ಬೆಂಗಳೂರು: ಇದೇ ತಿಂಗಳು ಚೀನದ ಹ್ಯಾಂಗ್‌ಝೂನಲ್ಲಿ 19ನೇ ಏಷ್ಯನ್ ಗೇಮ್ಸ್(asian games) ನಡೆಯಲಿದೆ. ಕ್ರಿಕೆಟ್ ಸ್ಪರ್ಧೆ ಇಂತಹ ಕೂಟಗಳಲ್ಲಿ ಪದಕ ಸ್ಪರ್ಧೆಯಾಗಿ ನಡೆದಿರುವುದು ಕೇವಲ ಎರಡು ಸಲ ಮಾತ್ರ. ಈ ಬಾರಿಯ ಗೇಮ್ಸ್‌ನಲ್ಲಿ ಭಾರತದ ಕ್ರಿಕೆಟ್ ತಂಡ ಮೊದಲ ಬಾರಿ ಆಡುತ್ತಿದೆ. ಟೂರ್ನಿ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರ ವರೆಗೆ ನಡೆಯಲಿದೆ.
ಋತುರಾಜ್ ಗಾಯಕ್ವಾಡ್ ಸಾರಥ್ಯದಲ್ಲಿ ಟೀಮ್ ಇಂಡಿಯಾ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಸೋಮವಾರದಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಎಲ್ಲ ಆಟಗಾರರು ಅಭ್ಯಾಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಸದ್ಯ ಈ ಟೂರ್ನಿಗೆ ಭಾರತ ತಂಡ ಜೆರ್ಸಿ ಬಿಡುಗಡೆಗೊಂಡಿದೆ. ‘ಇಂಡಿಯಾ’ ಎಂದು ಬರೆದಿರುವ ಜೆರ್ಸಿಯಲ್ಲಿ ನಾಯಕ ಗಾಯಕ್ವಾಡ್, ಸಿಕ್ಸರ್ ಕಿಂಗ್ ಖ್ಯಾತಿಯ ರಿಂಕು ಸಿಂಗ್, ಯಶಸ್ವಿ ಜೈಸ್ವಾಲ್ ಮಿಂಚಿದ್ದಾರೆ.
ನಟ್ಟಿಗರಿಂದ ಮೆಚ್ಚುಗೆ
ಏಷ್ಯನ್ ಗೇಮ್ಸ್ಗೆ ಭಾರತ ಕ್ರಿಕೆಟ್ ತಂಡದ ಜೆರ್ಸಿಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ನಮ್ಮ ದೇಶ, ನಮ್ಮ ಬಣ್ಣ'(our country our colours) ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ವಿಶ್ವಕಪ್ ಟೂರ್ನಿಗೂ ಇದೇ ಜೆರ್ಸಿಯಲ್ಲಿ ಭಾರತ ತಂಡ ಕಣಕ್ಕಿಳಿಯಲಿ ಎಂದು ಸಲಹೆ ನೀಡಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಇಷ್ಟರವರೆಗೆ ಕೇವಲ ಎರಡು ಬಾರಿ ಕ್ರಿಕೆಟ್ ಸ್ಪರ್ಧೆ ನಡೆದಿದೆ. 2010 (ಗ್ವಾಂಗ್‌ಝೂ) ಮತ್ತು 2014 (ಇಂಚಿಯಾನ್)ರ ಗೇಮ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆ ನಡೆದಿದ್ದು ಇಲ್ಲಿ ಕ್ರಮವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಚಿನ್ನದ ಪದಕ ಗೆದ್ದಿತ್ತು. ಮಹಿಳೆಯರ ವಿಭಾಗದಲ್ಲಿ ಪಾಕಿಸ್ತಾನ ಎರಡೂ ಆವೃತ್ತಿಯಲ್ಲಿ ಚಿನ್ನ ಗೆದ್ದು ಮೆರೆದಾಡಿತ್ತು.
ಇದನ್ನೂ ಓದಿ Asian Games: ಚೀನಾಕ್ಕೆ ತೆರಳಿದ ಭಾರತೀಯ ಅಥ್ಲೀಟ್‌ಗಳು
ಭಾರತ ತಂಡ
ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿ.ಕೀ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭಸಿಮ್ರಾನ್ ಸಿಂಗ್ (ವಿ.ಕೀ)
ಸ್ಟ್ಯಾಂಡ್‌ಬೈ ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್
38 ವಿಭಾಗಗಳಲ್ಲಿ ಸ್ಪರ್ಧೆ
ಭಾರತ ಒಟ್ಟು 38 ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿಯಲಿದೆ. ಈ 634 ಕ್ರೀಡಾಪಟುಗಳ(634 athletes) ಯಾದಿಯಲ್ಲಿ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನ ಗರಿಷ್ಠ 65 ಆ್ಯತ್ಲೀಟ್‌ಗಳಿದ್ದಾರೆ. ಇವರಲ್ಲಿ 34 ಪುರುಷರು ಹಾಗೂ 31 ವನಿತೆಯರು. ಅನಂತರದ ಸ್ಥಾನ ಫುಟ್‌ಬಾಲ್ ಮತ್ತು ಹಾಕಿ ತಂಡಗಳಿಗೆ ಸಲ್ಲುತ್ತದೆ. ಎರಡೂ ಫುಟ್‌ಬಾಲ್ ತಂಡಗಳು ಸ್ಪರ್ಧಿಸಲಿದ್ದು, ಇಲ್ಲಿನ ಆಟಗಾರರ ಸಂಖ್ಯೆ 44. ಹಾಕಿಪಟುಗಳ ಒಟ್ಟು ಸಂಖ್ಯೆ 36. ಪುರುಷರ ಹಾಗೂ ವನಿತೆಯರ ಕ್ರಿಕೆಟ್ ತಂಡಗಳೂ ಪದಕ ಸ್ಪರ್ಧೆಗೆ ಇಳಿಯಲಿವೆ. ಒಂದೊಂದು ತಂಡದಲ್ಲಿ 15 ಸದಸ್ಯರಿದ್ದಾರೆ. ಸೈಲಿಂ ಗ್‌ನಲ್ಲಿ 33, ಶೂಟಿಂಗ್‌ನಲ್ಲಿ 30 ಸ್ಪರ್ಧಿಗಳಿದ್ದಾರೆ.