರುದ್ಧ ಸೋಲು |
ಐಸಿಸಿ ಟಿ20 ವಿಶ್ವ ಕಪ್ 2022 ಸೆಮಿಫೈನಲ್ | ಇಂಗ್ಲೆಂಡ್ ವಿರುದ್ಧ ಸೋಲು |
ಇದನ್ನೂ ಓದಿ | IND vs ENG | ಟಿ20 ವಿಶ್ವ ಕಪ್‌ನಲ್ಲಿ ಬಟ್ಲರ್- ಅಲೆಕ್ಸ್ ಹೇಲ್ಸ್ ವಿಶ್ವ ದಾಖಲೆ, ಓಪನರ್‌ಗಳ ಸಾಧನೆಯೇನು?