Site icon Vistara News

Team India : ಟೀಮ್​ ಇಂಡಿಯಾದ ಹೊಸ ಜೆರ್ಸಿ ರೇಟ್​ ದುಬಾರಿ, ಆದ್ರೂ ಖರೀದಿಗೆ ಮುಗಿಬಿದ್ದ ಅಭಿಮಾನಿಗಳು!

Adidas kit ffor Team India

#image_title

ಮುಂಬಯಿ: ಜನಪ್ರಿಯ ಕ್ರೀಡಾ ಉಡುಪು ತಯಾರಕ ಕಂಪನಿಯಾಗಿರುವ ಅಡಿಡಾಸ್ ಸಹಯೋಗದೊಂದಿಗೆ ಬಿಸಿಸಿಐ ಎಲ್ಲಾ ಮೂರು ಮಾದರಿಯ ಕ್ರಿಕೆಟ್​​ಗೆ ಟೀಮ್​ ಇಂಡಿಯಾ ಜೆರ್ಸಿಗಳನ್ನು ಅನಾವರಣಗೊಳಿಸಿದೆ. ಪುರುಷರ ಮತ್ತು ಮಹಿಳಾ ರಾಷ್ಟ್ರೀಯ ತಂಡಗಳ ಕಿಟ್ ಪ್ರಾಯೋಜಕರಾಗಿ ಐದು ವರ್ಷಗಳ ಒಪ್ಪಂದವನ್ನು ಅಡಿಡಾಸ್​ ಜತೆ ಬಿಸಿಸಿಐ ಮಾಡಿಕೊಂಡಿದೆ. ಹೀಗಾಗಿ 2028ರವರೆಗೆ ಭಾರತೀಯ ಕ್ರಿಕೆಟ್​ ತಂಡದ ಆಟಗಾರರು ಅಡಿಡಾಸ್​ ವಿನ್ಯಾಸ ಮಾಡಿರುವ ಜೆರ್ಸಿಯಲ್ಲಿ ಕಂಗೊಳಿಸಲಿದ್ದಾರೆ.

ಭಾರತೀಯ ಕ್ರಿಕೆಟ್​ ತಂಡದ ಆಟಗಾರರ ಹೊಸ ಜೆರ್ಸಿಯ ಹೆಗಲ ಮೇಲೆ ಅಡಿಡಾಸ್​ನ ಲೋಗೊವಾಗಿರುವ ಮೂರು ಪಟ್ಟಿಗಳು ಕಾಣುವಂತೆ ಇಡಲಾಗಿದೆ. ಅದುವೆ ಕಿಟ್​ನ ಹೈಲೈಟ್ ಎನಿಸಿದೆ. ಇದೀಗ ಆ ಜೆರ್ಸಿಗಳ ಬೆಲೆಗಳನ್ನು ಅಧಿಕೃತವಾಗಿ ತಮ್ಮ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ ಅಡಿಡಾಸ್​. ಡಿಸೈನರ್ ಅಕ್ವಿಬ್ ವಾನಿ ಈ ಜೆರ್ಸಿಗಳ ವಿನ್ಯಾಸ ಮಾಡಿದ್ದಾರೆ.

ಗುರುವಾರ (ಜೂನ್ 1ರಂದು) ಬಿಸಿಸಿಐ ಮತ್ತು ಕ್ರೀಡಾ ಉಡುಪು ತಯಾರಕರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ಮುಂಬೈನ ವಾಂಖೆಡೆ ಕ್ರೀಡಾಂಗಣವನ್ನು ಹಿನ್ನೆಯಾಗಿಟ್ಟುಕೊಂಡು ವಿಡಿಯೊ ಬಿಡುಗಡೆ ಮಾಡಿತ್ತು. ಆ ಮೂಲಕ ಹೊಸ ಜೆರ್ಸಿಯನ್ನು ಪರಿಚಯ ಮಾಡಿತ್ತು. ಅದೇ ರೀತಿ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ತಂಡಗಳ ಆಟಗಾರರು ಕಿಟ್​ಗಳ ಧರಿಸಿ ಪೋಸ್​ ಕೊಡುವ ಮೂಲಕ ಕಿಟ್​​ಗಳನ್ನು ಪರಿಚಯಿಸಿದ್ದರು.

ಎಲ್ಲಿ ಖರೀದಿಸಬೇಕು?

