Site icon Vistara News

Team India | ಪಾಕ್‌ ಸೋಲಿಸಿದ ಟೀಮ್‌ ಇಂಡಿಯಾ ಸದಸ್ಯರಿಂದ ಸಿಡ್ನಿಯಲ್ಲಿ ದೀಪಾವಳಿ ಸಂಭ್ರಮ

ಸಿಡ್ನಿ: ಮೆಲ್ಬೋರ್ನ್​ನಲ್ಲಿ ಪಾಕ್​ ವಿರುದ್ಧ ಗೆದ್ದ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ ಇದೀಗ ದೀಪಾವಳಿ ಹಬ್ಬದ ಸಂಭ್ರಮದಲ್ಲಿದೆ. ಮೆಲ್ಬೋರ್ನ್​​ನಲ್ಲಿ ರಾತ್ರಿ ಇಡೀ ಸಂಭ್ರಮಿಸಿದ ಆಟಗಾರರು ಬಳಿಕ ಸಿಡ್ನಿಯತ್ತ ಪ್ರಯಾಣ ಬೆಳೆಸಿದ್ದಾರೆ. ಕುಟುಂಬ ಸಮೇತ ಅಲ್ಲಿಗೆ ತೆರಳಿರುವ ಆಟಗಾರರು ದೀಪಗಳ ಹಬ್ಬವನ್ನು ಆಚರಿಸುತ್ತಿದ್ದಾರೆ.

ಪಾಕ್​ ಎದುರು ಅಬ್ಬರಿಸಿದ ಭಾರತ ತಂಡ, ಅದೇ ಖುಷಿಯಲ್ಲಿ ರಾತ್ರಿ ಇಡೀ ಸೆಲೇಬ್ರೇಷನ್​ ಮಾಡಿತ್ತು ಟೀಮ್‌ ಇಂಡಿಯಾ. ಕಳೆದ ವರ್ಷದ ಸೋಲಿಗೆ ಪ್ರತಿಕಾರವನ್ನ ತೀರಿಸಿಕೊಂಡ ರೋಹಿತ್​ ಪಡೆ ಅಭಿಮಾನಿಗಳಿಗೂ ದೀಪಾವಳಿಯ ರಂಗನ್ನು ಹೆಚ್ಚಿಸಿದೆ.

ಸಿಡ್ನಿಯಲ್ಲಿ ನೆದರ್ಲೆಂಡ್ಸ್​ ಎದುರಾಳಿ

ಭಾರತ ತಂಡ ಮುಂದಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಗುರುವಾರ ಎದುರಿಸಲಿದೆ. ಇದಕ್ಕಾಗಿ ಮೂರು ದಿನ ಮುಂಚಿತವಾಗಿಯೇ ಸಿಡ್ನಿ ತಲುಪಿರುವ ಬ್ಲೂ ಬಾಯ್ಸ್, ಇದೇ ಟೈಮ್​ನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ. ಡಬಲ್ ಸಂಭ್ರಮದಲ್ಲಿರುವ ಟೀಮ್ ಇಂಡಿಯಾ ಆಟಗಾರರು, ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದ್ದಾರೆ. ಟೀಂ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ , ಕೆ.ಎಲ್​ ರಾಹುಲ್, ರೋಹಿತ್ ಶರ್ಮ, ಆಲ್​ರೌಂಡರ್​​ಗಳಾದ ದೀಪಕ್​ ಹೂಡಾ, ರವೀಂದ್ರ ಜಡೇಜಾ ಶುಭ ಹಾರೈಸಿದ್ದಾರೆ.. ಜತೆಗೆ ಆಸ್ಟ್ರೇಲಿಯಾ ತಂಡದ ದಿಗ್ಗಜ ಬ್ರೆಟ್​ ಲೀ ದೀಪವಾಳಿಗೆ ವಿಷ್​ ಮಾಡಿದ್ದಾರೆ.. ಅಲ್ಲದೆ, ಟಿ20 ವಿಶ್ವಕಪ್​ಗೆ ಆತಿಥ್ಯ ವಹಿಸಿಕೊಂಡಿರುವ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ವಿಷ್ ಮಾಡಿದೆ.

ಇದನ್ನೂ ಓದಿ | Team India | ಪಾಕ್‌ ವಿರುದ್ಧ ಗೆದ್ದು ನೂತನ ವಿಶ್ವ ದಾಖಲೆ ಬರೆದ ಟೀಮ್‌ ಇಂಡಿಯಾ

Exit mobile version