Site icon Vistara News

Virat Kohli | ವಿರಾಟ್‌ ಕೊಹ್ಲಿಗೆ ವಿಶೇಷ ಸಂದೇಶವುಳ್ಳ ಜರ್ಸಿ ಗಿಫ್ಟ್ ಕೊಟ್ಟ ಹಾಂಕಾಂಗ್ ತಂಡದ ಸದಸ್ಯರು

virat kohli

ದುಬೈ : ಭಾರತ ತಂಡದ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿ (Virat Kohli) ಫಾರ್ಮ್‌ಗೆ ಮರಳಿದ್ದಾರೆ. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ೩೫ ರನ್‌ ಬಾರಿಸಿದ್ದ ಅವರು ಹಾಂಕಾಂಗ್‌ ವಿರುದ್ಧ ಅಜೇಯ ೫೯ ರನ್‌ ಬಾರಿಸಿದ್ದಾರೆ. ಈ ಸಂಗತಿ ವಿರಾಟ್‌ ಕೊಹ್ಲಿ ಅಭಿಮಾನಿಗಳಿಗೆ ಸಾಕಷ್ಟು ಖುಷಿ ಕೊಟ್ಟಿದೆ. ಈ ವಿಚಾರ ಭಾರತದವರಿಗೆ ಮಾತ್ರ ಖುಷಿಯ ಸಂಗತಿಯಾಗಿ ಉಳಿದಿಲ್ಲ. ಎದುರಾಳಿ ಹಾಂಕಾಂಗ್ ತಂಡದ ಆಟಗಾರರಿಗೂ ಸಂಭ್ರಮ ತಂದಿದೆ. ಆ ನೆನಪಿಗಾಗಿ ಅವರು ವಿರಾಟ್‌ ಕೊಹ್ಲಿಗೆ ವಿಶೇಷ ಸಂದೇಶವುಳ್ಳಿ ಜರ್ಸಿಯಲ್ಲಿ ಕೊಹ್ಲಿಗೆ ಗಿಫ್ಟ್‌ ಕೊಟ್ಟಿದ್ದಾರೆ.

ಜರ್ಸಿಯಲ್ಲಿ “ಒಂದು ಪೀಳಿಗೆಗೆ ಮಾದರಿಯಾಗಿರುವ ನಿಮಗೆ ನಮ್ಮ ಧನ್ಯವಾದಗಳು. ನಾವೆಲ್ಲರೂ ನಿಮ್ಮ ಜತೆಗಿದ್ದೇವೆ. ನಿಮಗಾಗಿ ಒಳ್ಳೆಯ ದಿನಗಳು ಕಾದಿವೆ. ನಿಮ್ಮ ಪ್ರೀತಿಯ ಹಾಂಕಾಂಗ್‌ ತಂಡ,” ಎಂದು ಬರೆಯಲಾಗಿದೆ. ಸ್ಟಾರ್ ಬ್ಯಾಟರ್‌ ಈ ಜರ್ಸಿಯ ಗಿಫ್ಟ್‌ಗೆ ಖುಷಿ ಪಟ್ಟಿದ್ದಾರೆ. ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿ ಧನ್ಯವಾದಗಳನ್ನು ತಿಳಿಸಿದ್ದಾರೆ.

“ಧನ್ಯವಾದಗಳು ಹಾಂಕಾಂಗ್‌ ಕ್ರಿಕೆಟ್. ಈ ಒಂದು ಸಂದೇಶ ಸುಂದರ ಹಾಗೂ ಆಪ್ಯಾಯಮಾನ” ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

ಹಾಂಕಾಂಗ್‌ ವಿರುದ್ಧದ ಪಂದ್ಯದಲ್ಲಿ ಭಾರತ ೨ ವಿಕೆಟ್‌ ನಷ್ಟಕ್ಕೆ ೧೯೨ ರನ್‌ ಬಾರಿಸಿತ್ತು. ವಿರಾಟ್‌ ಕೊಹ್ಲಿ ೪೪ ಎಸೆತಗಳಲಲಿ ಅಜೇಯ ೫೯ ರನ್‌ ಬಾರಿಸಿದ್ದರು.

Exit mobile version