ಮೆಲ್ಬೋರ್ನ್: ಪಾಕಿಸ್ತಾನ ವಿರುದ್ಧದ ವಿಶ್ವ ಕಪ್ ಪಂದ್ಯದಲ್ಲಿ ರೋಚಕ ವಿಜಯ ಸಾಧಿಸುವುದರೊಂದಿಗೆ ರೋಹಿತ್ ಶರ್ಮ ನೇತೃತ್ವದ ಟೀಮ್ ಇಂಡಿಯಾ ನೂತನ ದಾಖಲೆಯೊಂದನ್ನು ಮಾಡಿದೆ. ಆಸ್ಟ್ರೇಲಿಯಾ ೨೦ ವರ್ಷಗಳ ಹಿಂದೆ ಮಾಡಿರುವ ದಾಖಲೆಯನ್ನು ಮುರಿದಿದೆ.
ಒಂದು ವರ್ಷದಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯಾ ತಂಡ ೨೦೦೩ರಲ್ಲಿ ತನ್ನೆಸರಿಗೆ ಬರೆದುಕೊಂಡಿತ್ತು. ಸ್ಟೀವ್ ವಾ ನೇತೃತ್ವದ ತಂಡ ಆ ದಾಖಲೆ ಮಾಡಿತ್ತು. ೮ ಟೆಸ್ಟ್ ಪಂದ್ಯಗಳು ಹಾಗೂ ೩೦ ಏಕ ದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಬಳಗ ಜಯ ಸಾಧಿಸಿತ್ತು. ಆ ದಾಖಲೆಯನ್ನು ಈಗ ಭಾರತ ಮುರಿದಿದೆ. ಭಾರತ ತಂಡ ಈಗ ಒಟ್ಟಾರೆ ೩೯ ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿದ್ದು, ಆಸ್ಟ್ರೇಲಿಯಾದ ಸಾಧನೆಯನ್ನು ಹಿಂದಿಕ್ಕಿದೆ.
ಟೀಮ್ ಇಂಡಿಯಾ ಈಗ ೨ ಟೆಸ್ಟ್, ೧೩ ಏಕ ದಿನ ಹಾಗೂ ೨೪ ಟಿ೨೦ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಒಟ್ಟಾರೆ ೩೯ ಪಂದ್ಯಗಳನ್ನು ಗೆದ್ದಿದೆ. ಭಾರತ ತಂಡ ಈ ವರ್ಷ ಇನ್ನೂ ಹಲವು ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದು, ಗೆಲುವಿನ ದಾಖಲೆಯನ್ನು ಇನ್ನಷ್ಟು ವಿಸ್ತರಿಸಲಿದೆ.
ಇದನ್ನೂ ಓದಿ | IND vs PAK | ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯ ಸಾಮರ್ಥ್ಯ ಮತ್ತೊಮ್ಮೆ ಸಾಬೀತು