ಅಡಿಲೇಡ್ : ಟಿ೨೦ ವಿಶ್ವ ಕಪ್‌ನಲ್ಲಿ ಭಾರತ ತಂಡದ ಅಭಿಯಾನ ಕೊನೆಗೊಂಡಿದೆ. ಇಂಗ್ಲೆಂಡ್ ವಿರುದ್ಧದ (IND vs ENG) ಸೆಮಿ ಫೈನಲ್ ಪಂದ್ಯದಲ್ಲಿ ೧೦ ವಿಕೆಟ್ ಹೀನಾಯ ಸೋಲು ಅನುಭವಿಸುವ ಮೂಲಕ ನಿರಾಸೆ ಎದುರಿಸಿತು. ಈ ಮೂಲಕ ಸತತ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಟೀಮ್ ಇಂಡಿಯಾ ಮತ್ತೆ ಎಡವಿತು. ಏತನ್ಮಧ್ಯೆ, ಸೆಮಿ ಫೈನಲ್ ಪಂದ್ಯದಲ್ಲಿ ಸೋಲುತ್ತಿದ್ದಂತೆ ಭಾರತ ತಂಡದ ನಾಯಕ ರೋಹಿತ್ ಶರ್ಮ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.
ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟರ್‌ಗಳಾದ ಜೋಸ್ ಬಟ್ಲರ್ (೮೦) ಹಾಗೂ ಅಲೆಕ್ಸ್ ಹೇಲ್ಸ್ (೮೬) ಅಜೇಯ ಅರ್ಧ ಶತಕಗಳನ್ನು ಬಾರಿಸುವ ಮೂಲಕ ಭಾರತ ನೀಡಿದ್ದ ೧೬೯ ರನ್‌ಗಳ ಗುರಿಯನ್ನು ೧೬ ಓವರ್‌ನಲ್ಲೇ ಮೀರಿ ನಿಂತರು. ಭಾರತ ತಂಡ ಗೆಲುವು ಸಾಧಿಸುತ್ತಿದ್ದಂತೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಡಗ್‌ಔಟ್‌ನಲ್ಲಿ ಕುಳಿತು ಕಣ್ಣೀರು ಹಾಕಿದರು. ಬಳಿಕ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಸಮಾಧಾನ ಮಾಡಿದರು.
ರೋಹಿತ್ ಶರ್ಮ ಅವರಿಗೆ ಇದೇ ಕೊನೇ ಟಿ೨೦ ಟೂರ್ನಿ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಸೆಮಿಫೈನಲ್ ಸೋಲು ಹೆಚ್ಚು ನಿರಾಸೆ ಮೂಡಿಸಿರಬಹುದು. ಅಂತೆಯೇ ಹಾಲಿ ವಿಶ್ವ ಕಪ್‌ನಲ್ಲಿ ಅವರು ಫಾರ್ಮ್ ಕಳೆದುಕೊಂಡು ಸಮಸ್ಯೆ ಎದುರಿಸಿದ್ದರು. ಹೀಗಾಗಿ ಸೋಲಿನ ಭಾವ ಹೆಚ್ಚಾಗಿ ಕಾಡಿದೆ.
ಹಿಂದೆಯೂ ಅತ್ತಿದ್ದರು
ರೋಹಿತ್ ಶರ್ಮ ೨೦೧೯ರ ಏಕ ದಿನ ವಿಶ್ವ ಕಪ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಸೋತಾಗಲೂ ಅತ್ತಿದ್ದರು. ಆ ವೇಳೆ ಮಹೇಂದ್ರ ಸಿಂಗ್ ಧೋನಿ ರನ್‌ಔಟ್ ಆಗುವ ಮೂಲಕ ಭಾರತ ತಂಡದ ಗೆಲ್ಲುವ ಅವಕಾಶ ಇಲ್ಲದಾಗಿತ್ತು. ಈ ವೇಳೆ ರೋಹಿತ್ ಅತ್ತಿದ್ದರು.
ಇದನ್ನೂ ಓದಿ | IND vs ENG | ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಸೋಲು, ಟೀಮ್ ಇಂಡಿಯಾದ ವಿಶ್ವ ಕಪ್ ಅಭಿಯಾನ ಅಂತ್ಯ