ವೆಲ್ಲಿಂಗ್ಟನ್ : ನ್ಯೂಜಿಲೆಂಡ್ (INDvsNZ) ವಿರುದ್ದದ ಏಕ ದಿನ ಸರಣಿಯ ಏಳು ವಿಕೆಟ್‌ಗಳ ಹೀನಾಯ ಸೋಲಿಗೆ ಒಳಗಾಗಿದೆ. ಈ ಮೂಲಕ ಆತಿಥೇಯ ತಂಡದ ಸರಣಿಯಲ್ಲಿ ೧-೦ ಮುನ್ನಡೆ ಪಡೆದುಕೊಂಡಿದೆ. ಸೋಲಿನ ನಿರಾಸೆಯ ಹೊರತಾಗಿಯೂ ಭಾರತ ತಂಡದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್, ಸ್ಲಾಗ್ ಓವರ್‌ನಲ್ಲಿ ನೀಡಿದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದೆ. ಇದೆ ವೇಳೆ ಭಾರತದ ಇಬ್ಬರು ಬ್ಯಾಟರ್‌ಗಳ ದಾಖಲೆಯನ್ನು ಮುರಿದಿದ್ದಾರೆ.
ವಾಷಿಂಗ್ಟನ್ ಸುಂದರ್ ಕೊನೇ ಹಂತದಲ್ಲಿ ೧೬ ಎಸೆತಗಳಲ್ಲಿ ೩೭ ರನ್ ಬಾರಿಸಿದ್ದಾರೆ. ಈ ವೇಳೆ ಅವರು 231.25 ಸ್ಟ್ರೈಕ್‌ರೇಟ್‌ನಂತೆ ಬ್ಯಾಟ್ ಬೀಸಿದ್ದರು. ಅವರ ವೇಗದ ರನ್‌ಗಳಿಂದಾಗಿ ಭಾರತ ತಂಡ ೩೦೦ ರನ್‌ಗಳ ಗಡಿ ದಾಟಿತ್ತು. ಈ ಮೂಲಕ ನ್ಯೂಜಿಲೆಂಡ್ ನೆಲದಲ್ಲಿ ಗರಿಷ್ಠ ಸ್ಟ್ರೈಕ್‌ರೇಟ್‌ನಲ್ಲಿ ೩೦ ಪ್ಲಸ್ ರನ್ ಬಾರಿಸಿದ ಬ್ಯಾಟರ್ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡರು. ಇದಕ್ಕಿಂತ ಹಿಂದೆ ಭಾರತ ತಂಡದ ಅಲ್‌ರೌಂಡರ್ ಸುರೇಶ್ ರೈನಾ ೧೮ ಎಸೆತಗಳಿಗೆ ೩೮ ರನ್ ಬಾರಿಸಿದ್ದರು. ಅವರು ೨೧೧.೧ ಸ್ಟ್ರೈಕ್ ರೇಟ್‌ನಂತೆ ಬ್ಯಾಟ್ ಬೀಸಿದ್ದರು. ಈ ಮೂಲಕ ೨೦೦೯ರಲ್ಲಿ ರೈನಾ ಅವರು ಸೃಷ್ಟಿಸಿದ್ದ ದಾಖಲೆಯನ್ನು ವಾಷಿಂಗ್ಟನ್ ಸುಂದರ್ ಮುರಿದರು. ಅಂತೆಯೇ ೧೯೯೨ರಲ್ಲಿ ಕಪಿಲ್ ದೇವ್ ಅವರು ೨೦೬. ೨೫ ಸ್ಟ್ರೈಕ್‌ರೇಟ್‌ನಂತೆ ಬ್ಯಾಟ್ ಬೀಸಿದ ದಾಖಲೆಯನ್ನೂ ಚಿಂದಿ ಮಾಡಿದರು.
“ನಾನು ಯೋಜನೆಯಂತೆ ಬ್ಯಾಟ್ ಬೀಸಿದೆ. ಹೀಗಾಗಿ ಕೊನೇ ಹಂತದಲ್ಲಿ ಅಗತ್ಯ ರನ್‌ಗಳನ್ನು ಪೇರಿಸಲು ಸಾಧ್ಯವಾಯಿತು. ನಾವು ಚೆನ್ನಾಗಿ ಬೌಲಿಂಗ್ ಮಾಡಿದ್ದರೆ ಪಂದ್ಯವನ್ನು ಗೆಲ್ಲಬಹುದಾಗಿತ್ತು,” ಎಂಬುದಾಗಿ ವಾಷಿಂಗ್ಟನ್ ಸುಂದರ್ ಪಂದ್ಯದ ಬಳಿಕ ಹೇಳಿದ್ದಾರೆ.
ಇದನ್ನೂ ಓದಿ | IND VS NZ | ಲ್ಯಾಥಮ್, ವಿಲಿಯಮ್ಸನ್ ಬ್ಯಾಟಿಂಗ್ ಆರ್ಭಟಕ್ಕೆ ಮಂಕಾದ ಟೀಮ್ ಇಂಡಿಯಾ; 7 ವಿಕೆಟ್ ಸೋಲು