Site icon Vistara News

INDvsNZ | ಮೂರನೇ ಪಂದ್ಯಕ್ಕೆ ಮೊದಲು ಟೀಮ್‌ ಇಂಡಿಯಾದ ಅಭ್ಯಾಸ ಹೇಗಿತ್ತು? ಇಲ್ಲಿವೆ ನೋಡಿ

Team India

ಕ್ರೈಸ್ಟ್‌ಚರ್ಚ್‌ : ಭಾರತ ಹಾಗೂ ನ್ಯೂಜಿಲ್ಯಾಂಡ್‌ ತಂಡಗಳ ನಡುವಿನ ಏಕ ದಿನ ಸರಣಿಯ ಕೊನೇ ಪಂದ್ಯ ಬುಧವಾರ (ನವೆಂಬರ್‌ ೩೦) ನಡೆಯಲಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡ ಗೆಲುವು ಸಾಧಿಸಿದ್ದು, ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೀಗಾಗಿ ಮೂರನೇ ಪಂದ್ಯ ಭಾರತ ಪಾಲಿಗೆ ನಿರ್ಣಾಯಕ. ಸೋತರೆ ಸರಣಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಗೆದ್ದರೆ ಸಮಬಲದ ಸಾಧನೆ ಮಾಡಿಕೊಂಡು ಮರ್ಯಾದೆ ಉಳಿಸಿಕೊಳ್ಳಬಹುದು. ಹೀಗಾಗಿ ಭಾರತ ತಂಡದ ಆಟಗಾರು ಕ್ರೈಸ್ಟ್‌ ಚರ್ಚ್‌ನಲ್ಲಿ ಸತತವಾಗಿ ಅಭ್ಯಾಸ ನಡೆಸಿದ್ದಾರೆ. ಆ ಸಂದರ್ಭದ ಚಿತ್ರಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದೆ.

ನ್ಯೂಜಿಲ್ಯಾಂಡ್‌ ಪ್ರವಾಸದಲ್ಲಿನ ಟಿ೨೦ ಸರಣಿಯನ್ನು ಭಾರತ ತಂಡ ೨-೦ ಅಂತರದಿಂದ ವಶ ಪಡಿಸಿಕೊಂಡಿತ್ತು. ಅಂತೆಯೇ ಏಕ ದಿನ ಸರಣಿಯನ್ನೂ ವಶಪಡಿಸಿಕೊಳ್ಳುವ ಉಮೇದಿನಲ್ಲಿತ್ತು. ಆದರೆ, ಮೊದಲ ಪಂದ್ಯದ ಸೋಲು ನಿರೀಕ್ಷೆಗೆ ಅಡ್ಡಿಪಡಿಸಿತ್ತು. ಮಳೆಯಿಂದಾಗಿ ಸರಣಿ ಗೆಲ್ಲುವ ಅವಕಾಶ ಇಲ್ಲದಾಗಿದೆ. ಅದರೆ, ಈ ಪಂದ್ಯ ಗೆದ್ದು ಮರ್ಯಾದೆ ಉಳಿಸಿಕೊಳ್ಳಬಹುದು.

ಇದನ್ನೂ ಓದಿ | Team India | ಸಚಿನ್, ಸೆಹ್ವಾಗ್‌ ಬೌಲ್‌ ಮಾಡುತ್ತಿದ್ದರು, ಇವರಿಗೆ ಏನಾಗಿದೆ; ಚೋಪ್ರಾ ಪ್ರಶ್ನಿಸಿದ್ದು ಯಾರಿಗೆ?

Exit mobile version