ಹೊಸ ಕಿಟ್ ಖರೀದಿಸಲು ಅಭಿಮಾನಿಗಳು ಅಧಿಕೃತ ಅಡಿಡಾಸ್ ಅಪ್ಲಿಕೇಶನ್ ಮತ್ತು ವೆಬ್​ಸೈಟ್​​ಗೆ ಪ್ರವೇಶ ಮಾಡಬೇಕಾಗುತ್ತದೆ. ಆದಾಗ್ಯೂ, ಮಾರಾಟವು ಜೂನ್ 4ರ ಭಾನುವಾರ ರಾತ್ರಿ 10 ಗಂಟೆಯ ಬಳಿಕ ಆರಂಭವಾಗಲಿದೆ. ಹೀಗಾಗಿ ಕ್ರಿಕೆಟ್​ ಅಭಿಮಾನಿಗಳು ಹೊಸ ಜೆರ್ಸಿ ಖರೀದಿ ಮಾಡಲು ಕಾತರರಾಗಿ ಕಾಯುತ್ತಿದ್ದಾರೆ. ಜರ್ಸಿಗಳನ್ನು ದೇಶಾದ್ಯಂತ ಆಯ್ದ ಅಡಿಡಾಸ್ ಮಳಿಗೆಗಳಲ್ಲಿ ಮಾರಾಟ ಮಾಡುವುದಾಗಿ ಕಂಪನಿ ತಿಳಿಸಿದೆ.

ಇದನ್ನೂ ಓದಿ: Team India : ಭಾರತ ತಂಡದ ಹೊಸ ಜೆರ್ಸಿಯ ರೇಟ್​ ಕೇಳಿ ಬೆಚ್ಚಿದ ಅಭಿಮಾನಿಗಳು, ಡೂಪ್ಲಿಕೇಟ್​ ಬೆಸ್ಟ್​ ಎಂದ ನೆಟ್ಟಿಗರು!

ಮೂರು ಮಾದರಿಯ ಕ್ರಿಕೆಟ್​ನ ಕಿಟ್​ ಬೆಲೆ 4,999 ರೂಪಾಯಿ. ಅಡಿಡಾಸ್ ಏಕದಿನ ಪಂದ್ಯಗಳಿಗೆ ಫ್ಯಾನ್ ಜೆರ್ಸಿ ಮತ್ತು ಪ್ರತಿರೂಪ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ಕ್ರಮವಾಗಿ 2,999 ಮತ್ತು 999 ರೂಪಾಯಿ. ಪ್ಯಾಂಟ್​​ಗೆ 4,599 ರೂಪಾಯಿ ನಿಗದಿ ಮಾಡಲಾಗಿದೆ.

ಆನ್​​ಲೈನ್​​ನಲ್ಲಿ ಹೊಸ ಕಿಟ್ ಖರೀದಿ ಮಾಡಲು ಈ ರೀತಿ ಮಾಡಿ.

  1. ಅಧಿಕೃತ ವೆಬ್​ಸೈಟ್​​ ಅಥವಾ ಅಡಿಡಾಸ್ ಅಪ್ಲಿಕೇಶನ್​​​ಗೆ ಹೋಗಿ
  2. ಮೇಲಿನ ಟ್ಯಾಬ್​​ನಲ್ಲಿ ಕಲೆಕ್ಷನ್​ ವಿಭಾಗಕ್ಕೆ ಕ್ಲಿಕ್​ ಮಾಡಿ. ‘ಅಡಿಡಾಸ್ ಎಕ್ಸ್ ಬಿಸಿಸಿಐ ಲೋಗೋ’ ಕ್ಲಿಕ್ ಮಾಡಿ.
  3. ಪುರುಷರ ಮತ್ತು ಮಹಿಳೆಯರ ಟಿ ಶರ್ಟ್​ ಆಯ್ಕೆಯನ್ನು (ಟಿ 20 ಐ, ಏಕದಿನ, ಟೆಸ್ಟ್) ಆರಿಸಿ.
  4. ನಿಮ್ಮ ವಿಳಾಸವನ್ನು ಭರ್ತಿ ಮಾಡಿ ಮತ್ತು ಪಾವತಿ ಮಾಡಿ.
  5. ದೃಢೀಕರಣಕ್ಕಾಗಿ ಅಧಿಕೃತ ಸಂದೇಶ / ಮೇಲ್ ಕಳುಹಿಸಲಾಗುತ್ತದೆ.
Exit mobile version