Site icon Vistara News

Team India: ಲಂಕಾ ಸರಣಿಗೂ ಮುನ್ನವೇ ಟೀಮ್​ ಇಂಡಿಯಾ ಜೆರ್ಸಿಯಲ್ಲಿ ಮಹತ್ವದ ಬದಲಾವಣೆ

Team India

Team India:World champions Team India unveil new T20I jersey ahead of Sri Lanka series

ಕೊಲಂಬೊ: ಶ್ರೀಲಂಕಾ(Sri Lanka series) ವಿರುದ್ಧದ ಟಿ20 ಸರಣಿಗೆ ಭಾರತ ತಂಡ(Team India) ಫೋಟೋಶೂಟ್​ ಮಾಡಿದೆ. ಜೆರ್ಸಿಯಲ್ಲಿ ಮಹತ್ವದ ಬದಲಾವಣೆಯೊಂದನ್ನು ಮಾಡಲಾಗಿದೆ. ಜೆರ್ಸಿಯಲ್ಲಿ(Team India unveil new T20I jersey) 2 ಸ್ಟಾರ್​ಗಳನ್ನು ಅಳವಡಿಸಲಾಗಿದೆ. ಈ ಹಿಂದೆ ಟಿ20 ವಿಶ್ವಕಪ್​ ವೇಳೆ ಒಂದು ಸ್ಟಾರ್ ಮಾತ್ರ ಇತ್ತು. ಇದೀಗ ಭಾರತ ತಂಡದ ಎರಡು ಟಿ20 ವಿಶ್ವಕಪ್​ ಗೆಲುವಿನ ಸಂಕೇತವಾಗಿ ಈ ಎರಡು ಸ್ಟಾರ್‌ಗಳನ್ನು ಹಾಕಲಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿ ಜುಲೈ 27 ರಿಂದ ಆರಂಭವಾಗಲಿದೆ.

ನೂತನ ನಾಯಕ ಸೂರ್ಯಕುಮಾರ್​ ಯಾದವ್​, ಉಪನಾಯಕ ಶುಭಮನ್​ ಗಿಲ್​, ಹಾರ್ದಿಕ್ ಪಾಂಡ್ಯ, ಅಕ್ಷರ್​ ಪಟೇಲ್​ ಸೇರಿ ತಂಡದ ಎಲ್ಲ ಆಟಗಾರರು ನೂತನ ಜೆರ್ಸಿಯಲ್ಲಿ ಕಂಗೊಳ್ಳಿಸಿದರು. ಆಟಗಾರರ ಫೋಟೋಶೂಟ್​ನ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಲೈಟ್ಸ್​, ಕ್ಯಾಮೆರಾ, ಹೆಡ್‌ಶಾಟ್ ಎಂದು ಬರೆದುಕೊಂಡಿದೆ.​

ನೂತನ ಕೋಚ್​ ಗೌತಮ್ ಗಂಭೀರ್(Gautam Gambhir) ಅವರ ಉಸ್ತುವಾರಿಯಲ್ಲಿ ಭಾರತ ತಂಡ(Team India) ಆಡುತ್ತಿರುವ ಮೊದಲ ಸರಣಿ ಇದಾಗಿದೆ. ಹೀಗಾಗಿ ನಿರೀಕ್ಷೆ ಹೆಚ್ಚಾಗಿಯೇ ಇದೆ. 2021ರ ಬಳಿಕ ಭಾರತ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ದ್ವಿಪಕ್ಷೀಯ ಸರಣಿ ಆಡಲಿದೆ. ಉಭಯ ತಂಡಗಳು ಹೊಸ ಕೋಚ್​ ಮಾರ್ಗದರ್ಶನದಲ್ಲಿ ಕಣಕ್ಕಿಳಿಯುತ್ತಿರುವುದು ವಿಶೇಷ. ಲಂಕಾ ತಂಡಕ್ಕೆ ಮಾಜಿ ಆಟಗಾರ ಸನತ್​ ಜಯಸೂರ್ಯ ಮಾರ್ಗದರ್ಶನ ನೀಡಲಿದ್ದಾರೆ.

ಪ್ರವಾಸದ ಮೊದಲ 3 ಟಿ20 ಪಂದ್ಯಗಳು ಜುಲೈ 27, 28 ಮತ್ತು 30ರಂದು ಪಲ್ಲೆಕಿಲೆಯಲ್ಲಿ ನಡೆಯಲಿವೆ. ಮೊದಲು ಪ್ರಕಟಗೊಂಡಿದ್ದ ವೇಳಾಪಟ್ಟಿಯಲ್ಲಿ 26ರಿಂದ ಟಿ20 ಪಂದ್ಯ ಆರಂಭವಾಗಬೇಕಿತ್ತು. ಏಕದಿನ ಸರಣಿ ಕೂಡ ಒಂದು ದಿನ ತಡವಾಗಿ ಶುರುವಾಗಬೇಕಿತ್ತು. ಏಕದಿನ ಆಗಸ್ಟ್​ 1ರದ ಬದಲಾಗಿ ಆಗಸ್ಟ್​ 2ರಿಂದ ಆರಂಭಗೊಳ್ಳಲಿದೆ. ಉಳಿದ ಪಂದ್ಯಗಳ ದಿನಾಂಕ ಬದಲಾಗಲಿಲ್ಲ. ಈ ಹಿಂದಿನಂತೆ ಆಗಸ್ಟ್​ 4 ಮತ್ತು 7ರಂದೇ ನಡೆಯಲಿದೆ.

ಇದನ್ನೂ ಓದಿ IND vs SL: ಭಾರತ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟಿಸಿದ ಶ್ರೀಲಂಕಾ

ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿ.ಕೀ ), ಸಂಜು ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ , ಅರ್ಶದೀಪ್​ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್​ ಸಿರಾಜ್.

ಏಕದಿನ ತಂಡ: ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿ.ಕೀ), ರಿಷಬ್ ಪಂತ್ (ವಿ.ಕೀ), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

Exit mobile version